ಕಾಶ್ಮೀರದ ತೀತ್ವಾಲ್‌ನಲ್ಲಿ ನೂತನ ಶಿಲಾಮಯ ಶಾರದಾದೇವಿ ದೇವಾಲಯ ನಿರ್ಮಾಣಗೊಳ್ಳುತ್ತಿದ್ದು, ಶೃಂಗೇರಿಯಲ್ಲಿ ನಿರ್ಮಾಣಗೊಂಡಿರುವ ಶಾರದೆಯ ಪಂಚಲೋಹ ವಿಗ್ರಹವನ್ನು ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗುತ್ತಿದೆ. 

ಶೃಂಗೇರಿ (ಜ.21): ಕಾಶ್ಮೀರದ ತೀತ್ವಾಲ್‌ನಲ್ಲಿ ನೂತನ ಶಿಲಾಮಯ ಶಾರದಾದೇವಿ ದೇವಾಲಯ ನಿರ್ಮಾಣಗೊಳ್ಳುತ್ತಿದ್ದು, ಶೃಂಗೇರಿಯಲ್ಲಿ ನಿರ್ಮಾಣಗೊಂಡಿರುವ ಶಾರದೆಯ ಪಂಚಲೋಹ ವಿಗ್ರಹವನ್ನು ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗುತ್ತಿದೆ. ಇದಕ್ಕಾಗಿ, ಜನವರಿ 24ರಂದು ಶೃಂಗೇರಿಯಿಂದ ರಥಯಾತ್ರೆ ಮೂಲಕ ಈ ವಿಗ್ರಹವನ್ನು ಕೊಂಡೊಯ್ಯಲಾಗುವುದು.

24ರಂದು ಬೆಳಗ್ಗೆ 11 ಗಂಟೆಗೆ ಶೃಂಗೇರಿ ಪೀಠದಲ್ಲಿ ಜಗದ್ಗುರುಗಳು ಹಾಗೂ ಆಡಳಿತಾಧಿಕಾರಿ ಡಾ.ವಿ.ಆರ್‌.ಗೌರಿಶಂಕರ, ಕಾಶ್ಮೀರಿ ಪಂಡಿತರ ಸಮ್ಮುಖದಲ್ಲಿ ವಿಶೇಷ ಪೂಜೆ ನಡೆಯಲಿದೆ. ಬಳಿಕ, ರಥಯಾತ್ರೆಗೆ ಚಾಲನೆ ದೊರೆಯಲಿದೆ. ಬೆಂಗಳೂರಿನ ಕಾಶ್ಮೀರ ಭವನದಲ್ಲಿ ಈ ವಿಗ್ರಹವನ್ನು ಜ.24 ಹಾಗೂ 25ರಂದು ಭಕ್ತರ ದರ್ಶನಕ್ಕೆ ಇಡಲಾಗುತ್ತದೆ. 

ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್‌ ಕ್ಷೇತ್ರದಲ್ಲಿ ರಮೇಶ್‌ ಜಾರಕಿಹೊಳಿ ಸಮಾವೇಶ

ಬಳಿಕ, ಮುಂಬೈ, ಪುಣೆ, ಅಹಮದಾಬಾದ್‌, ದೆಹಲಿ ಸೇರಿ ವಿವಿಧ ರಾಜ್ಯಗಳ ಮೂಲಕ ಮಾರ್ಚ್‌ 16ರಂದು ವಿಗ್ರಹ ತೀತ್ವಾಲ್‌ ತಲುಪಲಿದೆ. ಮಾರ್ಚ್‌ 22ರ ಯುಗಾದಿಯಂದು ನೂತನ ಶಿಲಾಮಯ ಶಾರದೆಯ ದೇವಾಲಯದಲ್ಲಿ ವಿಗ್ರಹ ಪ್ರತಿಷ್ಠಾಪನೆಗೊಳ್ಳಲಿದೆ. ಬೆಂಗಳೂರಿನ ಬಿಡದಿಯ ಶಿಲ್ಪಿಗಳ ನೆರವಿನಿಂದ ಈ ದೇವಾಲಯ ನಿರ್ಮಿಸಲಾಗುತ್ತಿದ್ದು, ನೂತನ ದೇಗುಲ ನಿರ್ಮಾಣಕ್ಕೆ 2021ರ ಡಿಸೆಂಬರ್‌ 2ರಂದು ಭೂಮಿಪೂಜೆ ನಡೆಸಲಾಗಿತ್ತು. ದೇವಾಲಯ ನಿರ್ಮಾಣಕ್ಕೆ ಬಿಡದಿಯಿಂದ ಕಲ್ಲುಗಳನ್ನು ಕೊಂಡೊಯ್ಯಲಾಗಿದೆ.