Asianet Suvarna News Asianet Suvarna News

ಬಿಜೆಪಿ ಸರ್ಕಾರದಲ್ಲಿ ಸಾರಿಗೆ ಇಲಾಖೆಯೊಂದರಲ್ಲಿಯೇ 14 ಸಾವಿರ ನೌಕರರ ನಿವೃತ್ತರಾಗಿದ್ದಾರೆ; ಸಚಿವ ರಾಮಲಿಂಗಾರೆಡ್ಡಿ

ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಾರಿಗೆ ಇಲಾಖೆಯಲ್ಲಿ ಬರೋಬ್ಬರಿ 14 ಸಾವಿರ ನೌಕರರು ನಿವೃತ್ತಿಯಾಗಿದ್ದಾರೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

Ramalingareddy says 14 thousand transport department employees retired in Bjp Period sat
Author
First Published May 26, 2024, 1:38 PM IST

ಬೆಂಗಳೂರು (ಮೇ 26): ಕಳೆದ ನಾಲ್ಕು ವರ್ಷಗಳ ಕಾಲ ಆಡಳಿತ ಮಾಡಿದ್ದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಾರಿಗೆ ಇಲಾಖೆಯಲ್ಲಿ ಬರೋಬ್ಬರಿ 14 ಸಾವಿರ ನೌಕರರು ನಿವೃತ್ತಿಯಾಗಿದ್ದಾರೆ. ಜೊತೆಗೆ, ಒಂದೇ ಒಂದು ಬಸ್ ಖರೀದಿ ಮಾಡದಿದ್ದರೂ ಬರೋಬ್ಬರಿ 5,900 ಕೋಟಿ ರೂ. ಸಾಲ ಮಾಡಿ ಹೋಗಿದ್ದರು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾಹಿತಿ ನೀಡಿದರು.

ಬೆಂಗಳೂರಿನಲ್ಲಿ ಭಾನುವಾರ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಲು ಆಗಮಿಸಿದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ತಮ್ಮ ಸರ್ಕಾರದ ಅವಧಿಯಲ್ಲಿ ಒಂದೇ ಒಂದು ಬಸ್ ಖರೀದಿ ಮಾಡದಿದ್ದರೂ ಬಸ್‌ಗಳ ಸ್ಥಿತಿಯ ಬಗ್ಗೆ ಟೀಕೆ ಮಾಡುತ್ತಾರೆ. ಕಳೆದ ನಾಲ್ಕು ವರ್ಷ ಅಧಿಕಾರದಲ್ಲಿಇದ್ದಿದ್ದು ಅವರೇ ಅಲ್ವಾ? ಒಂದು ಹೊಸ ಬಸ್ಸನ್ನೂ ಅವರು ತೆಗೆದುಕೊಂಡಿಲ್ಲ. ಸಾರಿಗೆ ಇಲಾಖೆಯಲ್ಲಿ 14 ಸಾವಿರ ಜನ ನಿವೃತ್ತಿ ಹೊಂದಿದ್ದರು. ಬರೋಬ್ಬರಿ 5,900 ಕೋಟಿ ಸಾರಿಗೆ ನಿಗಮಕ್ಕೆ ಸಾಲ ಇಟ್ಟು ಹೋಗಿದ್ದಾರೆ. ನಮ್ಮ‌ ಸರ್ಕಾರ ಬಂದ್ಮೇಲೆ 5 ಸಾವಿರಕ್ಕೂ ಅಧಿಕ‌ ಬಸ್ ಬಂದಿವೆ. ಬಿಜೆಪಿಯ ಸಾಲವನ್ನ ನಾವು ತೀರಿಸಬೇಕಾಗಿದೆ ಎಂದು ಹೇಳಿದರು.

