Asianet Suvarna News Asianet Suvarna News

ಆರೋಗ್ಯದಲ್ಲಿ ಏರುಪೇರು: ಆಂಬ್ಯುಲೆನ್ಸ್ ಮೂಲಕ Murugha ಶರಣರು ICU ಗೆ ಶಿಫ್ಟ್

Murugha Mutt POCSO Updates: ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಆಂಬ್ಯುಲೆನ್ಸ್ ಮೂಲಕ ಮುರುಘಾ ಶರಣರನ್ನು ICU ಗೆ ಶಿಫ್ಟ್ ಮಾಡಲಾಗಿದೆ. ಮುರುಘಾ ಶರಣರ ಮೇಲೆ ಪೋಕ್ಸೊ ಪ್ರಕರಣ ದಾಖಲಾಗಿದ್ದು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

rape case muruga sharana shifted Chitradurga District Hospital ICU from jail rbj
Author
First Published Sep 2, 2022, 12:01 PM IST

ಚಿತ್ರದುರ್ಗ, (ಸೆಪ್ಟೆಂಬರ್.02): ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಗುರುವಾರ ತಡರಾತ್ರಿ ಬಂಧನವಾಗಿದ್ದ ಚಿತ್ರದುರ್ಗದ ಮುರುಘಾ ಮಠದ ಡಾ. ಶಿವಮೂರ್ತಿ ಮರುಘಾ ಶರಣರ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಜೈಲಿನಲ್ಲಿರುವಾಗಲೇ ಶ್ರೀಗಳು ಎದೆನೋವು ಎಂದು ಕುಸಿದುಬಿದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಕೂಡಲೇ ಅವರನ್ನು ಜೈಲಿನಿಂದ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಸುಮಾರು 2 ಗಂಟೆಗಳ ಕಾಲ ಮುರುಘಾ ಶ್ರೀಗಳ ಆರೋಗ್ಯ ತಪಾಸಣೆ ಮಾಡಲಾಗಿದೆ. ಬಿಪಿ, ಶುಗರ್, ಸ್ಕ್ಯಾನ್‌ ಮಾಡಲಾಗಿದ್ದು, ಎದೆ ನೋವಿನಲ್ಲಿ ವ್ಯತ್ಯಾಸ ಬಂದ ಹಿನ್ನೆಲೆಯಲ್ಲಿ ಮುರುಘಾ ಶರಣರನ್ನು ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯ ICU ಗೆ ಶಿಫ್ಟ್ ಮಾಡಲಾಗಿದೆ.

Murugha Mutt Case: ಪ್ರಕರಣವನ್ನು ಬೇರೆ ರಾಜ್ಯಕ್ಕೆ ವರ್ಗಾಯಿಸಿ ತನಿಖೆ ಮಾಡಲಿ; ಒಡನಾಡಿ ಆಗ್ರಹ

ದಾವಣಗೆರೆಯಿಂದ ಇಬ್ಬರು ಹೃದಯ ರೋಗ ತಜ್ಞ ವೈದ್ಯರು ಕೆಲವೇ ಕ್ಷಣಗಳಲ್ಲಿ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ  ಆಗಮಿಸಲಿದ್ದು, ಶ್ರೀಗಳ ಆರೋಗ್ಯ ತಪಾಸಣೆ ಮಾಡಲಿದ್ದಾರೆ ಎಂದು ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಜಿಲ್ಲಾ ಸರ್ಜನ್ ಬಸವರಾಜ್ ಮಾಹಿತಿ ನೀಡಿದ್ದಾರೆ.

ದಾವಣಗೆರೆಯಿಂದ ಬರುತ್ತಿರುವ ಹಾರ್ಟ್ ಸ್ಪೆಷಲಿಸ್ಟ್‌ ಡಾಕ್ಟರ್‌ ಶ್ರೀಗಳು ಆರೋಗ್ಯ ತಪಾಸಣೆ ಮಾಡಲಿದ್ದು, ಬಳಿಕ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಬೇರೆ ಆಸ್ಪತ್ರೆಗೆ ಶಿಫ್ಟ್ ಮಾಡಬಹುದಾ? ಅಥವಾ ಬೆಂಗಳೂರಿಗೆ ಕರೆದುಕೊಂಡು ಹೋಗಬೇಕಾಗುತ್ತಾ ಎನ್ನುವುದು ತಿಳಿಯಲಿದೆ.

ಸೆ.01ರ ರಾತ್ರಿ 10 ಗಂಟೆ ಸುಮಾರಿಗೆ ಪೋಕ್ಸೊ ಪ್ರಕರಣದಡಿಯಲ್ಲಿ ಬಂಧಿಸಲಾಗಿತ್ತು. ಎಲ್ಲಾ ವೈದ್ಯಕೀಯ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ನ್ಯಾಯಾಧೀಶರ ಎದುರು ಹಾಜರುಪಡಿಸಲಾಗಿತ್ತು. ನ್ಯಾಯಾಧೀಶರು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ದರು. ಅದರಂತೆ ಬೆಳಗ್ಗಿನ ಜಾವ ಮುರುಘಾ ಶರಣರನ್ನು ಚಿತ್ರದುರ್ಗ ಜಿಲ್ಲಾ ಬಂಧೀಖಾನೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಅವರು ಪದೇ ಪದೇ ಎದೆ ನೋವು ಎಂದು ಹೇಳಿದ್ದರು. ಅವರನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ಶಿಫ್ಟ್ ಮಾಡಿಸಲಾಗಿತ್ತು. ಆನಂತರ ಇಸಿಜಿ ಮಾಡಿಸಲಾಗಿತ್ತು ಎಂದು ವರದಿಯಾಗಿದೆ.

ಮುರುಘಾ ಶರಣರನ್ನು ಆಸ್ಪತ್ರೆಗೆ ದಾಖಲಿಸಿದ ಕೂಡಲೇ ಚಿತ್ರದುರ್ಗ ಎಸ್‌ಪಿ ಕೆ.ಪರಶುರಾಮ್‌ ಸ್ಥಳಕ್ಕೆ ಧಾವಿಸಿ ಮಾಹಿತಿ ಪಡೆದಿದ್ದರು. ಮಠದ ಸಿಬ್ಬಂದಿಗಳು ಶರಣರಿಗೆ ಬಿಪಿ ಮತ್ತು ಹೃದಯ ರೋಗದ ಸಮಸ್ಯೆಯಿದೆ ಎಂದು ಹೇಳಿಕೆ ನೀಡಿದ್ದಾರೆ.

Follow Us:
Download App:
  • android
  • ios