- ಮೂವರೂ ಪರೀಕ್ಷಾ ಅಕ್ರಮದ ಆರೋಪಿಗಳು- ಇಬ್ಬರ ಬಂಧನ, ಇನ್ನಿಬ್ಬರಿಗಾಗಿ ಶೋಧ- ಬೆಂಗಳೂರು ಸಮೀಪದ ಚಿನ್ನಕುರ್ತಿ ಗ್ರಾಮದವರು 

ಬೆಂಗಳೂರು (ಮೇ.6): ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ (Police Sub Inspector) ನೇಮಕಾತಿ ಪರೀಕ್ಷೆಯಲ್ಲಿ (recruitment Exam) ರಾರ‍ಯಂಕ್‌ ಪಡೆದು ಆಯ್ಕೆಯಾಗಿದ್ದ ಒಂದೇ ಊರಿನ ಮೂವರು ಅಭ್ಯರ್ಥಿಗಳು, ಈಗ ಪರೀಕ್ಷಾ ಅಕ್ರಮ ಆರೋಪದಡಿ ಆರೋಪಿಗಳಾಗಿರುವ ಕುತೂಹಲಕಾರಿ ಸಂಗತಿ ಬೆಳಕಿಗೆ ಬಂದಿದೆ.

ಬೆಂಗಳೂರು (Bengaluru) ಹೊರವಲಯದ ಕಗ್ಗಲಿಪುರ (Kaggalipura) ಸಮೀಪದ ಚಿನ್ನಕುರ್ತಿ ಗ್ರಾಮದ ಸಿ.ಜಿ.ರಾಘವೇಂದ್ರ, ಸಿ.ಎಂ.ನಾಗರಾಜ್‌ ಹಾಗೂ ಆತನ ಸೋದರ ಸಿ.ಎಂ.ನಾರಾಯಣ ವಿರುದ್ಧ ಪರೀಕ್ಷಾ ಆರೋಪ ಕೇಳಿ ಬಂದಿದ್ದು, ಈ ಮೂವರ ಪೈಕಿ ರಾಘವೇಂದ್ರ ಹಾಗೂ ನಾಗರಾಜ ಸಿಐಡಿಗೆ ಸೆರೆ ಸಿಕ್ಕಿದ್ದಾರೆ. ತಪ್ಪಿಸಿಕೊಂಡಿರುವ ನಾರಾಯಣ ಪತ್ತೆಗೆ ತನಿಖೆ ನಡೆದಿದೆ.

ಬೆಂಗಳೂರಿನಲ್ಲಿ ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ಹುದ್ದೆಗೆ ಈ ಮೂವರು ಪರೀಕ್ಷೆ ಬರೆದಿದ್ದರು. ಇದರಲ್ಲಿ ಸಾಮಾನ್ಯ ವರ್ಗದಲ್ಲಿ ರಾಜ್ಯಕ್ಕೆ 9ನೇ ರಾರ‍ಯಂಕ್‌ ( ಅಂಕಗಳು 157.5) ಸಿ.ಎಂ. ನಾರಾಯಣ, 11ನೇ ರಾರ‍ಯಂಕ್‌ (ಅಂಕಗಳು 157) ಆತನ ಅಣ್ಣ ಸಿ.ಎಂ.ನಾಗರಾಜ್‌ ಹಾಗೂ ರಾಘವೇಂದ್ರ 62ನೇ ರಾರ‍ಯಂಕ್‌ (ಅಂಕಗಳು 144) ಪಡೆದಿದ್ದರು. ಅಲ್ಲದೆ ಈ ಮೂವರು ಮೊದಲ ಪತ್ರಿಕೆಯಲ್ಲಿ ಕಡಿಮೆ ಅಂಕಗಳಿಸಿದ್ದರು, ಎರಡನೇ ಪತ್ರಿಕೆಯಲ್ಲಿ ಹೆಚ್ಚಿನ ಅಂಕ ಪಡೆದಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ಸಿಐಡಿ (CID) ಅಧಿಕಾರಿಗಳು ಹೇಳಿದ್ದಾರೆ.