ಬೆಂಗಳೂರಲ್ಲಿ ಹೆಚ್ಚಾಯ್ತು ನಕಲಿ ಪೊಲೀಸರ ಹಾವಳಿ; ರಾತ್ರಿ ಗಸ್ತಿನಲ್ಲಿ ಸಾರ್ವಜನಿಕರಿಂದ ಸುಲಿಗೆ

ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಭೇಟಿಯ ಉದ್ದೇಶದ ಬಗ್ಗೆ ಮಾತನಾಡಿ, ವಿಧಾನ ಪರಿಷತ್ ಚುನಾವಣೆ ಸಂಬಂಧ ಚರ್ಚೆ ಮಾಡಿದ್ದೇವೆ. ಬೆಂಗಳೂರಿನ ಒಬ್ಬರಿಗೆ ಕೊಡಿ‌ ಅಂತ ಕೇಳೋಕೆ ಬಂದಿದ್ದೆ. ಆದರೆ, ಬಾಂಬೆ ಕರ್ನಾಟಕ, ಹೈದರಾಬಾದ್ ಕರ್ನಾಟಕ ಎಲ್ಲರಿಗೂ ಕೊಡಬೇಕು ಅಲ್ವಾ? ಹೀಗಾಗಿ ಟಿಕೆಟ್ ಹಂಚಿಕೆ ನಿರ್ಧಾರಕ್ಕೆ ದೆಹಲಿಗೆ ಹೋಗ್ಬೇಕು ಎಂದಿದ್ದಾರೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ದೆಹಲಿಗೆ ಪಟ್ಟಿ ಕೊಡುವ ಬಗ್ಗೆ ಫೈನಲ್ ಮಾಡ್ತಾರೆ. ಎಲ್ಲಾ ಸಮುದಾಯಗಳನ್ನೂ ಗಮನದಲ್ಲಿ ಇಟ್ಟಿಕೊಂಡು ಕೊಡ್ಬೇಕು ಎಂದು ಹೇಳಿದರು.

ಬೆಂಗಳೂರಲ್ಲಿ ಮೋಜಿಗಾಗಿ ವಾರಕ್ಕೆರಡು ಕೊಲೆ ಮಾಡುತ್ತಿದ್ದ ನಟೋರಿಯಸ್ ಹಂತಕ ಅರೆಸ್ಟ್!

ರಾಜ್ಯದಲ್ಲಿ ವಿಧಾನ ಪರಿಷತ್ ಗೆ ಯಾರ ಹೆಸರನ್ನ ಶಿಫಾರಸು ಮಾಡಿದ್ದೇವೆ ಎಂದು ಹೇಳೋಕೆ ಆಗೊಲ್ಲ, ಬೇರೆಯವರಿಗೆ ಬೇಸರ ಆಗುತ್ತದೆ. ಆಕಾಂಕ್ಷಿಗಳು ಹೆಚ್ಚು ಇದ್ದೇ ಇರ್ತಾರೆ ಅಲ್ವಾ? ಬಿಜೆಪಿಯಲ್ಲಿ ಅಷ್ಟಿದ್ದಾರೆ ಅಂದ್ರೆ ನಮಗೆ 7 ಸೀಟ್ ಬರುತ್ತದೆ. ನಮ್ಮಲ್ಲಿ‌ ಆಕಾಂಕ್ಷಿಗಳು ಇನ್ನೂ ಜಾಸ್ತಿ ಇದ್ದಾರೆ. ಇನ್ನು ಬೆಂಗಳೂರಿನಲ್ಲಿ ಡ್ರಗ್ಸ್ ವ್ಯಸನಿಗಳು ಹೆಚ್ಚಳವಾಗುತ್ತಿದ್ದಾರೆ ಎಂಬ ವಿಚಾರದ ಬಗ್ಗೆ ಮಾತನಾಡಿ, ಪೊಲೀಸ್ ನೈತಿಕ ಗಿರಿ ಇವರ ಪಕ್ಷದವರೇ ಮಾಡ್ತಾ ಇದ್ದಿದ್ದು. ಇವರ ದುರ್ಬಲ ಆಡಳಿತದಿಂದಲೇ ಎಲ್ಲವೂ ಆಗಿದ್ದು. ನಾನೂ ಸಹ ಗೃಹ‌ ಸಚಿವನಾಗಿದ್ದೆ, ಈಗ ಪರಮೇಶ್ವರ್ ಇದ್ದಾರೆ. ಇಲಾಖೆಯನ್ನ ಬಹಳ ಚೆನ್ನಾಗಿ ನಡೆಸಿಕೊಂಡು ಹೋಗ್ತಿದ್ದಾರೆ. ಕಳೆದ ನಾಲ್ಕು ವರ್ಷದಲ್ಲಿ ಬಿಜೆಪಿ ಏನು ಮಾಡಿದೆ? ಎಂದು ಪ್ರಶ್ನೆ ಮಾಡಿದರು.

Latest Videos
Follow Us:
Download App:
  • android
  • ios