ಕೊರೋನಾ, ಬಹು ಅಂಗಾಂಗ ವೈಫಲ್ಯ; ಬಿಜೆಪಿ ರಾಜ್ಯಸಭಾ ಸದಸ್ಯ ಅಶೋಕ ಗಸ್ತಿ ನಿಧನ

ಕೊರೋನಾಗೆ ರಾಜ್ಯಸಭಾ ಸದಸ್ಯ ಸಾವು| ಅಶೋಕ ಗಸ್ತಿ ಕೊನೆಯುಸಿರೆಳೆದ ಬಿಜೆಪಿ ರಾಜ್ಯ ಸಭಾ ಸದಸ್ಯ| ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು

Rajyasabha Member Ashok Gasti From Karnataka BJP Dies at 55

ಬೆಂಗಳೂರು(ಸೆ.17) ಬಿಜೆಪಿಗೆ ಬಹುದೊಡ್ಡ ಆಘಾತಕಾರಿ ಸುದ್ದಿ ಎದುರಾಗಿದ್ದು, ಇತ್ತೀಚೆಗಷ್ಟೇ ಕರ್ನಾಟಕದಿಂದ ರಾಜ್ಯ ಸಭಾ ಸದಸ್ಯರಾಗಿ ಆಯ್ಕೆಯಾಗಿದ್ದ ಅಶೋಕ ಗಸ್ತಿ(55) ಬಹು ಅಂಗಾಂಗ ವೈಫಲ್ಯದಿಂದ ಕೊನೆಯುಸಿರೆಳೆದಿದ್ದಾರೆ. ಕೊರೋನಾ ಸಹ ಅವರನ್ನು ಕಾಡುತ್ತಿತ್ತು.

ರಾಜ್ಯಸಭಾ ಸದಸ್ಯ ಅಶೋಕ ಗಸ್ತಿಗೆ ಕೊರೋನಾ ಪಾಸಿಟಿವ್‌

ಮೂಲತಃ ‌ರಾಯಚೂರಿನ‌ ಲಿಂಗಸುಗೂರಿನವರಾದ ಗಸ್ತಿಯವರಿಗೆ ಕೊರೋನಾ ಸೋಂಕು ತಗುಲಿದ್ದು, ಕಳೆದ 15 ದಿನಗಳಿಂದ ಮಣಿಪಾಲ್ ‌ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೀಗ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ರಾತ್ರಿ10.31ಕ್ಕೆ ನಿಧನರಾಗಿದ್ದಾರೆ.

ಬಿಜೆಪಿ ನಿಷ್ಠಾವಂತ ಕಾರ್ಯಕರ್ತರಾಗಿದ್ದ ಗಸ್ತಿ

ರಾಯಚೂರು ಮೂಲದ ಅಶೋಕ ಗಸ್ತಿಯವರಿಗೆ ಸವಿತ ಸಮಾಜದವರು. ಬಿಎ.ಎಲ್‌ಎಲ್‌ಬಿ ಮುಗಿಸಿದ್ದು, ಮೊದಲಿಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರಾಗಿದ್ದರು. ಪಕ್ಷದ ಶಿಸ್ತಿನ ಸಿಪಾಯಿಯಾಗಿದ್ದ ಗಸ್ತಿ ಅವರು ಬಿಜೆಪಿಗಾಗಿ ಹಗಲಿರುಳು ಶ್ರಮಿಸಿದ್ದರು. ಈ ಹಿನ್ನೆಲೆ ಅವರಿಗೆ ಈ ಬಾರಿ ರಾಜ್ಯಸಭೆ ಸದಸ್ಯರಾಗುವ ಅವಕಾಶ ಲಭಿಸಿತ್ತು.

 

Latest Videos
Follow Us:
Download App:
  • android
  • ios