ಬೆಂಬಲ ಬೆಲೆಯಡಿ ಅರ್ಧಕ್ಕಿಂತ ಕಡಿಮೆ ರಾಗಿ ಖರೀದಿ: ರೈತರು ಮಾರಿದ್ದು 2.26 ಲಕ್ಷ ಟನ್
ರಾಜ್ಯದಲ್ಲಿ ರಾಗಿ ಖರೀದಿ ಪ್ರಮಾಣ ಅರ್ಧಕ್ಕಿಂತ ಕಡಿಮೆಯಾಗಿದೆ. ಕೇಂದ್ರವು 5.99 ಮೆಟ್ರಿಕ್ ಟನ್ ರಾಗಿ ಖರೀದಿಗೆ ಅವಕಾಶ ನೀಡಿದ್ದರೂ ಬರಗಾಲ ಮತ್ತಿತರ ಕಾರಣಗಳಿಂದಾಗಿ ಕೇವಲ 2.26 ಲಕ್ಷ ಮೆಟ್ರಿಕ್ ಟನ್ ರಾಗಿ ಮಾತ್ರ ಖರೀದಿಯಾಗಿದೆ.
ಸಿದ್ದು ಚಿಕ್ಕಬಳ್ಳೇಕೆರೆ
ಬೆಂಗಳೂರು (ಜು.08): ಕೇಂದ್ರ ಸರ್ಕಾರದ ಕನಿಷ್ಠ ಬೆಂಬಲ ಲಕ್ಷ ಬೆಲೆ (ಎಂಎಸ್‌ಪಿ) ಯೋಜನೆಯಡಿ ರಾಜ್ಯದಲ್ಲಿ ರಾಗಿ ಖರೀದಿ ಪ್ರಮಾಣ ಅರ್ಧಕ್ಕಿಂತ ಕಡಿಮೆಯಾಗಿದೆ. ಕೇಂದ್ರವು 5.99 ಮೆಟ್ರಿಕ್ ಟನ್ ರಾಗಿ ಖರೀದಿಗೆ ಅವಕಾಶ ನೀಡಿದ್ದರೂ ಬರಗಾಲ ಮತ್ತಿತರ ಕಾರಣಗಳಿಂದಾಗಿ ಕೇವಲ 2.26 ಲಕ್ಷ ಮೆಟ್ರಿಕ್ ಟನ್ ರಾಗಿ ಮಾತ್ರ ಖರೀದಿಯಾಗಿದೆ. ರಾಜ್ಯದಲ್ಲಿ ಎಂಎಸ್‌ಪಿ ಅಡಿಯಲ್ಲಿ 1,72,673 ರೈತರು 3.96 ಲಕ್ಷ ಮೆಟ್ರಿಕ್ ಟನ್ ರಾಗಿ ಮಾರಾಟಕ್ಕೆ ನೋಂದಣಿ ಮಾಡಿಸಿದ್ದರು. ಆದರೆ ಇದರಲ್ಲಿ ಕೊನೆಯ ದಿನವಾದ ಜೂ.30 ರವರೆಗೂ 1,10,523 ರೈತರು 2,26,017 ಕ್ವಿಂಟಾಲ್ ಮಾತ್ರ ರಾಗಿ ಮಾರಾಟ ಮಾಡಿದ್ದಾರೆ.
ಇದರಿಂದಾಗಿ ಭವಿಷ್ಯದಲ್ಲಿ ವ್ಯವಸ್ಥೆಯಡಿ ರಾಗಿ ವಿತರಣೆಗೂ ಸಾಕಷ್ಟು ತಿಂಗಳು ಖೋತಾ ಉಂಟಾಗಲಿದೆ ಎಂದು ಹೇಳಲಾಗುತ್ತಿದೆ. ಪಡಿತರ 2023-24 ನೇ ಸಾಲಿನಲ್ಲಿ ರಾಜ್ಯದಲ್ಲಿ ಉಂಟಾದ ಭೀಕರ ಬರಗಾಲದಿಂದಾಗಿ ರಾಗಿ ಬೆಳೆಯುವ ಪ್ರದೇಶ ಗಣನೀಯವಾಗಿ ಇಳೆಕೆಯಾಗಿತ್ತು. ಅಷ್ಟೇ ಅಲ್ಲ ಬೆಳೆದ ಪ್ರದೇಶದಲ್ಲೂ ಮಳೆಯ ಅಭಾವದಿಂದಾಗಿ ಇಳುವರಿ ಭಾರೀ ಪ್ರಮಾಣದಲ್ಲಿ ಕಡಿಮೆಯಾಗಿತ್ತು. ಇದು ಬೆಂಬಲ ಬೆಲೆ ಪ್ರಯೋಜನ ಪಡೆಯಲು ರೈತರಿಗೆ ಪ್ರಮುಖ ಹಿನ್ನಡೆ ಉಂಟು ಮಾಡಿದೆ.
ಸಿರಿಧಾನ್ಯ ವ್ಯಾಪಾರಸ್ಥರಿಂದ ಡಿಮ್ಯಾಂಡ್: ಪ್ರತಿ ಕ್ವಿಂಟಲ್ ರಾಗಿಗೆ 3846 ರು. ಬೆಂಬಲ ಬೆಲೆ ನಿಗದಿ ಮಾಡಲಾಗಿದೆ. ಆದರೆ, ಮುಕ್ತ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ರಾಗಿಯು ಕೆಲವೆಡೆ ಕ್ವಿಂಟಲ್‌ಗೆ 4000 ದಿಂದ 4500 ರುಪಾಯಿವರೆಗೂ ಮಾರಾಟವಾಗಿದ್ದು ಇದರಿಂದಾಗಿಯೂ ಎಂಎಸ್‌ಪಿಯಡಿ ಖರೀದಿ ಪ್ರಮಾಣ ಕುಂಠಿತವಾಯಿತು.
ಗ್ರಾಮ ಪಂಚಾಯತಿಗಳಿಗೆ ರಾಜ್ಯ ಸರ್ಕಾರ ಡೆಂಘೀ ಅಲರ್ಟ್: ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದೇನು?
ಸಿರಿಧಾನ್ಯಗಳ ಸಗಟು ವ್ಯಾಪಾರಸ್ಥರಿಂದ ಮುಕ್ತ ಮಾರುಕಟ್ಟೆಯಲ್ಲಿ ರಾಗಿಗೆ ಡಿಮ್ಯಾಂಡ್ ಉಂಟಾಗಿದ್ದೂ ಒಂದು ಕಾರಣವಾಗಿದೆ. 2022-23 ರಲ್ಲಿ ಉತ್ತಮವಾಗಿ ಮಳೆಯಾಗಿ ಬೆಳೆ ಹಾನಿ ಉಂಟಾಗಿದ್ದರೂ ಒಂದಷ್ಟು ಫಸಲು ಕೈಗೆ ಬಂದಿತ್ತು. 3,04,737 ರೈತರು 45,47,100 ಕ್ವಿಂಟಲ್ ರಾಗಿಯನ್ನು ಬೆಂಬಲ ಬೆಲೆ ಯೋಜನೆಯಡಿ ಮಾರಾಟ ಮಾಡಿದ್ದರು. ಆದರೆ 2023-24 ಕ್ಕೆ ಹೋಲಿಸಿದರೆ ಬಹಳ ಪ್ರಮಾಣದಲ್ಲಿ ಕಡಿಮೆಯಾಗಿದೆ.