*  ಕೋವಿಡ್‌ ಪಾಸಿಟಿವಿಟಿ ದಾಖಲೆಯ ಶೇ.0.31ಕ್ಕೆ ಇಳಿಕೆ*  ಇದು ಈವರೆಗಿನ ಅತಿ ಕನಿಷ್ಠ ಪಾಸಿಟಿವಿಟಿ*  1.12 ಲಕ್ಷ ಪರೀಕ್ಷೆ ನಡೆದರೂ 357 ಕೇಸು 

ಬೆಂಗಳೂರು(ಅ.14): ರಾಜ್ಯದಲ್ಲಿ(Karnataka) ಕೋವಿಡ್‌-19 ಸಾಂಕ್ರಾಮಿಕ ಸ್ವರೂಪ ಪಡೆದುಕೊಂಡು, ಕೋವಿಡ್‌ ಪರೀಕ್ಷೆ ಸಾಮೂಹಿಕವಾಗಿ ನಡೆಯಲು ಆರಂಭಗೊಂಡ ಬಳಿಕದ ಕನಿಷ್ಠ ಪಾಸಿಟಿವಿಟಿ ದರ (ಶೇ. 0.31) ಬುಧವಾರ ದಾಖಲಾಗಿದೆ. 1.12 ಲಕ್ಷ ಪರೀಕ್ಷೆ ನಡೆದರೂ 357 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. 10 ಮಂದಿ ಮೃತರಾಗಿದ್ದಾರೆ(Death) 438 ಮಂದಿ ಚೇತರಿಸಿಕೊಂಡಿದ್ದಾರೆ.

2020ರ ಜೂನ್‌ನಿಂದ ರಾಜ್ಯದಲ್ಲಿ ಕೋವಿಡ್‌(Coronavirus) ಪ್ರಕರಣಗಳು ಹೆಚ್ಚಲು ಪ್ರಾರಂಭವಾಗಿದ್ದವು. ಕೋವಿಡ್‌ ಹರಡುವುದನ್ನು ನಿಯಂತ್ರಿಸಲು ಸರ್ಕಾರ(Government) ಆಗ ಕೋವಿಡ್‌ ಪರೀಕ್ಷೆಗಳ ಪ್ರಮಾಣವನ್ನು ಹೆಚ್ಚಿಸಿತ್ತು. ಜುಲೈ ಆರಂಭದಲ್ಲಿ ಕೋವಿಡ್‌ನ ಮೊದಲ ಅಲೆ ಎದ್ದು ನವೆಂಬರ್‌ ಹೊತ್ತಿಗೆ ಶಾಂತವಾಗಿತ್ತು. ಡಿಸೆಂಬರ್‌ನಿಂದ 2021ರ ಫೆಬ್ರವರಿಯ ಅಂತ್ಯದವರೆಗೆ ಕೋವಿಡ್‌ ದೈನಂದಿನ ಪ್ರಕರಣಗಳ ಸಂಖ್ಯೆ ಕಡಿಮೆ ಇದ್ದರೂ ಪಾಸಿಟಿವಿಟಿ ದರ ಇಷ್ಟೊಂದು ಕಡಿಮೆ ಆಗಿರಲಿಲ್ಲ. ಆ ಅವಧಿಯಲ್ಲಿ ಎರಡ್ಮೂರು ಬಾರಿ ಮಾತ್ರ ಪಾಸಿಟಿವಿಟಿ ದರ 0.40ಗಿಂತ ಕಡಿಮೆ ಬಂದಿತ್ತು. ಆದರೆ ಎರಡನೇ ಅಲೆಯ ಕೊನೆಯ ಘಟ್ಟದಲ್ಲಿ ರಾಜ್ಯದ ಪಾಸಿಟಿವಿಟಿ ದರ 0.35ರ ಅಸುಪಾಸಿಗೆ ಇಳಿದಿದೆ. ಅಕ್ಟೋಬರ್‌ 10 ರಂದು ಶೇ.0.35 ಪಾಸಿಟಿವಿಟಿ ದರ ವರದಿಯಾಗಿ ದಾಖಲೆ ನಿರ್ಮಾಣವಾಗಿತ್ತು. ಆ ದಾಖಲೆ ಈಗ ಮುರಿದು ಬಿದ್ದಿದೆ.