ನಾರಾಯಣನಿಗೆ ಮೊದಲ ಪತ್ರಿಕೆಯಲ್ಲಿ 24, ಎರಡನೇ ಪತ್ರಿಕೆಯಲ್ಲಿ 133.5 ಅಂಕಗಳು, ನಾಗರಾಜ್‌ಗೆ ಮೊದಲ ಪತ್ರಿಕೆಯಲ್ಲಿ 31 ಹಾಗೂ ಎರಡನೇ ಪತ್ರಿಕೆಯಲ್ಲಿ 126 ಅಂಕಗಳು ಹಾಗೂ ರಾಘವೇಂದ್ರನಿಗೆ ಮೊದಲ ಪತ್ರಿಕೆಯಲ್ಲಿ 18 ಹಾಗೂ ಎರಡನೇ ಪತ್ರಿಕೆಯಲ್ಲಿ 126 ಅಂಕಗಳು ಬಂದಿದ್ದವು. ಒಂದೇ ಗ್ರಾಮದ ಮೂವರು ಆಯ್ಕೆ ಅಚ್ಚರಿಯಾಗಿತ್ತು. ಈಗ ಅವರ ನಿಜ ಬಣ್ಣ ಬಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎಡಿಜಿಪಿ ಪಿಎ, ಇಬ್ಬರು ಇನ್ಸ್‌ಪೆಕ್ಟರ್‌ಗಳ ವಿಚಾರಣೆ
ಬೆಂಗಳೂರು (ಮೇ.6):
ಪಿಎಸ್‌ಐ ನೇಮಕಾತಿ ಹಗರಣ ಸಂಬಂಧ ಪೊಲೀಸ್‌ ನೇಮಕಾತಿ ವಿಭಾಗದ ಎಡಿಜಿಪಿ ಆಪ್ತ ಸಹಾಯಕ ಹಾಗೂ ಇಬ್ಬರು ಇನ್ಸ್‌ಪೆಕ್ಟರ್‌ಗಳನ್ನು ಸಿಐಡಿ ವಿಚಾರಣೆ ನಡೆಸಿದೆ ಎಂದು ತಿಳಿದು ಬಂದಿದೆ. ಎಡಿಜಿಪಿ ಅಮೃತ್‌ ಪಾಲ್‌ ಅವರ ಆಪ್ತ ಸಹಾಯಕರು ಪಿಎಸ್‌ಐ ನೇಮಕಾತಿ ಪ್ರಕ್ರಿಯೆ ಆರಂಭದ ದಿನದಿಂದಲೂ ಕಾರ್ಯನಿರ್ವಹಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಆಪ್ತ ಸಹಾಯಕನನನ್ನು ಸಿಐಡಿ ವಿಚಾರಣೆ ನಡೆಸಿದೆ. ಅದೇ ರೀತಿ ಪರೀಕ್ಷೆ ನಿರ್ವಹಣೆ ಹೊತ್ತಿದ್ದ ಇಬ್ಬರು ಇನ್ಸ್‌ಪೆಕ್ಟರ್‌ಗಳಿಗೆ ಸಹ ತನಿಖೆ ಬಿಸಿ ತಟ್ಟಿದೆ ಎಂದು ಗೊತ್ತಾಗಿದೆ.

ನಾಲ್ವರು ಅಭ್ಯರ್ಥಿ​ಗಳ ಜತೆಗೆ ಸಿಪಿಐ .2 ಕೋಟಿ ಡೀಲ್‌
ಕಲಬುರಗಿ (ಮೇ. 6):
ಪಿಎ​ಸ್‌ಐ ಪರೀಕ್ಷೆ ಅಕ್ರ​ಮದ ಹಣ ಹಂಚಿ​ಕೊ​ಳ್ಳುವ ವಿಚಾ​ರ​ದಲ್ಲಿ ಬಂಧಿತ ಸಿಪಿಐ ಆನಂದ ಮೇತ್ರೆ ಹಾಗೂ ಕಿಂಗ್‌ಪಿನ್‌ ಆರ್‌.ಡಿ. ಪಾಟೀಲ ನಡುವೆ .2 ಕೋಟಿ ಡೀಲ್‌ ನಡೆ​ದಿತ್ತು. ಒಪ್ಪಂದ​ದಂತೆ ಆರ್‌.ಡಿ. ಪಾಟೀ​ಲಗೆ ಮೇತ್ರಿ .25 ಲಕ್ಷ ನೀಡೋದು ಬಾಕಿ ಇತ್ತು, ಇದೇ ಕಾರ​ಣಕ್ಕೆ ಇಬ್ಬರ ನಡುವೆ ಮನ​ಸ್ತಾಪ ಕೂಡ ಬೆಳೆ​ದಿತ್ತು ಎಂಬ ವಿಚಾರ ಇದೀಗ ಬಹಿ​ರಂಗ​ವಾ​ಗಿ​ದೆ.

