ಬಿಸಿಲಿನಲ್ಲಿ ನರಳಿದ್ದ ಬೆಂಗ್ಳೂರಲ್ಲಿ ತಂಪೆರೆದ ವರುಣ: ಇಂದೂ ಕೂಡ ಗುಡುಗು ಸಹಿತ ಮಳೆ

*  ನೆಲಕ್ಕುರುಳಿದ ವಿದ್ಯುತ್‌ ಕಂಬ
*  ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತ
*  ರಾವಂದೂರಿನಲ್ಲಿ ವರುಣನ ಆರ್ಭಟಕ್ಕೆ ಮರ ಬಿದ್ದು ಮಹಿಳೆ ಸಾವು

Rainfall in Most of Bengaluru on April 01st grg

ಬೆಂಗಳೂರು(ಏ.02):  ಕೆಲ ದಿನಗಳಿಂದ ತೀವ್ರ ಧಗೆಯಿಂದ ತತ್ತರಿಸಿದ್ದ ನಗರದಲ್ಲಿ(Bengaluru) ಶುಕ್ರವಾರ ಬಹುತೇಕ ಭಾಗದಲ್ಲಿ ಮಳೆಯಾಗಿದೆ. ಕೆಲ ಭಾಗದಲ್ಲಿ ಸಾಧಾರಣ ಮಳೆಯಾದರೆ(Rain) ಉಳಿದಂತೆ ಹಗುರ ಮತ್ತು ತುಂತುರು ಮಳೆ ಸುರಿದಿದೆ.

ನಗರದಲ್ಲಿ ಕಳೆದ ಎರಡ್ಮೂರು ದಿನಗಳಿಂದ ನಗರದ ಗರಿಷ್ಠ ತಾಪಮಾನ 35 ಡಿಗ್ರಿ ಸೆಲ್ಸಿಯಸ್‌ ಅಸುಪಾಸಿನಲ್ಲಿ ವರದಿ ಆಗುತ್ತಿದ್ದ ಉಷ್ಣಾಂಶವು ದಿನದ ಕನಿಷ್ಠ 23 ಡಿಗ್ರಿ ಸೆಲ್ಸಿಯಸ್‌ ದಾಟಿತ್ತು. ಇದರಿಂದ ಭಾರಿ ಸೆಖೆಯ ವಾತಾವರಣ ನಗರವನ್ನು ಆವರಿಸಿತ್ತು. ಇದೀಗ ಮಳೆ ಸುರಿದ ಹಿನ್ನೆಲೆಯಲ್ಲಿ ಗರಿಷ್ಠ ತಾಪಮಾನದಲ್ಲಿ(Temperature) ಇಳಿಕೆ ಆಗುವ ನಿರೀಕ್ಷೆಯಿದೆ. ಆದರೆ ಜೋರು ಮಳೆಯಾಗದ ಕಾರಣದಿಂದ ವಾತಾವರಣದಲ್ಲಿನ ತೇವಾಂಶ ಹೆಜ್ಜೆ ಸೆಖೆ ಜಾಸ್ತಿಯಾಗುವ ಸಂಭವವಿದೆ.

Uttara Kannada: ಯಲ್ಲಾಪುರದಲ್ಲಿ ಭಾರೀ ಗಾಳಿ-ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತ

ನಗರದಲ್ಲಿ ಸಂಜೆಯವರೆಗೆ ಬಿರು ಬಿಸಿಲು ಇತ್ತು. ಆದರೆ ಆ ಬಳಿಕ ಎಲ್ಲೆಡೆ ಮಳೆಯ ಆಗಮನವಾಯಿತು. ಮಹಾದೇವಪುರ, ಬೊಮ್ಮನಹಳ್ಳಿ ವಲಯದಲ್ಲಿ, ಆರ್‌.ಆರ್‌.ನಗರ, ಬೆಂಗಳೂರು ದಕ್ಷಿಣ ಮತ್ತು ಪೂರ್ವ ವಲಯದ ಅಲ್ಲಲ್ಲಿ ಹೆಚ್ಚು ಮಳೆಯಾಗಿದೆ. ಯಲಹಂಕ, ದಾಸರಹಳ್ಳಿ ಮತ್ತು ಬೆಂಗಳೂರು ಪಶ್ಚಿಮದ ವಲಯದಲ್ಲಿ ತುಂತರು ಮಳೆಯಾಗಿದೆ.

