Rameshwaram cafe Blast: 9 ನಿಮಿಷ ಹೊಟೆನಲ್ಲೇ ಕುಳಿತಿದ್ದ ಶಂಕಿತ, ಸಿಸಿಟಿವಿ ವಿಡಿಯೋ ವೈರಲ್!
ಕಳೆದ ವಾರ ಬೆಂಗಳೂರಿನ ಜನಪ್ರಿಯ ರಾಮೇಶ್ವರ ಕೆಫೆಯಲ್ಲಿ ನಡೆದ ಬಾಂಬ್ ದಾಳಿ ನಡೆಸಿದ ಶಂಕಿತ ಆರೋಪಿ ಅಲ್ಲಿ ಒಂಬತ್ತು ನಿಮಿಷಗಳನ್ನು ಕಳೆದಿದ್ದು, ಈ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ದಾಖಲಾಗಿವೆ.
ಬೆಂಗಳೂರ (ಮಾ.5): ಕಳೆದ ವಾರ ಬೆಂಗಳೂರಿನ ಜನಪ್ರಿಯ ರಾಮೇಶ್ವರ ಕೆಫೆಯಲ್ಲಿ ನಡೆದ ಬಾಂಬ್ ದಾಳಿ ನಡೆಸಿದ ಶಂಕಿತ ಆರೋಪಿ ಅಲ್ಲಿ ಒಂಬತ್ತು ನಿಮಿಷಗಳನ್ನು ಕಳೆದಿದ್ದು, ಈ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ದಾಖಲಾಗಿವೆ.
ಹೊಸದಾಗಿ ಬಿಡುಗಡೆಯಾಗಿರುವ ಸಿಸಿಟಿವಿ ವಿಡಿಯೋ ತುಣುಕಿನಲ್ಲಿ ಶಂಕಿತ ವ್ಯಕ್ತಿ ಸನ್‌ಗ್ಲಾಸ್, ಮಾಸ್ಕ್ ಮತ್ತು ಬೇಸ್‌ಬಾಲ್ ಟೋಪಿ ಧರಿಸಿ ಬಸ್ ನಿಲ್ದಾಣದಿಂದ ರಾಮೇಶ್ವರಂ ಕೆಫೆ ಕಡೆಗೆ ಹೋಗುತ್ತಿರುವುದನ್ನು ತೋರಿಸುತ್ತದೆ. ಶುಕ್ರವಾರ ಬೆಳಗ್ಗೆ 11.34ಕ್ಕೆ ಬೆಂಗಳೂರಿನ ಬ್ರೂಕ್‌ಫೀಲ್ಡ್‌ನಲ್ಲಿರುವ ಕೆಫೆ ಪ್ರವೇಶಿಸಿದ ಆತ ಕೆಲ ಹೊತ್ತು ಮೊಬೈಲ್‌ನಲ್ಲಿ ಮಾತನಾಡಿದ್ದಾನೆ. ಮತ್ತೊಂದು ದೃಶ್ಯಾವಳಿಯಲ್ಲಿ ಶಂಕಿತ ವ್ಯಕ್ತಿಯು 11.43 ಕ್ಕೆ ಕೆಫೆಯಿಂದ ಹೊರಹೋಗುವುದನ್ನು ತೋರಿಸುತ್ತದೆ. ಆತ ಬಂದಷ್ಟೇ ಆತುರದಿಂದ ಕೆಫೆಯಿಂದ ಹೊರಟು ಹೋಗುತ್ತಾನೆ.
ಪಾಕ್ ಪರ ಘೋಷಣೆ ಕೂಗಿದವರಿಗಿಂತ ಅವರನ್ನು ಸಮರ್ಥನೆ ಮಾಡಿಕೊಂಡ ಸರ್ಕಾರದ ನಡೆಯೇ ಆತಂಕಕ್ಕೆ ಕಾರಣವಾಗಿದೆ: ಬೊಮ್ಮಾಯಿ
ಶಂಕಿತ ಆರೋಪಿ ರಾಮೇಶ್ವರಂ ಕೆಫೆಯಲ್ಲಿ ಕೇವಲ ಒಂಬತ್ತು ನಿಮಿಷಗಳ ಕಾಲ ಕಳೆದಿದ್ದಾನೆ ಎಂದು ಸಿಸಿಟಿವಿ ಸಾಕ್ಷ್ಯಗಳು ಹೇಳುತ್ತಿವೆ. ಪೊಲೀಸ್ ಮೂಲಗಳ ಪ್ರಕಾರ ಶಂಕಿತ ವ್ಯಕ್ತಿ ರಾಮೇಶ್ವರಂ ಕೆಫೆಯೊಳಗೆ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಇರುವ ಬ್ಯಾಗನ್ನು ಬಿಟ್ಟು ಹೋಗಿದ್ದ.ಆತ ಬಿಟ್ಟು ಹೋಗಿದ್ದ ಬ್ಯಾಗ್ ನಲ್ಲಿದ್ದ ಸುಧಾರಿತ ಬಾಂಬ್ ಸ್ಫೋಟಗೊಂಡು ಸ್ಫೋಟದಲ್ಲಿ ಕೆಫೆಯ ಕೆಲ ಸಿಬ್ಬಂದಿ ಸೇರಿದಂತೆ 10 ಮಂದಿ ಗಾಯಗೊಂಡಿದ್ದರು.
ಪಾಕ್ ಪರ ಘೋಷಣೆಯ ಲ್ಯಾಬ್ ವರದಿ ಬಹಿರಂಗ ಪಡಿಸಿ: ಬಿಜೆಪಿ ನಿಯೋಗದಿಂದ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಮನವಿ
ಈ ಗಂಭೀರ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಪ್ರಕರಣವನ್ನು ಕೈಗೆತ್ತಿಕೊಂಡಿದ್ದು, ಇದಕ್ಕೂ ಮುನ್ನ ಬೆಂಗಳೂರು ಪೊಲೀಸರು ಕೆಫೆಯಲ್ಲಿ ನಡೆದ ಸ್ಫೋಟಕ್ಕೆ ಸಂಬಂಧಿಸಿದಂತೆ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ ಮತ್ತು ಸ್ಫೋಟಕ ವಸ್ತುಗಳ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು.