ಇನ್ಮುಂದೆ ರಜಾ ದಿನದಲ್ಲೂ ಆಸ್ತಿ ನೋಂದಣಿ ಕಾರ್ಯ: ಸಚಿವ ಕೃಷ್ಣಬೈರೇಗೌಡ
ಅ.21 ರಿಂದ ಪ್ರತಿ ನೋಂದಣಿ ಜಿಲ್ಲೆಗಳಲ್ಲಿ ಒಂದು ಉಪ ನೋಂದಣಿ ಕಚೇರಿಯು ಎರಡನೇ ಮತ್ತು ನಾಲ್ಕನೇ ಶನಿವಾರ ಹಾಗೂ ಭಾನುವಾರ ರಜಾ ದಿನಗಳಲ್ಲೂ ಕಾರ್ಯನಿರ್ವಹಿಸಲಿವೆ. ಪ್ರತಿ ನೋಂದಣಿ ಜಿಲ್ಲೆಯಲ್ಲಿ 5-6 ಕಚೇರಿಗಳು ಕಾರ್ಯನಿರ್ವಹಿಸುತ್ತಿದ್ದು, ಈ ಪೈಕಿ ಒಂದು ಕಚೇರಿ ಮಾತ್ರ ರಜೆ ದಿನದಲ್ಲಿ ಕಾರ್ಯನಿರ್ವಹಿಸಲಿದೆ. ರಜೆ ದಿನದಲ್ಲಿ ಕೆಲಸ ಮಾಡುವ ಕಚೇರಿಗೆ ಮಂಗಳವಾರದಂದು ರಜೆ ನೀಡಲಾಗುವುದು: ಕಂದಾಯ ಸಚಿವ ಕೃಷ್ಣ ಭೈರೇಗೌಡ
ಬೆಂಗಳೂರು(ಸೆ.24): ರಾಜ್ಯದಲ್ಲಿ ಸುಗಮ ಆಡಳಿತ ನೀಡುವ ಉದ್ದೇಶದಿಂದ ಮುಂದಿನ ತಿಂಗಳು 21ರಿಂದ ಉಪ-ನೋಂದಣಿ ಕಚೇರಿಗಳು ಶನಿವಾರ ಮತ್ತು ಭಾನುವಾರದ ರಜೆ ದಿನಗಳಲ್ಲೂ ಕಾರ್ಯನಿರ್ವಹಿಸಲಿವೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.
ಸೋಮವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಅ.21 ರಿಂದ ಪ್ರತಿ ನೋಂದಣಿ ಜಿಲ್ಲೆಗಳಲ್ಲಿ ಒಂದು ಉಪ ನೋಂದಣಿ ಕಚೇರಿಯು ಎರಡನೇ ಮತ್ತು ನಾಲ್ಕನೇ ಶನಿವಾರ ಹಾಗೂ ಭಾನುವಾರ ರಜಾ ದಿನಗಳಲ್ಲೂ ಕಾರ್ಯನಿರ್ವಹಿಸಲಿವೆ. ಪ್ರತಿ ನೋಂದಣಿ ಜಿಲ್ಲೆಯಲ್ಲಿ 5-6 ಕಚೇರಿಗಳು ಕಾರ್ಯನಿರ್ವಹಿಸುತ್ತಿದ್ದು, ಈ ಪೈಕಿ ಒಂದು ಕಚೇರಿ ಮಾತ್ರ ರಜೆ ದಿನದಲ್ಲಿ ಕಾರ್ಯನಿರ್ವಹಿಸಲಿದೆ. ರಜೆ ದಿನದಲ್ಲಿ ಕೆಲಸ ಮಾಡುವ ಕಚೇರಿಗೆ ಮಂಗಳವಾ ರದಂದು ರಜೆ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಒಂದೆಡೆ ಬೇರೂರಿರುವ ಸಬ್ ರಿಜಿಸ್ಟ್ರಾರ್‌ಗಳ ಟ್ರಾನ್ಸಫರ್: ಸಚಿವ ಎಚ್.ಕೆ. ಪಾಟೀಲ್
ರಜೆ ದಿನಗಳಲ್ಲಿ ಯಾವ ನೋಂದಣಿ ಕಚೇರಿ ಕಾರ್ಯನಿರ್ವಹಿಸಲಿವೆ ಎಂಬುದರ ಕುರಿತು ಮೊದಲೇ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ. ನೋಂದಣಿಗಾಗಿ ಸಾರ್ವಜನಿಕರು ಅರ್ಜಿ ಹಾಕಿದಾಗ ಯಾವ ಕಚೇರಿ ತೆರೆದಿರುತ್ತದೆ ಎಂಬ ಮಾಹಿತಿಯನ್ನು ಆನ್‌ಲೈನ್ ಮೂಲಕ ಮಾಹಿತಿ ನೀಡಲಾಗುವುದು. ಇದು ನಗರ ಪ್ರದೇಶಗಳಿಗೆ ಮಾತ್ರ ಅನ್ವಯವಾಗಲಿದೆ. ದುಡಿಯುವ ಮಧ್ಯಮ ವರ್ಗದ ಜನರು