ರಸ್ತೆ ಅಪಘಾತ ಸಂಭವಿಸಿದ ವೇಳೆ ತುರ್ತಾಗಿ ಕುಟುಂಬದ ಸದಸ್ಯರಿಗೆ ಮಾಹಿತಿ ನೀಡುವ ‘ರಕ್ಷಾ ಕ್ಯೂಆರ್‌ ಕೋಡ್‌’ ಸಾಫ್ಟ್‌ವೇರ್‌ನ್ನು ಹೈವೇ ಡಿಲೈಟ್‌ ಸಂಸ್ಥೆ ಬಿಡುಗಡೆಗೊಳಿಸಿದೆ.

ಬೆಂಗಳೂರು (ಸೆ.13) :  ರಸ್ತೆ ಅಪಘಾತ ಸಂಭವಿಸಿದ ವೇಳೆ ತುರ್ತಾಗಿ ಕುಟುಂಬದ ಸದಸ್ಯರಿಗೆ ಮಾಹಿತಿ ನೀಡುವ ‘ರಕ್ಷಾ ಕ್ಯೂಆರ್‌ ಕೋಡ್‌’ ಸಾಫ್ಟ್‌ವೇರ್‌ನ್ನು ಹೈವೇ ಡಿಲೈಟ್‌ ಸಂಸ್ಥೆ ಬಿಡುಗಡೆಗೊಳಿಸಿದೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ಸಂಸ್ಥಾಪಕ ರಾಜೇಶ್ ಘಟನಟ್ಟಿ, ‘ಅಪಘಾತಕ್ಕೆ ಒಳಗಾದವರ ನೆರವಿಗಾಗಿ ರಕ್ಷಾ ಕ್ಯೂಆರ್‌ ಕೋಡ್‌ ಅಭಿವೃದ್ಧಿ ಪಡಿಸಲಾಗಿದೆ. ಸ್ಥಳೀಯರು ಅಪಘಾತಕ್ಕೆ ಒಳಗಾದವರ ವಾಹನಕ್ಕೆ ಅಂಟಿಸಿರುವ ಈ ಕೋಡ್‌ ಸ್ಕ್ಯಾನ್‌ ಮಾಡುವ ಮೂಲಕ ಅವರ ಕುಟುಂಬದ ಸದಸ್ಯರಿಗೆ ತಿಳಿಸಬಹುದು. ಕರೆ ಮಾಡುವ ಮತ್ತು ಸ್ವೀಕರಿಸುವವರ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗುತ್ತದೆ. ಜತೆಗೆ ನಮ್ಮ ಸಂಸ್ಥೆ ಅಪಘಾತದ ಸ್ಥಳದ ಮಾಹಿತಿ ಪಡೆದು ಸ್ಥಳೀಯ ಆಸ್ಪತ್ರೆ ಮತ್ತು ಪೊಲೀಸ್‌ ಠಾಣೆಗೆ ಮಾಹಿತಿ ರವಾನಿಸಲಾಗುತ್ತದೆ’ ಎಂದು ತಿಳಿಸಿದರು. 

ಹೈ ಸೆಕ್ಯೂರಿಟಿ ನಂಬರ್‌ಪ್ಲೇಟ್‌: ಸೆ.19ಕ್ಕೆ ಹೈಕೋರ್ಟ್‌ ವಿಚಾರಣೆ

‘ರಕ್ಷಾ ಕ್ಯೂಆರ್‌ ಕೋಡ್‌ ಪಡೆಯಲು ವಾಹನದ ಮಾಲೀಕರಿಗೆ ಹೈವೇ ಡಿಲೈಟ್‌ನೊಂದಿಗೆ ವಾರ್ಷಿಕ ₹365 ಶುಲ್ಕ ಪಾವತಿಸಿ ನೋಂದಣಿ ಮಾಡಿಕೊಳ್ಳಬೇಕು. ರಕ್ತದ ಗುಂಪು, ವಾಹನದ ವಿಮೆ, ಆರೋಗ್ಯ ವಿಮೆ ಹಾಗೂ ಕುಟುಂಬದ ತುರ್ತು ಮಾಹಿತಿಯ ವಿವರಗಳನ್ನು ಇದರಲ್ಲಿ ಸೇರಿಸಬಹುದು. ಈ ಎಲ್ಲ ಮಾಹಿತಿಗಳು ಸುರಕ್ಷಿತವಾಗಿರಲಿವೆ ಎಂದರು.

ಹೆಚ್ಚಿನ ಮಾಹಿತಿಗೆ: https://highwaydelite.com/#/raksha-agent-order ಜಾಲತಾಣಕ್ಕೆ ಭೇಟಿ ನೀಡಬಹುದು.