PSI Recruitment Scam ಹೂಕುಂಡದಲ್ಲಿ ಬ್ಲೂಟೂತ್ ಬಚ್ಚಿಟ್ಟು ಪರೀಕ್ಷೆ ದಿನ ಒಳಉಡುಪಿನಲ್ಲಿಟ್ಟು ಪ್ರವೇಶ!

- ಪಿಎ​ಸ್‌ಐ ಪರೀಕ್ಷೆ ಅಕ್ರ​ಮ​ದಲ್ಲಿ ನಕ​ಲಿಗೆ ನಾನಾ ತಂತ್ರ ಬಳ​ಕೆ

- ಎಕ್ಸಾಂ ರೂಂ ಪಕ್ಕದ ಹೂಕುಂಡ​ದಲ್ಲಿ ಬಚ್ಚಿ​ಟ್ಟಿ​ದ್ದ ಬ್ಲೂಟೂತ್‌

- ಬಂಧಿತ ಅಭ್ಯರ್ಥಿ ಪ್ರಭು ಶರ​ಣ​ಪ್ಪ​ನಿಂದ ಸಿಐ​ಡಿಗೆ ಮಾಹಿ​ತಿ
 

PSI Recruitment Scam Karnataka Bluetooth hide in flower pot arrest candidate confess infront of CID Police ckm

ಕಲಬುರಗಿ(ಮೇ.04): ಪಿಎ​ಸ್‌ಐ ನೇಮ​ಕಾತಿ ಪರೀಕ್ಷೆ ಅಕ್ರ​ಮಕ್ಕೆ ಬ್ಲೂಟೂತ್‌ ಅನ್ನು ತಪಾ​ಸ​ಣಾ ಸಿಬ್ಬಂದಿಯ ಕಣ್ತ​ಪ್ಪಿಸಿ ಪರೀಕ್ಷಾ ಕೇಂದ್ರಕ್ಕೆ ಯಾವ ರೀತಿ ಕೊಂಡೊ​ಯ್ಯ​ಲಾ​ಗು​ತ್ತಿತ್ತು ಎಂಬ ಮತ್ತೊಂದು ಆಘಾ​ತ​ಕಾರಿ ವಿಚಾರ ಇದೀಗ ಬೆಳ​ಕಿಗೆ ಬಂದಿ​ದೆ. ಪರೀ​ಕ್ಷೆಗೂ ಮುನ್ನಾದಿನ ಪರೀಕ್ಷಾ ಕೇಂದ್ರದ ಮುಂದಿ​ರುವ ಹೂಕುಂಡ​ದಲ್ಲಿ ಬ್ಲೂಟೂತ್‌ ಬಚ್ಚಿಟ್ಟು, ಪರೀಕ್ಷೆ ದಿನ ಅದನ್ನು ಒಳ​ಉ​ಡು​ಪ​ಲ್ಲಿ ಇ​ಟ್ಟು​ಕೊಂಡು ಕೋಣೆ​ಯೊ​ಳಗೆ ಕೊಂಡೊ​ಯ್ದಿದ್ದಾಗಿ ಆರೋ​ಪಿ​ಯೊಬ್ಬ ಇದೀಗ ಸಿಐಡಿ ಮುಂದೆ ಬಾಯ್ಬಿ​ಟ್ಟಿ​ದ್ದಾ​ನೆ.

ಕಲ​ಬು​ರ​ಗಿಯ ಎಂ.​ಎ​ಸ್‌.ಇರಾನಿ ಪದವಿ ಕಾಲೇ​ಜಿ​ನಲ್ಲಿ ಪಿಎಸ್‌ಐ ಪರೀಕ್ಷೆ ವೇಳೆ ಅಕ್ರಮ ನಡೆಸಿ ಬಂಧಿ​ತ​ನಾ​ಗಿ​ರುವ ಅಭ್ಯರ್ಥಿ ಪ್ರಭು ಶರ​ಣಪ್ಪ ಈ ವಿಚಾರ ಬಹಿ​ರಂಗ​ಪ​ಡಿ​ಸಿ​ದ್ದಾ​ನೆ. ಮಂಗಳವಾರ ಸ್ಟೇಷನ್‌ ಬಜಾರ್‌ ಠಾಣೆ ಪೊಲೀಸರು ಈತನನ್ನು ಪರೀಕ್ಷೆ ನಡೆದ ಎಂ.ಎಸ್‌.ಇರಾನಿ ಪದವಿ ಕಾಲೇಜಿನೊ​ಳಗೆ ಕರೆದೊಯ್ದು ಸ್ಥಳ ಮಹಜರು ನಡೆಸಿ ಈ ಅಕ್ರ​ಮದ ಕುರಿತು ಮಾಹಿತಿ ಪಡೆ​ದಿದ್ದಾ​ರೆ.

