Asianet Suvarna News Asianet Suvarna News

9 ದಿನ ಚಿಕಿತ್ಸೆಗೆ 9 ಲಕ್ಷ ಕೇಳಿದ ಖಾಸಗಿ ಆಸ್ಪತ್ರೆ..!

ಕೊರೋನಾ ಸೋಂಕಿಗೆ ತುತ್ತಾಗಿ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ರೋಗಿಯೊಬ್ಬರಿಗೆ ಚಿಕಿತ್ಸೆ ನೀಡಲು .9 ಲಕ್ಷ ಬಿಲ್‌ ಆಗುವುದಾಗಿ ನಗರದ ಖಾಸಗಿ ಆಸ್ಪತ್ರೆಯ ಸಿಬ್ಬಂದಿ ತಿಳಿಸಿ ವಾಪಸ್‌ ಕಳಿಸಿರುವ ಘಟನೆ ನಗರದಲ್ಲಿ ನಡೆದಿದೆ.

Private hospital charge 9 lakh for 9 days treatment to a covid19 patient in Bangalore
Author
Bangalore, First Published Jul 15, 2020, 7:20 AM IST

ಬೆಂಗಳೂರು(ಜು.15): ಕೊರೋನಾ ಸೋಂಕಿಗೆ ತುತ್ತಾಗಿ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ರೋಗಿಯೊಬ್ಬರಿಗೆ ಚಿಕಿತ್ಸೆ ನೀಡಲು .9 ಲಕ್ಷ ಬಿಲ್‌ ಆಗುವುದಾಗಿ ನಗರದ ಖಾಸಗಿ ಆಸ್ಪತ್ರೆಯ ಸಿಬ್ಬಂದಿ ತಿಳಿಸಿ ವಾಪಸ್‌ ಕಳಿಸಿರುವ ಘಟನೆ ನಗರದಲ್ಲಿ ನಡೆದಿದೆ.

ಸುಮಾರು 67 ವರ್ಷದ ಕೋರಮಂಗಲ ನಿವಾಸಿಯೊಬ್ಬರು ಕೊರೋನಾ ಸೋಂಕಿಗೆ ತುತ್ತಾಗಿ ಬಳಲುತ್ತಿದ್ದರು. ತಕ್ಷಣ ಸಂಬಂಧಿಕರು ಚಿಕಿತ್ಸೆ ಪಡೆಯಲು ನಗರದ ವೈಟ್‌ಫೀಲ್ಡ್‌ ನಲ್ಲಿರುವ ಕೊಲಂಬಿಯಾ ಏಷ್ಯಾ ಆಸ್ಪತ್ರೆ ಕರೆದೊಯ್ದರು. ರೋಗಿಯನ್ನು ಪರಿಶೀಲಿಸಿದ ವೈದ್ಯರು, 9 ದಿನ ಚಿಕಿತ್ಸೆ ಕೊಡಬೇಕು. ಪ್ರತಿ ದಿನ ಒಂದು ಲಕ್ಷ ರು.ಗಳಂತೆ 9 ಲಕ್ಷ ರು.ಗಳಾಗುತ್ತದೆ ಎಂದು ತಿಳಿಸಿದ್ದರು.

ಬಿಲ್‌ ನೋಡಿ ಬೆಚ್ಚಿ ಆಸ್ಪತ್ರೆಯಿಂದಲೇ ಎದ್ದು ಹೋದ ಕೊರೋನಾ ಸೋಂಕಿತರು..!

ಇದರಿಂದ ದಂಗಾದ ಸಂಬಂಧಿಕರು ನಮ್ಮ ಬಳಿ ಇಷ್ಟುಹಣ ಇಲ್ಲ ಎಂದಾಗ, ಬೇರೊಂದು ಆಸ್ಪತ್ರೆಗೆ ತೆಗೆದುಕೊಂಡು ಹೋಗುವಂತೆ ಸೂಚನೆ ನೀಡಿದರು ಎಂದು ರೋಗಿ ಸಂಬಂಧಿ ಅಬ್ದುಲ್‌ ಬಾರಿ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ಆಸ್ಪತ್ರೆ ಸಿಬ್ಬಂದಿ ಹೇಳಿದ ಮೊತ್ತ ನೋಡಿ ನಮಗೆ ಭಯ ಉಂಟಾಯಿತು. ತಕ್ಷಣ ಎಲ್ಲ ಸಂಬಂಧಿಕರಿಗೆ ಕರೆ ಮಾಡಿ ಹಣಕ್ಕಾಗಿ ಮನವಿ ಮಾಡಿದೆವು. ಯಾರೂ ಸ್ಪಂದಿಸಲಿಲ್ಲ. ಇದರಿಂದ ಮತ್ತೊಂದು ಆಸ್ಪತ್ರೆಗೆ ಹೋಗುವುದಾಗಿ ಅಲ್ಲಿಂದ ವಾಪಸ್‌ ಬಂದೆವು. ಇದೀಗ ಶಿವಾಜಿನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ವಿವರಿಸಿದರು.

