Asianet Suvarna News Asianet Suvarna News

ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಗೆ ಸಲಹಾ ಸಮಿತಿ: ಸಚಿವ ಶಿವರಾಜ ತಂಗಡಗಿ

2024ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ 69 ಮಂದಿಯನ್ನು ಆಯ್ಕೆ ಮಾಡಲು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಅಧ್ಯಕ್ಷತೆಯಲ್ಲಿ 49 ಸದಸ್ಯರಿರುವ ಆಯ್ಕೆ ಸಲಹಾ ಸಮಿತಿಯನ್ನು ರಾಜ್ಯ ಸರ್ಕಾರ ರಚಿಸಿದೆ. 

Rajyotsava Award Selection Advisory Committee Says Minister Shivaraj Tangadagi gvd
Author
First Published Oct 6, 2024, 7:12 AM IST | Last Updated Oct 6, 2024, 7:12 AM IST

ಬೆಂಗಳೂರು (ಅ.06): 2024ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ 69 ಮಂದಿಯನ್ನು ಆಯ್ಕೆ ಮಾಡಲು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಅಧ್ಯಕ್ಷತೆಯಲ್ಲಿ 49 ಸದಸ್ಯರಿರುವ ಆಯ್ಕೆ ಸಲಹಾ ಸಮಿತಿಯನ್ನು ರಾಜ್ಯ ಸರ್ಕಾರ ರಚಿಸಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ, ನ್ಯಾಯಾಂಗ ಕ್ಷೇತ್ರ- ಡಾ.ಸಿ.ಎಸ್.ದ್ವಾರಕನಾಥ್, ಕ್ಷೇತ್ರ- ಸರ್ಕಾರ ಮಾಜಿ ಮುಖ್ಯ ಕಾರ್ಯದರ್ಶಿ ರವಿಕುಮಾರ್, ಸದಾಶಿವ ಆಡಳಿತ ಮರ್ಜಿ(ಧಾರವಾಡ), ಸಮಾಜ ಸೇವೆ- ಬಾಬು ಭಂಡಾರಿಗಲ್ (ರಾಯಚೂರು), ಶೈಲಜಾ ಹಿರೇಮಠ (ಕೊಪ್ಪಳ).

ಸಾಹಿತ್ಯ ಕ್ಷೇತ್ರ - ರಂಜಾನ್ ದರ್ಗಾ (ಕಲಬುರಗಿ), ಹಿರೇಮಗಳೂರು ಪಿ.ತಿಪ್ಪೇಸ್ವಾಮಿ (ಚಿತ್ರದುರ್ಗ), ಶ್ರೀರಾಮ ಇಟ್ಟಣ್ಣನವರ (ಬೀಳಗಿ), ಸಿಹಿಕಹಿ ಚಂದ್ರು, ಕಣ್ಣನ್ (ಬೆಂಗಳೂರು), ಶಿಲ್ಪಕಲೆ-ಜಯಣ್ಣಚಾ‌ (ಚಿಕ್ಕಮಗಳೂರು), ಕೃಷಿ ಕ್ಷೇತ್ರ- ಮಲ್ಲಿಕಾರ್ಜುನ ಹೊಸಪಾಳ್ಯ (ಕೊಡಗು), ಜೋಸೆಫ್ ಹೂವ‌ (ಬೆಂಗಳೂರು) ಸದಸ್ಯರಾಗಿದ್ದಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಪುಸ್ತಕ ಪ್ರಾಧಿಕಾರ, ಗಡಿ ಅಭಿವೃದ್ಧಿ ಪ್ರಾಧಿಕಾರ, ವೈ.ಸಿ.ಭಾನುಮತಿ (ಮೈಸೂರು), ಪ್ರೊ.ಜಿ.ಶರಣಪ್ಪ(ಚಿತ್ರದುರ್ಗ), ಪ್ರೊ. ದೊಣ್ಣೆಗೌಡರು ವೆಂಕಣ್ಣ (ಯಾದಗಿರಿ), (ಚಿಕ್ಕಮಗಳೂರು), ಪುಷ್ಪ ಶಿವಕುಮಾ‌ (ಶಿಕಾರಿಪುರ) ಅವರು ಸದಸ್ಯರ ನೇಮಕಗೊಂಡಿದ್ದಾರೆ. 

