ಕರ್ನಾಟಕದ ತಲಾ ಆದಾಯ ಪಟ್ಟಿ ಬಿಡುಗಡೆ: ಯಾವ ಜಿಲ್ಲೆಗೆ ಎಷ್ಟನೆ ಸ್ಥಾನ?
* ಚಿಕ್ಕಬಳ್ಳಾಪುರ ಜಿಲ್ಲೆಗೆ 20ನೇ ಸ್ಥಾನ
* ರಾಜ್ಯ ಪಟ್ಟಿಯಲ್ಲಿ ಬೆಂಗಳೂರು ನಗರ ಮೊದಲು, ಕಲಬುರುಗಿ ಕೊನೆ
* ಅಭಿವೃದ್ಧಿ ಹಣ ಎಲ್ಲಿ ಹೋಯ್ತು?
ಚಿಕ್ಕಬಳ್ಳಾಪುರ(ಮಾ.11): ಯಾವುದೇ ಪಕ್ಷಗಳ ಸರ್ಕಾರಗಳು ಬಂದು ಹೋದರೂ ಜನರ ಹಣೆ ಬರಹ ಮಾತ್ರ ಬದಲಾಗುವುದಿಲ್ಲ ಎನ್ನುವುದಕ್ಕೆ ಇದು ಒಂದು ತಾಜಾ ಉದಾಹರಣೆ. ಅಭಿವೃದ್ಧಿಗೆ ಕೋಟಿ ಕೋಟಿ ಅನುದಾನ ಸುರಿದರೂ ಜಿಲ್ಲೆಯ ಜನರ ತಲಾ ಆದಾಯ ಮಾತ್ರ ಏರುತ್ತಿಲ್ಲ.
ಹೌದು, ಇತ್ತೀಚೆಗೆ ಕರ್ನಾಟಕದಲ್ಲಿ(Karnataka) ನಡೆದಿರುವ 2019-20ನೇ ಸಾಲಿನ 30 ಜಿಲ್ಲೆಗಳ ತಲಾ ಆದಾಯ ಸಮೀಕ್ಷೆ(Per Capita Income Survey) ಹೊರ ಬಿದ್ದಿದ್ದು ಬಯಲು ಸೀಮೆಯ ಚಿಕ್ಕಬಳ್ಳಾಪುರ(Chikkaballapur) ಜಿಲ್ಲೆ ರಾಜ್ಯದ 30 ಜಿಲ್ಲೆಗಳ ಪೈಕಿ 20ನೇ ಸ್ಥಾನ ಪಡೆದುಕೊಂಡಿದೆ. ಜಿಲ್ಲೆಯ ತಲಾ ಆದಾಯ ಸಮೀಕ್ಷೆ ಪ್ರಕಾರ 1,32,417 ರು. ಮಾತ್ರ ಇದೆ. ಪಕ್ಕದ ಕೋಲಾರ(Kolar) ಜಿಲ್ಲೆ 18ನೇ ಸ್ಥಾನ ಪಡೆಯುವುದರ ಮೂಲಕ ಚಿಕ್ಕಬಳ್ಳಾಪುರಕ್ಕಿಂತ ಎರಡು ಮೆಟ್ಟಿಲು ಮುಂದಿದ್ದು ಗಮನ ಸೆಳೆದಿದೆ.
ಪ್ರಾದೇಶಿಕ ಅಸಮಾನತೆ ಕಲ್ಯಾಣದ ಸೀಮೆ ಬಿಟ್ಟು ಹೋಗಿಲ್ಲ
ಯಾವ ಜಿಲ್ಲೆಗೆ ಎಷ್ಟು ತಲಾ ಆದಾಯ?
30 ಜಿಲ್ಲೆಗಳ ಪಟ್ಟಿಯಲ್ಲಿ ಬೆಂಗಳೂರು ನಗರ(Bengaluru City) 5,41,638 ಹೊಂದಿ ಮೊದಲ ಸ್ಥಾನದಲ್ಲಿದ್ದರೆ, ದಕ್ಷಿಣ ಕನ್ನಡ ಜಿಲ್ಲೆ 71,771 ಹೊಂದಿ ಎರಡನೇ ಸ್ಥಾನದಲ್ಲಿದೆ. ಉಡುಪಿ ಜಿಲ್ಲೆ ಜನರ ತಲಾ ಆದಾಯ ಬರೋಬ್ಬರಿ 2,97,524 ಪಡೆದು ಮೂರನೇ ಸ್ಥಾನದಲ್ಲಿದೆ. 20ನೇ ಸ್ಥಾನ ಪಡೆದಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ಜನರ ತಲಾ ಆದಾಯ ಕೇವಲ 1,32,417 ಮಾತ್ರ ಇದೆ. ಪಕ್ಕದ ಕೋಲಾರ ಜಿಲ್ಲೆಯ ಜನರ ತಲಾ ಆದಾಯ 1,42,114 ಇದೆ. ಇನ್ನೂ ಜಿಲ್ಲೆಯ ಅಂಟಿಕೊಂಡಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆ ತಲಾ ಆದಾಯದಲ್ಲಿ 6ನೇ ಸ್ಥಾನದಲ್ಲಿದ್ದು ಒಟ್ಟು ಅದರ ತಲಾ ಆದಾಯ 2,05,086 ಇದೆ. ತುಮಕೂರು ಜಿಲ್ಲೆಯು 9ನೇ ಸ್ಥಾನದಲ್ಲಿದ್ದು ಅದರ ತಲಾ ಟ್ಟು 1,84,119 ಇದೆ. ಇನ್ನೂ ಕಡೆ ಸ್ಥಾನದಲ್ಲಿ ಜಿಲ್ಲೆಯ ಕಲಬುರುಗಿ, ಅದಕ್ಕಿಂತ ತುಸು ಮೇಲೆ ಕೊಪ್ಪಳ, ಬೀದರ, ಯಾದಗಿರಿ, ವಿಜಯಪುರ, ಹಾವೇರಿ ಜಿಲ್ಲೆಗಳು ಇವೆ.