ವಾರದ ದಿನಗಳಲ್ಲಿ ತಮ್ಮ ಕೆಲಸಗಳನ್ನು ಬಿಟ್ಟು ನೋಂದಣಿ ಕಚೇರಿಗಳಿಗೆ ಆಗಮಿಸುವುದು ಕಷ್ಟಕರವಾಗುತ್ತಿರುವು ದನ್ನು ಗಮನಿಸಿ ಈ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ, ನೋಂದಣಿಗಾಗಿ ಹೊರ ರಾಜ್ಯದಿಂದ ಆಗಮಿಸು ವವರಿಗೂ ಅನಾನುಕೂಲವಾಗಲಿದೆ. ಈಹಿನ್ನೆಲೆಯಲ್ಲಿ ರಜೆ ದಿನವನ್ನು ಕಾರ್ಯ ನಿರ್ವಹಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಶನಿವಾರ- ಭಾನುವಾರಗಳಲ್ಲೂ ನೋಂದಣಿ ಕಚೇರಿಗಳನ್ನು ತೆರೆಯಬೇಕು ಎಂಬ ಒತ್ತಾಯ ಈ ಹಿಂದಿನಿಂದಲೂ ಇತ್ತು. ಅಲ್ಲದೆ, ಬಜೆಟ್ ವೇಳೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಗ್ಗೆ ಇಲಾಖೆಗೆ ಸೂಚನೆ ನೀಡಿದ್ದರು. ಹೀಗಾಗಿ ಇದಕ್ಕೆ ಬೇಕಾದ ಕಾನೂನುಗಳನ್ನು ತಿದ್ದುಪಡಿ ಮಾಡಿ, ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿಯೂ ಒಪ್ಪಿಗೆ ಪಡೆಯಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಆಸ್ತಿ ನೋಂದಣಿಯ ಕಾವೇರಿ ತಂತ್ರಾಂಶ ಹ್ಯಾಕ್?
ವೈಯಕ್ತಿಕ ನಿಂದನೆ ನಮ್ಮ ಸಂಸ್ಕೃತಿಯಲ್ಲ: ಎಚ್‌ಡಿಕೆಗೆ ಕೃಷ್ಣಬೈರೇಗೌಡ ತಿರುಗೇಟು
ಬೆಂಗಳೂರು: ಗಂಗೇನಹಳ್ಳಿ ಡಿನೊಟಿಫಿಕೇಷನ್ ಪ್ರಕರಣ ಸಂಬಂಧ ಕೇಂದ್ರ ಉಕ್ಕು ಸಚಿವ ಎಚ್ .ಡಿ.ಕುಮಾರಸ್ವಾಮಿ ಅವರಂತೆ ವೈಯಕ್ತಿಕ ನಿಂದನೆ ಮಾಡುವುದು ನಮ್ಮ ಸಂಸ್ಕೃತಿಯಲ್ಲ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ತಿರುಗೇಟು ನೀಡಿದ್ದಾರೆ.
ಸೋಮವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಯಾರು ಯಾರನ್ನೇ ನಿಂದಿಸಿದರೂ ಸತ್ಯ ಏನು ಎಂಬುದು ಜನರಿಗೆ ತಿಳಿದಿದೆ. ನನ್ನನ್ನು ಸತ್ಯ ಹರಿಶ್ಚಂದ್ರನಾ? ಹೆಬ್ಬೆಟ್ಟು ಎಂದೆಲ್ಲಾ ಜರಿದಿದ್ದಾರೆ. ನಾನು ಸತ್ಯ ಹರಿಶ್ಚಂದ್ರ ಎಂದು ಹೇಳಿಕೊಂಡಿಲ್ಲ. ರಾಜಕೀಯ ಜೀವನದಲ್ಲಿರುವವರು ಯಾರೂ ಸತ್ಯ ಹರಿಶ್ಚಂದ್ರರಲ್ಲ. ನಾನು ಕೆಲವು ಪ್ರಶ್ನೆಗಳನ್ನು ಕೇಳಿದ್ದು, ಅದಕ್ಕೆ ಉತ್ತರ ಕೇಳಿದೆ ಅಷ್ಟೇ. ಅಸ್ತಿತ್ವ ಇಲ್ಲದ ವ್ಯಕ್ತಿಯ ಅರ್ಜಿಯ ಮೇಲೆ ಡಿನೊಟೀಫೈ ಮಾಡಲು ಕಾರಣವೇನು' ಎಂದು ಕಿಡಿಕಾರಿದರು.