ಕಲಬುರಗಿ ಆಯ್ತು, ಯಾದಗಿರಿಯಲ್ಲೂ ಅಕ್ರಮ ನೇಮಕ..?

1 ದಿನ ಮೊದಲೇ ಹೋಗಿ​ದ್ದ: ಪರೀಕ್ಷೆಗೂ ಒಂದು ದಿನ ಮೊದಲೇ ಪ್ರಭು ಶರ​ಣಪ್ಪ ಪರೀಕ್ಷಾ ಕೇಂದ್ರದತ್ತ ಹೋಗಿ ಬಂದಿದ್ದ. ಅ.3ರಂದು ಪರೀಕ್ಷೆ ಇತ್ತು. ಹೀಗಾಗಿ ಅ.2ರಂದೇ ಪರೀಕ್ಷಾ ಕೇಂದ್ರವನ್ನು ಪರಿ​ಶೀ​ಲಿಸಲು ಎಂ.ಎ​ಸ್‌.​ಇ​ರಾ​ನಿ ಕಾಲೇ​ಜಿಗೆ ಹೋಗಿ​ದ್ದ. ಆತನ ಹಾಲ್‌ಟಿಕೆಟ್‌ ಅನುಸಾರ ಯಾವ ಕೋಣೆ​ಯಲ್ಲಿ ಪರೀ​ಕ್ಷೆ ಬರೆ​ಯ​ಬೇ​ಕಿತ್ತೋ ಆ ಕೋಣೆಯ 20 ಮೀಟರ್‌ ಅಂತ​ರ​ದ​ಲ್ಲಿ​ರುವ ಹೂಕುಂಡ​ದಲ್ಲಿ ಬ್ಲೂಟೂತ್‌ ಉಪ​ಕ​ರಣ ಬಚ್ಚಿಟ್ಟು ಬಂದಿದ್ದ. ಪರೀಕ್ಷೆ ದಿನ ಆ ಬ್ಲೂಟೂ​ತ್‌ ಅನ್ನು ಯಾರಿಗೂ ಗೊತ್ತಾ​ಗ​ದಂತೆ ರಹ​ಸ್ಯ​ವಾಗಿ ಒಳಉಡುಪಿನಲ್ಲಿ ಹಾಕಿ​ಕೊಂಡು ಪರೀಕ್ಷಾ ಕೇಂದ್ರಕ್ಕೆ ಹೋಗಿದ್ದಾಗಿ ಸ್ಥಳ ಮಹಜರು ವೇಳೆ ಆರೋ​ಪಿ ಹೇಳಿ​ಕೊಂಡಿ​ದ್ದಾ​ನೆ.

ಎಂ.ಎಸ್‌.ಇರಾನಿ ಪದವಿ ಕಾಲೇಜಿನ ಕಂಪ್ಯೂ​ಟರ್‌ ಕೋಣೆ ಪ್ರಭುವಿನ ಪರೀಕ್ಷಾ ಕೇಂದ್ರ​ವಾ​ಗಿ​ತ್ತು. ಪರೀಕ್ಷೆ ದಿನ ಮೆಟಲ್‌ ಡಿಟೆಕ್ಟರ್‌ ಸೇರಿ ವಿವಿಧ ರೀತಿ​ಯ​ಲ್ಲಿ ಅಭ್ಯ​ರ್ಥಿ​ಗ​ಳನ್ನು ಪರಿಶೀ​ಲಿಸಿ ಪರೀಕ್ಷಾ ಕೇಂದ್ರ​ದೊ​ಳಗೆ ಬಿಡ​ಲಾ​ಗು​ತ್ತದೆ. ಆ ಸಂದ​ರ್ಭ​ದಲ್ಲಿ ಬ್ಲೂಟೂತ್‌ ಪತ್ತೆಯಾಗುವ ಸಾಧ್ಯತೆ ಇರುವ ಹಿನ್ನೆ​ಲೆ​ಯಲ್ಲಿ ಈ ತಂತ್ರ ಅನು​ಸ​ರಿ​ಸಿ​ದ್ದಾ​ಗಿ ಆರೋಪಿ ಹೇಳಿ​ಕೊಂಡಿ​ದ್ದಾ​ನೆ.