ಜಾನಪದ ಕ್ಷೇತ್ರ- ಡಾ.ರತ್ನಮ್ಮ (ಚಾಮರಾಜನಗರ), ಶರಣಪ್ಪ ವಡಿಗೇರಿ (ಕೊಪ್ಪಳ), ವೈದ್ಯಕೀಯ ಕ್ಷೇತ್ರ- ಡಾ. ತಿಮ್ಮಪ್ಪ (ಶಿವಮೊಗ್ಗ), ಡಾ.ಕ್ಯಾಪ್ಟನ್ ಕೃಷ್ಣಮೂರ್ತಿ (ವಿಜಯನಗರ), ಸಂಗೀತ ಮತ್ತು ನೃತ್ಯ- ಪಂ.ಎಂ.ವೆಂಕಟೇಶ್ ಕುಮಾರ್ (ಧಾರವಾಡ), ಡಾ.ಕೆ. ಕುಮಾರ್ (ಮೈಸೂರು), ರಂಗಭೂಮಿ- ಸಿ.ಬಸವಲಿಂಗಯ್ಯ (ಮೈಸೂರು), (ತುಮಕೂರು), ಎಚ್.ಕೆ.ಶ್ರೀಕಂಠ, ಚಿತ್ರಕಲೆ- ಸಿ.ಚಂದ್ರಶೇಖರ್ (ಬೆಂಗಳೂರು), ಚಲನಚಿತ್ರರಂಗ- ಹಂಸಲೇಖ, ರವಿಚಂದ್ರನ್ (ಬೆಂಗಳೂರು) ಅವರು ಸದಸ್ಯರಾಗಿ ನೇಮಕವಾಗಿದ್ದಾರೆ. 

ಜಾತಿ ಗಣತಿ ವರದಿ ಕುರಿತು ಕ್ಯಾಬಿನೆಟ್‌ನಲ್ಲಿ ಚರ್ಚೆ: ಸಿಎಂ ಸಿದ್ದರಾಮಯ್ಯ

ಶಿಕ್ಷಣ ಕ್ಷೇತ್ರ - ಪ್ರೊ.ರಾಧಾಕೃಷ್ಣ, ಪ್ರೊ. ಕೃಷ್ಣಗೌಡ (ಮೈಸೂರು), ಪತ್ರಿಕೋದ್ಯಮ- ಸಿದ್ದರಾಜು (ಬೆಂಗಳೂರು), ಪರಿಸರ-ನಾಗೇಶ್ ಹೆಗಡೆ (ಬೆಂಗಳೂರು), ವಾಣಿಜ್ಯ ಕೈಗಾರಿಕೆ- ಕೆ.ಚನ್ನಪ್ಪ (ಬಳ್ಳಾರಿ), ಕ್ರೀಡಾ ಕ್ಷೇತ್ರ- ಎ.ಬಿ.ಸುಬ್ಬಯ್ಯ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಕರ್ನಾಟಕ ನಾಟಕ ಅಕಾಡೆಮಿ, ಕರ್ನಾಟಕ ಲಲಿತಕಲಾ ಅಕಾಡೆಮಿ, ಶಿಲ್ಪಕಲಾ ಅಕಾಡೆಮಿ, ಯಕ್ಷಗಾನ ಅಕಅಡೆಮಿ, ಜಾನಪದ ಅಕಾಡೆಮಿ, ಚಲನಚಿತ್ರ ಅಕಾಡೆಮಿ ಸಲಹಾ ಮಾಧ್ಯಮ ಅಕಾಡೆಮಿ ಅಧ್ಯಕ್ಷರು ಆಯ್ಕೆ ಸಮಿತಿ ಪದನಿಮಿತ್ತ ಸದಸ್ಯರಾಗಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರು ಸದಸ್ಯ ಕಾರ್ಯದರ್ಶಿಯಾಗಿದ್ದಾರೆ.

Latest Videos
Follow Us:
Download App:
  • android
  • ios