ಬೆಂಗಳೂರು :  ಮತ್ತೊಂದು ಪ್ರಕರಣದಲ್ಲಿ ‘ಪುಲ್ವಾಮಾದಲ್ಲಿ ನಡೆದಿರುವುದು ಸಣ್ಣ ಟ್ರೇಲರ್, ಪಿಕ್ಚರ್ ಅಭಿ ಬಾಕಿ ಹೈ’ ಎಂದು ಸ್ಟೇಟಸ್ ಹಾಕಿದ್ದ ಕಮ್ಮನಹಳ್ಳಿ ಎಚ್‌ಬಿಎಸ್ ಲೇಔಟ್ ನಿವಾಸಿ ಫೈಜ್ ರಶೀದ್ (20 ) ಎಂಬಾತ ಸಿಸಿಬಿ ಪೊಲೀಸರ ಅತಿಥಿಯಾಗಿದ್ದಾನೆ. 

ಆರೋಪಿ ಖಾಸಗಿ ಕಾಲೇಜಿನಲ್ಲಿ ಕಂಪ್ಯೂ ಟರ್ ಸೈನ್ಸ್‌ಗೆ ದಾಖಲಾತಿ ಪಡೆದಿದ್ದ. ವಿದ್ಯಾ ಭ್ಯಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದ ಆರೋಪಿ ಸೂಕ್ತ ಕೆಲಸಕ್ಕಾಗಿ ಹುಡುಕಾಟ ನಡೆ ಸಿದ್ದ. ಈತ ‘ಸಮೂಹ ಹತ್ಯೆಗಳು, ರಾಮ  ಮಂದಿರ, 2002ರ ಘಟನೆಗೆ ಪುಲ್ವಾಮಾದಲ್ಲಿ ನಡೆದದ್ದು ಸಣ್ಣ ಪ್ರತೀಕಾರ ಮಾತ್ರ’ ಎಂದು ಹೇಳುವ ಮೂಲಕ ಭಾರತೀಯ ಸೈನಿಕರನ್ನು ಅವಮಾನ ಮಾಡಿದ್ದ. 

ಆರೋಪಿಯ ಸ್ಟೇಟಸನ್ನು ಸಾಮಾಜಿಕ ತಾಣದಲ್ಲಿರುವ ಈತನ ಸ್ನೇಹಿತರೇ ಬೆಂಗಳೂರು ನಗರ ಪೊಲೀಸ್ ಕಮಿಷನರೇಟ್‌ನ ಖಾತೆಗೆ ಟ್ಯಾಗ್ ಮಾಡಿದ್ದರು. ಆರೋಪಿ ತಮ್ಮ ಫೇಸ್‌ಬುಕ್ ವಾಲ್‌ನಲ್ಲಿ ಫೋಟೋ ಹಾಕಿರಲಿಲ್ಲ. 

ವಿಳಾಸವನ್ನೂ ಹಾಕಿರಲಿಲ್ಲ. ಆಕ್ಷೇಪಾರ್ಹ ಬರಹ ಹಾಕುವ ಉದ್ದೇಶ ದಿಂದಲೇ ನಕಲಿ ಫೇಸ್‌ಬುಕ್ ಖಾತೆ ತೆರೆದಿದ್ದ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.