ಆಸ್ಪತ್ರೆ ನೀಡಿರುವ ಮೊತ್ತದ ವಿವರ

ರೋಗಿಗೆ ಚಿಕಿತ್ಸೆ ನೀಡುವ ಕೊಠಡಿ ಬಾಡಿಗೆ .75 ಸಾವಿರ, ಪ್ರೊಫೆಷನಲ್‌ ಶುಲ್ಕ .75,500 ವೆಂಟಿಲೇಟರ್‌ಗೆ .1.4 ಲಕ್ಷ, ನರ್ಸಿಂಗ್‌ ಶುಲ್ಕ .58,500, ಔಷಧಗಳಿಗೆ .3 ಲಕ್ಷ, ಲ್ಯಾಬೊರೇಟರ್‌ ಶುಲ್ಕ .2 ಲಕ್ಷ, ರೇಡಿಯಾಲಜಿಗೆ .35 ಸಾವಿರ, ಇದರೊಂದಿಗೆ ಅ್ಯಂಬುಲೆನ್ಸ್‌ ಹಾಗೂ ಸರ್ಜಿಕಲ್‌ ಚಿಕಿತ್ಸಾ ವೆಚ್ಚ ಪ್ರತೇಕವಾಗಿ ಇರಲಿದ್ದು, ಒಟ್ಟು .9 ಲಕ್ಷ ಪಾವತಿಸಿದಲ್ಲಿ ರೋಗಿಯನ್ನು ಗುಣಪಡಿಸಲಾಗುವುದು ಎಂದು ಷರತ್ತು ವಿಧಿಸಿದ್ದಾರೆ.

ಆಟೋ ಚಾಲಕನಿಗೆ ಮೂರ್ಚೆ: ಸಹಾಯಕ್ಕೆ ಬಾರದ ಜನರು

ಮೂರ್ಚೆ ರೋಗದಿಂದ ಆಟೋ ಚಾಲಕ ರಸ್ತೆಯಲ್ಲೇ ಕುಸಿದು ಬಿದ್ದ ಘಟನೆ ನಗರದ ಮಲ್ಲೇಶ್ವರಂನಲ್ಲಿ ನಡೆದಿದೆ. ಮಂಗಳವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ಮೂರ್ಚೆ ಬಂದು ಆಟೋ ಚಾಲಕ ನಡು ರಸ್ತೆಯಲ್ಲೇ ಕುಸಿದು ಬಿದ್ದು ಒದ್ದಾಡುತ್ತಿದ್ದರೂ ಯಾರು ಸಹ ಸಹಾಯಕ್ಕೆ ಧಾವಿಸಿಲ್ಲ. ಇದಕ್ಕೂ ಮೊದಲು ಚಾಲಕ ಪಾನಮತ್ತನಾಗಿದ್ದ ಎಂದು ಹೇಳಲಾಗಿದೆ. ಕೊರೊನಾ ಭೀತಿಯಿಂದ ವ್ಯಕ್ತಿ ಬಳಿಗೆ ಹೋಗಲು ಜನರು ಹಿಂದೇಟು ಹಾಕಿದ್ದಾರೆ. ತಕ್ಷಣ ಆಂಬ್ಯುಲೆನ್ಸ್‌ಗೆ ಕರೆ ಮಾಡಿದರೂಮುಕ್ಕಾಲು ಗಂಟೆ ತಡವಾಗಿ ಸ್ಥಳಕ್ಕೆ ಬಂದಿದೆ. ಆದರೆ, ಆಂಬುಲೆನ್ಸ್‌ ಬಂದರೂ ಪೊಲೀಸರು ಬಾರದ ಹಿನ್ನೆಲೆ ಚಾಲಕನನ್ನು ಆಸ್ಪತ್ರೆಗೆ ಸ್ಥಳಾಂತರಿಸಲು ಸಿಬ್ಬಂದಿ ಹಿಂದೇಟು ಹಾಕಿದ್ದಾರೆ. ಸ್ಥಳೀಯರಿಂದ ಆಕ್ರೋಶ ವ್ಯಕ್ತವಾದ ನಂತರ ಆಟೋ ಚಾಲಕನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

Follow Us:
Download App:
  • android
  • ios