ಪರೀಕ್ಷೆ ಅಕ್ರ​ಮದ ಕಿಂಗ್‌​ಪಿನ್‌ ಆಗಿ​ರುವ ಆರ್‌.​ಡಿ.​ಪಾ​ಟೀ​ಲನಿಗೆ ಹಣ ಕೊಟ್ಟೇ ಪ್ರಭು ಶರ​ಣಪ್ಪ ಎಕ್ಸಾಂಗೆ ಕೂತಿ​ದ್ದ. ಹೀಗಾಗಿ ಈತ​ನಿಗೂ ಬ್ಲೂಟೂತ್‌ ಅನ್ನು ಹೇಗೆ ಬಳ​ಸ​ಬೇಕು ಎಂಬ ಕುರಿತು ಆರ್‌.​ಡಿ.​ಪಾಟೀಲ ಗ್ಯಾಂಗ್‌ ತರ​ಬೇತಿ ನೀಡಿತ್ತು ಎಂದು ಹೇಳ​ಲಾ​ಗಿದೆ.

ಧೈರ್ಯವಿದ್ರೆ ಪ್ರಿಯಾಂಕ್ ಖರ್ಗೆ ಸಿಐಡಿ ವಿಚಾರಣೆಗೆ ಹಾಜರಾಗಲಿ: ಜಗದೀಶ್ ಶೆಟ್ಟರ್

ಕಾಶೀ​ನಾ​ಥ್‌ರಿಂದ ಅಕ್ರಮ ಹೇಗೆ?
ದಿವ್ಯಾ ಹಾಗ​ರ​ಗಿಗೆ ಪರೀಕ್ಷೆ ಮೇಲ್ವಿ​ಚಾ​ರ​ಕ​ರಿಂದಲೇ ಓಎಂಆ​ರ್‌​ಶೀ​ಟ್‌​ನಲ್ಲಿ ಉತ್ತರ ಬರೆ​ಸುವ ಪ್ಲ್ಯಾನ್‌ ಕೊಟ್ಟಿ​ದ್ದೇ ಕಾಶೀ​ನಾ​ಥ್‌ ಎನ್ನ​ಲಾ​ಗಿದೆ. ಅಕ್ರಮ ನಡೆದ ಜ್ಞಾನ​ಜ್ಯೋತಿ ಶಾಲೆಯಲ್ಲಿ ನಡೆದ ಪಿಎ​ಸ್‌ಐ ನೇಮ​ಕಾ​ತಿ ಪರೀಕ್ಷಾ ಕೇಂದ್ರದ ಮೇಲ್ವಿ​ಚಾ​ರ​ಕ ಈತನೇ ಆಗಿದ್ದ. ಡೀಲ್‌ ಮಾಡಿ​ಕೊಂಡ ಅಭ್ಯ​ರ್ಥಿ​ಗ​ಳು ಯಾವ ಕೊಠ​ಡಿ​ಯಲ್ಲಿ ಕೂತಿ​ದ್ದಾ​ರೆಂದು ಸ್ಪಷ್ಟ​ವಾಗಿ ತಿಳಿ​ದು​ಕೊಂಡಿದ್ದ ಕಾಶೀ​ನಾಥ್‌, ಆ ಕೊಠ​ಡಿ​ಗ​ಳಿ​ಗೆ ತನಗೆ ಬೇಕಾದ ಶಿಕ್ಷ​ಕಿ​ಯ​ರನ್ನು ಮೇಲ್ವಿ​ಚಾ​ರ​ಕ​ರ​ನ್ನಾಗಿ ಹಾಕಿದ್ದ. ಅವ​ರಿಗೆ ಅಭ್ಯ​ರ್ಥಿ​ಗಳ ಓಎಂಆರ್‌ ಶೀಟ್‌ ನಂಬರ್‌ ಕೂಡ ನೀಡಿದ್ದ. ಪರೀಕ್ಷೆ ಬರೆದು ಹೋದ ವಿದ್ಯಾ​ರ್ಥಿ​ಗಳ ಓಎಂಆರ್‌ಶೀಟ್‌ ಅನ್ನು ಮೇಲ್ವಿ​ಚಾ​ರ​ಕರೇ ತಿದ್ದು​ತ್ತಿ​ದ್ದರು. ಈ ಮೂಲಕ ಹಣ ಕೊಟ್ಟವಿದ್ಯಾ​ರ್ಥಿ​ಗಳು ಉತ್ತಮ ಅಂಕ​ಗ​ಳಿ​ಸಲು ನೆರ​ವಾ​ಗು​ತ್ತಿ​ದ್ದ​ರು ಎಂದು ಹೇಳ​ಲಾ​ಗಿ​ದೆ.

Latest Videos
Follow Us:
Download App:
  • android
  • ios