ಅಧಿಕೃತವಾಗಿ ಆರ್ಡರ್ ಕಾಪಿ ಮೊದಲೇ PSI ಡ್ರೆಸ್ ಧರಿಸಿ ಭಾಷಣ ಮಾಡಿದ್ದ ಕಾನ್ಸ್​​ಟೇಬಲ್ ಸಸ್ಪೆಂಡ್!

ಕಲ​ಬು​ರ​ಗಿಯ ಪ್ರಭಾವಿ ಬಿಜೆಪಿ ನಾಯಕನೊಬ್ಬ ನಾಲ್ವರು ಅಭ್ಯ​ರ್ಥಿ​ಗ​ಳನ್ನು ಕಲಬುರಗಿ ಬೆರಳಚ್ಚು ವಿಭಾಗದ ಸಿಪಿಐ ಆನಂದ ಮೇತ್ರೆಗೆ ಪರಿ​ಚ​ಯಿ​ಸಿ​ಕೊ​ಟ್ಟಿ​ದ್ದ​ರು. ಈ ನಾಲ್ವರು ಅಭ್ಯ​ರ್ಥಿ​ಗ​ಳನ್ನು ಪಿಎ​ಸ್‌ಐ ಆಗಿ ನೇಮಕ ಮಾಡಲು ಸಲು​ವಾಗಿ ಆರ್‌.​ಡಿ.​ಪಾ​ಟೀ​ಲನ ಜತೆಗೆ ಮೇತ್ರೆ ಡೀಲ್‌ ಕುದು​ರಿ​ಸಿ​ದ್ದ. ಅದ​ರಂತೆ ಅಭ್ಯ​ರ್ಥಿ​ಗ​ಳಿಂದ 2 ಕೋಟಿ ಪಡೆ​ಯ​ಲಾ​ಗಿ​ದ್ದು, ಅದ​ರಲ್ಲಿ ಆರ್‌.​ಡಿ.​ಪಾ​ಟೀಲನಿಗೆ 1 ಕೋಟಿ ಕೊಡ​ಬೇ​ಕಿತ್ತು.

ಪಿಎಸ್‌ಐ ನೇಮಕಾತಿ ಹಗರಣ: ಪುರುಷ ವೇಷಭೂಷಣದಲ್ಲಿರುತ್ತಿದ್ದ ಫಸ್ಟ್‌ ರ‍್ಯಾಂಕ್ ಅಭ್ಯರ್ಥಿ ರಚನಾ ನಾಪತ್ತೆ!

ಡೀಲ್‌ ಆದ ಅಭ್ಯರ್ಥಿಗಳಿಗೆಲ್ಲರಿಗೂ ಬ್ಲೂಟೂತ್‌ ಮೂಲಕ ಉತ್ತರ ಪೂರೈಕೆಯಾಗಿ ತಾತ್ಕಾ​ಲಿಕ ಆಯ್ಕೆ​ಪ​ಟ್ಟಿ​ಯಲ್ಲಿ ಅವ​ರೆ​ಲ್ಲರ ಹೆಸರೂ ಪ್ರಕ​ಟ​ವಾ​ಗಿ​ತ್ತು. ಒಪ್ಪಂದ​ದಂತೆ ಪಟ್ಟಿಪ್ರಕ​ಟ​ವಾದ ಮಾರನೇ ದಿನವೇ ಆರ್‌.​ಡಿ.​ಪಾ​ಟೀ​ಲ್‌ಗೆ .1 ಕೋಟಿ ಬದ​ಲು ಕೇವಲ .75 ಲಕ್ಷ ನೀಡ​ಲಾ​ಗಿತ್ತು. ಈ ವಿಚಾ​ರ​ವಾ​ಗಿ ಆರ್‌.​ಡಿ.​ಪಾ​ಟೀಲ ಮತ್ತು ಮೇತ್ರಿ ನಡುವೆ ಮನ​ಸ್ತಾಪ ಉಂಟಾ​ಗಿತ್ತು ಎನ್ನ​ಲಾ​ಗಿ​ದೆ.