ಜೆಪಿ ನಗರದ ಮೂರನೇ ಹಂತದ ಮಿನಿ ಫಾರೆಸ್ಟ್‌ ಬಳಿ ಮರವೊಂದು ಬಿದ್ದ ಬಗ್ಗೆ ವರದಿಯಾಗಿದೆ. ಉಳಿದಂತೆ ಕೆಲವೆಡೆ ಟೊಂಗೆಗಳು ಮುರಿದು ಬಿದ್ದ ಪ್ರಕರಣಗಳು ಘಟಿಸಿವೆ. ಶನಿವಾರ ಯುಗಾದಿ ಇದ್ದ ಹಿನ್ನೆಲೆಯಲ್ಲಿ ಸಂಜೆ ಶಾಪಿಂಗ್‌ಗೆ ಹೊರಟಿದ್ದವರು ಮತ್ತು ಬೀದಿ ಬದಿ ವ್ಯಾಪಾರಿಗಳು ಮಳೆಯಿಂದ ತೊಂದರೆಗೀಡಾದರು.

ಸಂಪಂಗಿರಾಮ ನಗರ, ಹೂಡಿ, ಹಂಪಿ ನಗರ, ಪುಲಕೇಶಿ ನಗರ, ಬೆನ್ನಿಗಾನಹಳ್ಳಿ, ಹೆಮ್ಮಿಗೆಪುರ, ಬಾಣಸವಾಡಿ, ಸಿಂಗಸಂದ್ರ, ಅರಕೆರೆ, ಅಂಜನಾಪುರ, ಗೊಟ್ಟಿಗೆರೆ, ಬೇಗೂರು, ವಿಜ್ಞಾನ ನಗರ, ಹೊರಮಾವು, ದೊಡ್ಡನೆಕ್ಕುಂದಿ, ಬೆಳ್ಳಂದೂರ, ಸಾರಕ್ಕಿ, ಗಾಳಿ ಆಂಜನೇಯ ದೇವಾಲಯ ಪ್ರದೇಶದಲ್ಲಿ ಹೆಚ್ಚು ಮಳೆಯಾಗಿದೆ.

ಇಂದೂ ಮಳೆ ಸಾಧ್ಯತೆ

ಯುಗಾದಿಯ ದಿನ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ(Department of Meteorology) ನೀಡಿದೆ. ಮೋಡ ಕವಿದ ವಾತಾವರಣ ಇರಲಿದೆ. ಗರಿಷ್ಠ ಮತ್ತು ಕನಿಷ್ಠ ಉಷ್ಣತೆ ಕ್ರಮವಾಗಿ 34 ಮತ್ತು 23 ಡಿಗ್ರಿ ಸೆಲ್ಸಿಯಸ್‌ ಇರುವ ಸಾಧ್ಯತೆಯಿದೆ.

ಹನೂರು ತಾಲೂಕಿನ ಪಿಜಿಪಾಳ್ಯದಲ್ಲಿ ಆಲಿಕಲ್ಲಿ ಸಹಿತ ಮಳೆ

ಚಾಮರಾಜನಗರ(Chamarajanagara): ಕಳೆದ ಎರಡು ದಿನಗಳಿಂದ ಪೂರ್ವ ಮುಂಗಾರು ಮಳೆ ಭರ್ಜರಿಯಾಗಿ ಸುರಿಯುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಬಹುತೇಕ ಕಡೆ ಭೂಮಿ ತೇವಗೊಂಡಿದ್ದು, ಬಿತ್ತನೆಗೆ ರೈತರು(Farmers) ತಯಾರಿ ಮಾಡಿಕೊಂಡಿದ್ದಾರೆ.

ಯುಗಾದಿ(Yugadi) ಹಬ್ಬದ ಸಂಭ್ರಮಕ್ಕೆ ಮಳೆ ಸಾಥ್‌ ಕೊಡುತ್ತಿದ್ದು, ರೈತರು ಹೊನ್ನೇರು ಕಟ್ಟಲು ಸಂಭ್ರಮದಿಂದಲೇ ತಯಾರಿ ನಡೆಸಿದ್ದಾನೆ. ಇನ್ನೊಂದೆಡೆ, ಬಾಳೆ ಬೆಳೆದ ರೈತರು ಭಾರೀ ಗಾಳಿಗೆ ಚಿಂತಾಕ್ರಾಂತರಾಗಿದ್ದಾರೆ. ಹತ್ತಾರು ಎಕರೆ ಬಾಳೆ ನೆಲಕಚ್ಚಿದೆ. ಬೆಳೆ ಕಳೆದುಕೊಂಡ ರೈತರು ಕಂಗಲಾಗಿದ್ದಾರೆ.

