ಜನವರಿ ತಿಂಗಳಲ್ಲಿ ರಾಜ್ಯದಲ್ಲಿ ಸಾರ್ವಕಾಲಿಕ ದಾಖಲೆಯ 11,317 ಕೋಟಿ ರು. ಜಿಎಸ್‌ಟಿ ಸಂಗ್ರಹವಾಗಿದೆ. ಇದು ಕೋವಿಡ್ ನಂತರ ರಾಜ್ಯದ ಆರ್ಥಿಕ ಸ್ಥಿತಿ ಬಲಗೊಳ್ಳುತ್ತಿದೆ ಎಂಬುದರ ಸಂಕೇತ ಹಾಗೂ ಫೆ.17ರಂದು ಮಂಡನೆ ಆಗಲಿರುವ ರಾಜ್ಯ ಬಜೆಟ್‌ಗೆ ಈ ಅಂಕಿ-ಅಂಶ ಉತ್ತೇಜನಕಾರಿ ಎಂದು ವಿಶ್ಲೇಷಿಸಲಾಗಿದೆ.
ಬೆಂಗಳೂರು (ಫೆ.12): ಜನವರಿ ತಿಂಗಳಲ್ಲಿ ರಾಜ್ಯದಲ್ಲಿ ಸಾರ್ವಕಾಲಿಕ ದಾಖಲೆಯ 11,317 ಕೋಟಿ ರು. ಜಿಎಸ್‌ಟಿ ಸಂಗ್ರಹವಾಗಿದೆ. ಇದು ಕೋವಿಡ್ ನಂತರ ರಾಜ್ಯದ ಆರ್ಥಿಕ ಸ್ಥಿತಿ ಬಲಗೊಳ್ಳುತ್ತಿದೆ ಎಂಬುದರ ಸಂಕೇತ ಹಾಗೂ ಫೆ.17ರಂದು ಮಂಡನೆ ಆಗಲಿರುವ ರಾಜ್ಯ ಬಜೆಟ್‌ಗೆ ಈ ಅಂಕಿ-ಅಂಶ ಉತ್ತೇಜನಕಾರಿ ಎಂದು ವಿಶ್ಲೇಷಿಸಲಾಗಿದೆ. ರಾಜ್ಯದಲ್ಲಿ ಡಿಸೆಂಬರ್‌ನಲ್ಲಿ 10,061 ಕೋಟಿ ರು. ಜಿಎಸ್‌ಟಿ ಸಂಗ್ರಹವಾಗಿತ್ತು. ಈ ದಾಖಲೆಯನ್ನು ಒಂದೇ ತಿಂಗಳಲ್ಲಿ ರಾಜ್ಯ ಮುರಿದಿದೆ.
ಜನವರಿಯಲ್ಲಿ ಸಂಗ್ರಹವಾದ 11,317 ಕೋಟಿ ರು. ಒಟ್ಟಾರೆ ಜಿಎಸ್‌ಟಿ ಪೈಕಿ, 6,085 ಕೋಟಿ ರು. ರಾಜ್ಯದ ಪಾಲಿನ ಜಿಎಸ್‌ಟಿ ಹಾಗೂ 5231 ಕೋಟಿ ರು. ಕೇಂದ್ರೀಯ ಜಿಎಸ್‌ಟಿ ಸಂಗ್ರಹವಾಗಿದೆ. ಇದಲ್ಲದೆ, 107.5 ಕೋಟಿ ರು. ವೃತ್ತಿಪರ ತೆರಿಗೆ ಹಾಗೂ 1716.5 ಕೋಟಿ ರು. ಪೆಟ್ರೋಲ್-ಡೀಸೆಲ್ ಮಾರಾಟ ತೆರಿಗೆ ಸಂಗ್ರಹವಾಗಿದೆ. ಇದರಿಂದ ಈ ಎಲ್ಲ ತೆರಿಗೆಗಳು ಸೇರಿದಂತೆ ಒಟ್ಟಾರೆ 13,141 ಕೋಟಿ ರು. ವಾಣಿಜ್ಯ ತೆರಿಗೆ ಸಂಗ್ರಹವಾಗಿದೆ.
ಬಿಜೆಪಿ, ಜೆಡಿಎಸ್ ಕಾಲದ ಸಾಕ್ಷಿ ಗುಡ್ಡೆಗಳೇನು: ಡಿಕೆಶಿ ಪ್ರಶ್ನೆ
ಸಿಎಂ ಹರ್ಷ: ಈ ಬಗ್ಗೆ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ‘ಜಿಎಸ್‌ಟಿ ತೆರಿಗೆ ಸಂಗ್ರಹಣೆಯಲ್ಲಿ ಕರ್ನಾಟಕ ಶೇ.30ರಷ್ಟುಬೆಳವಣಿಗೆ ಪ್ರಮಾಣ ಹೊಂದಿದ್ದು, ಅತ್ಯಧಿಕ ಬೆಳವಣಿಗೆಯ ರಾಜ್ಯವಾಗಿ ಮುಂದುವರಿದಿದೆ’ ಎಂದು ಹರ್ಷಿಸಿದ್ದಾರೆ. ಅಲ್ಲದೆ, ‘ತೆರಿಗೆ ಸಂಗ್ರಹಣೆಯಲ್ಲಿ ಸುಧಾರಣೆ, ಹೆಚ್ಚಿನ ಕಣ್ಗಾವಲು, ಆರ್ಥಿಕತೆಯಲ್ಲಿ ಚೇತರಿಕೆ ಮತ್ತು ತೆರಿಗೆದಾರರಲ್ಲಿ ಹೆಚ್ಚಿರುವ ಅನುಸರಣೆಯಿಂದಾಗಿ ಈ ಗಮನಾರ್ಹ ಸಾಧನೆ ಮಾಡಲು ಸಾಧ್ಯವಾಗಿದೆ. ಈ ಆದಾಯದ ಬೆಳವಣಿಗೆಯಿಂದ ಸರ್ಕಾರವು ಈ ವರ್ಷ ಉತ್ತಮ ಆಯವ್ಯಯ ಮಂಡಿಸಲು ಅನುವು ಮಾಡಿಕೊಡಲಿದೆ’ ಎಂದಿದ್ದಾರೆ.
