Asianet Suvarna News Asianet Suvarna News

ಮಧು ಬಂಗಾರಪ್ಪ ಬಹುಕೋಟಿ ಒಡೆಯ : ಆಸ್ತಿ ಮೊತ್ತವೆಷ್ಟು..?

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಜೆಡಿಎಸ್ ಸ್ಪರ್ಧೆ ಮಾಡಿರುವ  ಮಧು ಬಂಗಾರಪ್ಪ ಅವರು ಕೋಟ್ಯಧಿಪತಿಯಾಗಿದ್ದಾರೆ.

Shivamogga By Poll JDS Candidate Madhu Bangarappa Assets Information
Author
Bengaluru, First Published Oct 17, 2018, 12:58 PM IST
  • Facebook
  • Twitter
  • Whatsapp

ಶಿವಮೊಗ್ಗ: ಉಪ ಚುನಾವಣೆಗೆ ಕಾಂಗ್ರೆಸ್‌ ಬೆಂಬಲಿತ ಜೆಡಿಎಸ್‌ ಅಭ್ಯರ್ಥಿ ಮಧು ಬಂಗಾರಪ್ಪ ನಾಮಪತ್ರ ಸಲ್ಲಿಕೆ ವೇಳೆ ತಮ್ಮ ಆಸ್ತಿ ವಿವರವನ್ನು ಘೋಷಣೆ ಮಾಡಿದ್ದು, ಅವರು 47,75,61,000 ಕೋಟಿ ರು. ಮೌಲ್ಯದ ಆಸ್ತಿಗೆ ಒಡೆಯರಾಗಿದ್ದಾರೆ.

ಮಧು ಬಂಗಾರಪ್ಪ ಬಳಿ 10,35,36,000 ರು. ಮೌಲ್ಯದ ಚರಾಸ್ತಿ ಹಾಗೂ 37,40,25,000 ರು. ಮೌಲ್ಯದ ಸ್ಥಿರಾಸ್ತಿ ಇದೆ. ಪತ್ನಿ ಅನಿತಾ ಬಳಿ 10,02,36,000 ರು. ಮೌಲ್ಯದ ಚರಾಸ್ತಿ ಇದೆ. ಇವರ ಪುತ್ರ ಸೂರ್ಯನ ಬಳಿ 4.30 ಕೋಟಿ ರು. ಮೌಲ್ಯದ ಸ್ಥಿರಾಸ್ತಿ ಇದೆ. 2018 ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಮಧು, 52.10 ಕೋಟಿ ರೂ. ಆಸ್ತಿ ಘೋಷಣೆ ಮಾಡಿಕೊಂಡಿದ್ದರು.

ಮಧು ಬಂಗಾರಪ್ಪ ಬಳಿ 63.60 ಲಕ್ಷ ರು. ಬೆಲೆಯ ಇನ್ನೋವಾ ಹಾಗೂ ಫಾರ್ಚೂನರ್‌ ಕಾರುಗಳಿವೆ. ವಿವಿಧ ಬ್ಯಾಂಕ್‌ ಹಾಗೂ ಸಂಸ್ಥೆಗಳಲ್ಲಿ ಮಧು ಬಂಗಾರಪ್ಪ 10.72 ಕೋಟಿ ರು. ಹಾಗೂ ಅನಿತಾ 5.22 ಕೋಟಿ ರು. ಸಾಲ ಹೊಂದಿದ್ದಾರೆ.

ಮಧು ಬಂಗಾರಪ್ಪ ಬಳಿ 1.25 ಕೋಟಿ ರು. ಮೌಲ್ಯದ ಬಂಗಾರದ ಆಭರಣಗಳಿವೆ. ಅನಿತಾ ಬಳಿ 82.73 ಲಕ್ಷ ರು. ಮೌಲ್ಯದ 1 ಕೆ.ಜಿ. ಬಂಗಾರ ಹಾಗೂ ವಜ್ರಾಭರಣಗಳಿವೆ. 7.50 ಲಕ್ಷ ರು. ಬೆಲೆ 25 ಕೆಜಿ ಬೆಳ್ಳಿಯ ವಿವಿಧ ವಸ್ತುಗಳಿವೆ ಎಂದು ಆಸ್ತಿ ವಿವರ ಘೋಷಿಸಿದ್ದಾರೆ.

Follow Us:
Download App:
  • android
  • ios