ಇನ್ನು, ಜಿಲ್ಲಾ ಕೇಂದ್ರದಲ್ಲಿ ಅರ್ಧ ತಾಸು ಮಳೆಯಾಗಿದ್ದು ಬಿ.ರಾಚಯ್ಯ ಜೋಡಿರಸ್ತೆ, ದೊಡ್ಡಂಗಡಿ, ಚಿಕ್ಕಂಗಡಿ ಬೀದಿಗಳಲ್ಲಿ ಜನ ಸಂಚರಿಸಲು ಪರದಾಡಿದರು. ಯುಗಾದಿ ಹಬ್ಬದ ಸಂಭ್ರಮದ ವ್ಯಾಪಾರಕ್ಕೆ ಅಡ್ಡಿಯೂ ಆಯಿತು. ಮಳೆಯಲ್ಲೇ ಜನರು ಹಬ್ಬದ ಸಾಮಗ್ರಿ ಖರೀದಿಸಿದರು.ಚಾಮರಾಜನಗರ ತಾಲೂಕಿನ ಕೆಲವೆಡೆ, ಹನೂರು ತಾಲೂಕಿನ ಪಿಜಿಪಾಳ್ಯ, ಬಸವನಗುಡಿ, ಚಿಕ್ಕರಂಗಶೆಟ್ಟಿದೊಡ್ಡಿ, ಒಡೆಯರಪಾಳ್ಯ, ಮೊದಲಾದ ಗ್ರಾಮಗಳಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದೆ.

ರಾವಂದೂರಿನಲ್ಲಿ ಭಾರಿ ಮಳೆಗೆ ಮರ ಬಿದ್ದು ಮಹಿಳೆ ಸಾವು

ಮೈಸೂರು(Mysuru): ಶುಕ್ರವಾರ ಸಂಜೆ ಸುರಿದ ಭಾರಿ ಮಳೆಯಿಂದ ಮರ ಬಿದ್ದು ಒಬ್ಬ ಮಹಿಳೆ(Woman) ಮೃತಪಟ್ಟಿದ್ದು(Death), ನೆಲಕ್ಕುರುಳಿದ ವಿದ್ಯುತ್‌ ಕಂಬ, ಮನೆಯ ಚಾವಣಿ ಹಾರಿ ಹೋದ ಘಟನೆ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕು ರಾವಂದೂರಿನಲ್ಲಿ ನಡೆದಿದೆ.

ಬೆಂಗ್ಳೂರಲ್ಲಿ ಇಂದು ಗುಡುಗು, ಮಿಂಚು ಸಹಿತ ಮಳೆ

ಪಿರಿಯಾಪಟ್ಟಣ ತಾಲೂಕು ಎಚ್‌. ಮಠದಕೊಪ್ಪಲು ಗ್ರಾಮದ ಸ್ವಾಮಿ ಎಂಬವರ ಧರ್ಮಪತ್ನಿ ಪುಟ್ಟಮ್ಮ (30) ಇವರು ತಮ್ಮ ಜಮೀನಿನಲ್ಲಿ ಕೆಲಸ ಮುಗಿಸಿ ಮನೆಗೆ ಹಿಂತಿರುಗಿ ಬರುತ್ತಿರುವ ಸಂದರ್ಭದಲ್ಲಿ ಬಾರಿ ಗಾಳಿ ಮಳೆಯ ಸಂಭವಿಸಿದ ಕಾರಣ ಮಹಿಳೆಯ ಮೇಲೆ ಭಾರಿ ಗಾತ್ರದ ಮರವೊಂದು ಮುರಿದು ಬಿದ್ದ ಪರಿಣಾಮ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಈ ಸಂಬಂಧ ಬೆಟ್ಟದಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಾವಂದೂರು ಗ್ರಾಮದ ಸಂದೀಪ್‌ ಅವರ ಮನೆಯ ಮೇಲ್ಛಾವಣಿ ಬೀಸಿದ ಬಾರಿ ಗಾಳಿಗೆ ಹಾರಿ ಹೋಗಿ ವಿದ್ಯುತ್‌ ತಂತಿ ಮೇಲೆ ಬಿದ್ದಿದೆ, ಅಕ್ಕಪಕ್ಕದ ವಿದ್ಯುತ್‌ ಕಂಬಗಳು ನೆಲಕ್ಕೆ ಉರುಳಿ ಬಿದ್ದಿದೆ. ರಾವಂದೂರಿನ ಸುತ್ತಮುತ್ತ ಹಲವಾರು ಮರಗಳು, ವಿದ್ಯುತ್‌ ಕಂಬಗಳು ಮುರಿದುಬಿದ್ದಿವೆ. ಘಟನಾ ಸ್ಥಳಕ್ಕೆ ಕಂದಾಯ ಇಲಾಖೆಯ ನೌಕರರು ಹಾಗೂ ಅಧಿಕಾರಿಗಳು ಭೇಟಿ ನೀಡಿದ್ದಾರೆ.
 

Latest Videos
Follow Us:
Download App:
  • android
  • ios