ಸಾಲು ಸಾಲು ರಜೆ: ಎರಡೂವರೆ ಪಟ್ಟು ಖಾಸಗಿ ಬಸ್ ದರ ಹೆಚ್ಚಳ, ಕಂಗಾಲಾದ ಪ್ರಯಾಣಿಕರು..!
ರಜಾ ದಿನಗಳಲ್ಲಿ ಪ್ರಯಾಣಿಕರಿಂದ ದುಪ್ಪಟ್ಟು ಪ್ರಯಾಣ ಶುಲ್ಕ ವಸೂಲಿ ಮಾಡುವ ಕೆಲವು ಖಾಸಗಿ ಬಸ್ ಮಾಲೀಕರು ತಮ್ಮ ಚಾಳಿಯನ್ನು ಈಗಲೂ ಮುಂದುವರಿಸಿದ್ದಾರೆ. ಈ ತಿಂಗಳಲ್ಲಿ ಎರಡು ಬಾರಿ ಸರಣಿ ರಜೆಗಳು ಬಂದಿರುವುದರಿಂದ ದುಪ್ಪಟ್ಟು ಪ್ರಯಾಣ ಶುಲ್ಕ ವಸೂಲಿಯನ್ನು ಅನೇಕ ಕಡೆ ಮಾಡುತ್ತಿರುವ ದೂರುಗಳು ಕೇಳಿ ಬಂದಿವೆ.
ಬೆಂಗಳೂರು(ಜ.10): ಸಂಕ್ರಾಂತಿ ಹಬ್ಬ, ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಈ ತಿಂಗಳಲ್ಲಿ ಸಾಲು ಸಾಲು ರಜೆ ಇರುವ ಕಾರಣ ಬಸ್ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ. ಇಂತಹ ಪರಿಸ್ಥಿತಿಯ ಲಾಭ ಪಡೆಯಲು ಮುಂದಾಗಿರುವ ಕೆಲವು ಖಾಸಗಿ ಬಸ್‌ಗಳು ಪ್ರಯಾಣ ದರವನ್ನು ದುಪ್ಪಟ್ಟು ಹೆಚ್ಚಳ ಮಾಡಿವೆ.
ರಜಾ ದಿನಗಳಲ್ಲಿ ಪ್ರಯಾಣಿಕರಿಂದ ದುಪ್ಪಟ್ಟು ಪ್ರಯಾಣ ಶುಲ್ಕ ವಸೂಲಿ ಮಾಡುವ ಕೆಲವು ಖಾಸಗಿ ಬಸ್ ಮಾಲೀಕರು ತಮ್ಮ ಚಾಳಿಯನ್ನು ಈಗಲೂ ಮುಂದುವರಿಸಿದ್ದಾರೆ. ಈ ತಿಂಗಳಲ್ಲಿ ಎರಡು ಬಾರಿ ಸರಣಿ ರಜೆಗಳು ಬಂದಿರುವುದರಿಂದ ದುಪ್ಪಟ್ಟು ಪ್ರಯಾಣ ಶುಲ್ಕ ವಸೂಲಿಯನ್ನು ಅನೇಕ ಕಡೆ ಮಾಡುತ್ತಿರುವ ದೂರುಗಳು ಕೇಳಿ ಬಂದಿವೆ.
ಖಾಸಗಿ ಬಸ್‌ಗಳಿಗೂ ಶಕ್ತಿ ಯೋಜನೆ ವಿಸ್ತರಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ
ಜ.13 ಎರಡನೇ ಶನಿವಾರ ಹಾಗೂ ಜ.14 ಭಾನುವಾರ ಹಾಗೂ ಜ.15ಕ್ಕೆ ಸಂಕ್ರಾಂತಿ ಹಬ್ಬವಿದೆ. ಅದೇ ರೀತಿ ಜ.26 ಜ.26 ಗಣರಾಜ್ಯೋತ್ಸವ, ಜ.27 ನಾಲ್ಕನೇ ಶನಿವಾರ ಮತ್ತು ಜ.28 ಭಾನುವಾರವಿದೆ. ಹೀಗೆ ಎರಡು ವಾರಗಳಲ್ಲಿ ಸಾಲಾಗಿ ಮೂರು ದಿನಗಳ ರಜೆ, ಅದರಲ್ಲೂ ಗುರುವಾರ ರಾತ್ರಿ ಅಥವಾ ಶುಕ್ರವಾರ ರಾತ್ರಿ ಾತ್ರಿ ಹೆಚ್ಚಿನ ಪ್ರಯಾಣಿಕರಿರಲಿದ್ದು, ಈ ಎರಡು ದಿನಗಳಲ್ಲಿ ಪ್ರಯಾಣ ದರವನ್ನು ಭಾರಿ ಪ್ರಮಾಣದಲ್ಲಿ ಏರಿಕೆ ಮಾಡಲಾಗಿದೆ. ಪ್ರಮುಖವಾಗಿ ಶಿವಮೊಗ್ಗ, ಮಂಗಳೂರು, ಹುಬ್ಬಳ್ಳಿ, ಬೆಳಗಾವಿ ಸೇರಿದಂತೆ ಇನ್ನಿತರ ನಗರಗಳಿಗೆ ಸೇವೆ ನೀಡುವ ಬಸ್‌ಗಳ ದರವನ್ನು ಒಂದೂವರೆಯಿಂದ ಎರಡೂವರೆ ಪಟ್ಟು ಹೆಚ್ಚಿಸಿ ಪ್ರಯಾಣಿಕರ ಮೇಲೆ ಹೊರೆ ಹಾಕಲಾಗುತ್ತಿದೆ.
ಟಿಕೆಟ್ ದರ ಹೆಚ್ಚಳದ ವಿವರ
ಮಾರ್ಗ ಮಾಮೂಲಿ ಟಿಕೆಟ್ ದರ ಶುಕ್ರವಾರದ ಟಿಕೆಟ್ ದರ
ಶಿವಮೊಗ್ಗ 450-₹550 1000-1500
ಹುಬ್ಬಳ್ಳಿ 700-900 1500 2000
ಮಂಗಳೂರು 850-900 1300-2100
ಉಡುಪಿ 750-950 1300-2000
ಬೆಳಗಾವಿ 800-1000 1800-2000
ದಾವಣಗೆರೆ 500-700 1000-1700