ಬೆಳ್ಳಂದೂರು ಕೆರೆ ಒತ್ತುವರಿ ಮಾಡಿದ್ದ ಮಂತ್ರಿ ಟೆಕ್ ಝೋನ್‌ಗೆ ಸುಪ್ರೀಂ ಕೋರ್ಟ್‌ನಲ್ಲಿ ಹಿನ್ನಡೆ| ನಮ್ಮ ಬೆಂಗಳೂರು ಪ್ರತಿಷ್ಠಾನ (NBF) ಸಲ್ಲಿಸಿದ್ದ ದೂರು| ವಿಚಾರಣೆ ನಡೆಸಿದ್ದ NGT, ಮಂತ್ರಿ ಕಂಪನಿಗೆ ದಂಡವನ್ನು ವಿಧಿಸಿತ್ತು| ಸುಪ್ರೀಂ ಆದೇಶ ಸ್ವಾಗತಿಸಿದ ರಾಜ್ಯಸಭಾ ಸಂಸದ ರಾಜೀವ್ ಚಂದ್ರಶೇಖರ್| ‘ಬಿಲ್ಡರ್ ಪೊಲಿಟಿಕ್ಸ್ ಮಾಡುತ್ತಿದ್ದವರಿಗೆ ನ್ಯಾಯಾಲಯ ಛಿಮಾರಿ ಹಾಕಿದೆ’|
ಬೆಂಗಳೂರು(ಮಾ.05): ಬೆಳ್ಳಂದೂರು ಕೆರೆ ಒತ್ತುವರಿ ಮಾಡಿದ್ದ ಮಂತ್ರಿ ಟೆಕ್ ಝೋನ್‌ಗೆ ಸುಪ್ರೀಂ ಸುಪ್ರೀಂ ಕೋರ್ಟ್‌ನಲ್ಲಿ ಹಿನ್ನಡೆಯಾಗಿದೆ. ಕೆರೆ ಒತ್ತುವರಿ ವಿಚಾರವಾಗಿ ನಮ್ಮ ಬೆಂಗಳೂರು ಪ್ರತಿಷ್ಠಾನ (NBF) ಸಲ್ಲಿಸಿದ್ದ ದೂರನ್ನು ವಿಚಾರಣೆ ನಡೆಸಿದ್ದ NGT, ಮಂತ್ರಿ ಕಂಪನಿಗೆ ದಂಡವನ್ನು ವಿಧಿಸಿತ್ತು. ಅದನ್ನು ಪ್ರಶ್ನಿಸಿ ಮಂತ್ರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.
ಈ ಕುರಿತು ಟ್ವೀಟ್ ಮಾಡಿರುವ ರಾಜ್ಯಸಭಾ ಸಂಸದ ರಾಜೀವ್ ಚಂದ್ರಶೇಖರ್, ನಗರದಲ್ಲಿ ಬಿಲ್ಡರ್ ಪೊಲಿಟಿಕ್ಸ್ ಮಾಡುತ್ತಿದ್ದವರಿಗೆ ನ್ಯಾಯಾಲಯ ಛಿಮಾರಿ ಹಾಕಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶವನ್ನು ಸ್ವಾಗತಿಸಿರುವ ರಾಜೀವ್ ಚಂದ್ರಶೇಖರ್, ನಗರದ ಜನರೊಂದಿಗೆ ಸೇರಿ ನಡೆಸಿದ ಹೋರಾಟದಲ್ಲಿ ನಾವು ಜಯಗಳಿಸಿದ್ದೇವೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್, ಜೆಡಿಎಸ್‌ನ ಬಿಲ್ಡರ್ ಮಾಫಿಯಾ ಒಂದು ಕಡೆ ನಿಂತಿದ್ದರೆ, ಓರ್ವ ಸಂಸದ ನಗರದ ಸಾಮಾನ್ಯ ಜನರೊಂದಿಗೆ ಸೇರಿ ನ್ಯಾಯಕ್ಕಾಗಿ ಹೋರಾಟ ನಡೆಸಿದ ಪರಿ ಅನನ್ಯ ಅಂತಾರೆ ಸ್ಥಳೀಯ ಜನರು.