ಕೊರೋನಾದಿಂದ ಮಕ್ಕಳು ಸದ್ಯಕ್ಕೆ ಸೇಫ್‌ ಝೋನ್‌ನಲ್ಲಿ : ಯಾರಿಗೂ ಪ್ರಾಣಾಪಾಯವಿಲ್ಲ

ಬೆಂಗಳೂರು(Bengaluru) ನಗರದಲ್ಲಿ 140, ದಕ್ಷಿಣ ಕನ್ನಡ 35(Dakshina Kannada), ತುಮಕೂರು9Tumakuru)27, ಹಾಸನ(Hassan) 26, ಮೈಸೂರು(Mysuru) 21, ಉಡುಪಿ(Udupi) 16, ಚಿಕ್ಕಮಗಳೂರು 14 ಪ್ರಕರಣ ವರದಿಯಾಗಿದೆ. ಬಾಗಲಕೋಟೆ(Bagalkot), ಬಳ್ಳಾರಿ(Ballari), ಹಾವೇರಿ, ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಯಲ್ಲಿ ಹೊಸ ಪ್ರಕರಣ ಪತ್ತೆಯಾಗಿಲ್ಲ. ಬೆಂಗಳೂರು ನಗರದಲ್ಲಿ 5, ತುಮಕೂರು, ಹಾವೇರಿ, ದಕ್ಷಿಣ ಕನ್ನಡ, ದಾವಣಗೆರೆ ಮತ್ತು ಬೆಳಗಾವಿಯಲ್ಲಿ ತಲಾ ಒಬ್ಬರು ಕೋವಿಡ್‌ನಿಂದ ಮೃತಪಟ್ಟಿದ್ದಾರೆ.

ರಾಜ್ಯದಲ್ಲಿ ಈವರೆಗೆ ಒಟ್ಟು 29.82 ಲಕ್ಷ ಮಂದಿಯಲ್ಲಿ ಕೋವಿಡ್‌ ಪತ್ತೆಯಾಗಿದೆ. 29.34 ಲಕ್ಷ ಮಂದಿ ಚೇತರಿಸಿಕೊಂಡಿದ್ದಾರೆ. ಸದ್ಯ 9,621 ಮಂದಿಯಲ್ಲಿ ಸೋಂಕಿದೆ. 37,916 ಮಂದಿ ಮರಣವನ್ನಪ್ಪಿದ್ದಾರೆ. ಬುಧವಾರದ 1.12 ಲಕ್ಷ ಪರೀಕ್ಷೆ ಸೇರಿ ಒಟ್ಟು 4.90 ಕೋಟಿ ಪರೀಕ್ಷೆ ನಡೆದಿದೆ.

6 ಕೋಟಿ ಡೋಸ್‌ ಲಸಿಕೆ ನೀಡಿಕೆ ಪೂರ್ಣ

ರಾಜ್ಯದಲ್ಲಿ ಬುಧವಾರ 4.19 ಲಕ್ಷ ಮಂದಿಗೆ ಕೋವಿಡ್‌ ಲಸಿಕೆ8(Vaccine) ನೀಡಲಾಗಿದೆ. ಇದರೊಂದಿಗೆ ರಾಜ್ಯದಲ್ಲಿ ಈವರೆಗೆ ವಿತರಣೆಯಾದ ಲಸಿಕೆ ಡೋಸ್‌ಗಳ ಸಂಖ್ಯೆ 6.03 ಕೋಟಿಗೆ ತಲುಪಿದೆ. ಒಟ್ಟು 4.06 ಕೋಟಿ ಮೊದಲ ಡೋಸ್‌ ಮತ್ತು 1.97 ಕೋಟಿ ಎರಡನೇ ಡೋಸ್‌ ವಿತರಣೆಯಾಗಿದೆ. ಬುಧವಾರ 2.81 ಲಕ್ಷ ಮಂದಿ ಎರಡನೇ ಡೋಸ್‌ ಮತ್ತು 1.38 ಲಕ್ಷ ಮಂದಿ ಮೊದಲ ಡೋಸ್‌ ಲಸಿಕೆ ಪಡೆದಿದ್ದಾರೆ.