karnataka govt scheme ಮನೆ ಬಾಗಿಲಿಗೆ ಕಂದಾಯ ದಾಖಲೆ: 12ಕ್ಕೆ ಜಿಲ್ಲೆಯಲ್ಲಿ ಸಿಎಂ ಚಾಲನೆ!
ಅಭಿವೃದ್ದಿ ಹಣ ಎಲ್ಲಿ ಹೋಯಿತು?
ಬಯಲು ಸೀಮೆ ಜಿಲ್ಲೆಗಳ ವ್ಯಾಪ್ತಿಗೆ ಬರುವ ಚಿಕ್ಕಬಳ್ಳಾಪುರ ಜಿಲ್ಲೆ ಹೇಳಿ ಕೇಳಿ ಬರದ ನಾಡು, ಜಿಲ್ಲೆಗೆ ಇಂದಿಗೂ ಶಾಶ್ವತ ನೀರಾವರಿ ಸೌಕರ್ಯ(Permanent Irrigation Facility) ಇಲ್ಲ. ಕೃಷಿ, ಹೈನೋದ್ಯಮ, ರೇಷ್ಮೆ ಮೂಲಕ ಲಕ್ಷಾಂತರ ಕುಟುಂಬಗಳು ಬದುಕಿ ಕಟ್ಟಿಕೊಂಡಿವೆ. ಸರ್ಕಾರಗಳು ಕೂಡ ಜಿಲ್ಲೆಯ ಜನರಿಗೆ ಉದ್ಯೋಗ ಒದಗಿಸುವತಂಹ ಯಾವುದೇ ಬೃಹತ್ ಬಿಡಿ ಸಣ್ಣ ಕೈಗಾರಿಕೆಗಳು ಜಿಲ್ಲೆಗೆ ಬಂದಿಲ್ಲ. ಶಿಕ್ಷಣದ ಮೂಲಕವೇ ಸ್ವಾವಲಂಬಿ ಬದುಕಿಗೆ ತವಕಿಸುವ ಜಿಲ್ಲೆ ಜನತೆಗೆ ಈಗಷ್ಟೇ ವೈದ್ಯಕೀಯ ಶಿಕ್ಷಣ ಕಾಲೇಜು(Medical College) ನಿರ್ಮಾಣವಾಗುತ್ತಿದೆ. ಡಾ.ನಂಜುಂಡಪ್ಪ ವರದಿ ಪ್ರಕಾರ ಚಿಕ್ಕಬಳ್ಳಾಪುರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಸಾಕಷ್ಟು ಹಿಂದುಳಿದಿದೆ. ಆದರೆ ಜಿಲ್ಲೆಯ ಅಭಿವೃದ್ದಿಗೆ ಹರಿದು ಬರುವ ಅನುದಾನ(Grant) ಎಲ್ಲಿ ಹೋಗುತ್ತಿದೆ? ಜನರ ತಲಾ ಆದಾಯ ಏರುಗತಿಯಲ್ಲಿ ಏಕಿಲ್ಲ ಎಂಬುದು ಮಾತ್ರ ಯಕ್ಷಪ್ರಶ್ನೆಯಾಗಿದ್ದು ಇದಕ್ಕೆ ಜಿಲ್ಲೆಯ ಜವಾಬ್ದಾರಿಯುತ ಸ್ಥಾನದಲ್ಲಿರುವ ಜನಪ್ರತಿನಿದಿಗಳು, ಜಿಲ್ಲಾಡಳಿತ ಉತ್ತರಿಸಬೇಕಿದೆ.
ತಲಾ ಆದಾಯ ಲೆಕ್ಕಾಚಾರ ಹೀಗೆ..
ನಿರ್ಧಿಷ್ಟ ವರ್ಷದಲ್ಲಿ ಆಯ ಜಿಲ್ಲೆಯು ಪ್ರತಿ ವ್ಯಕ್ತಿ ಗಳಿಸಿದ ಸರಾಸರಿ ಆದಾಯವನ್ನು ಅಳೆಯಲಾಗುತ್ತದೆ. ಆ ಪ್ರದೇಶದ ಒಟ್ಟು ಆದಾಯವನ್ನು ಅದರ ಒಟ್ಟು ಜನಸಂಖ್ಯೆಯಿಂದ ಭಾಗಿಸುವ ಮೂಲಕ ಇದನ್ನು ಲೆಕ್ಕ ಹಾಕಲಾಗುತ್ತದೆ. ಜನರ ಜೀವನ ಮಟ್ಟವನ್ನು ಅಳೆಯಲು ತಲಾ ಆದಾಯ ಲೆಕ್ಕ ಹಾಕಲಾಗುತ್ತದೆ.