Asianet Suvarna News Asianet Suvarna News

ಬೆಂಗಳೂರು: ನಾಡಿದ್ದು15 ರೈಲ್ವೆ ನಿಲ್ದಾಣ ಅಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ

ಕೇಂದ್ರ ಸರ್ಕಾರದ ಅಮೃತ್‌ ಭಾರತ್‌ ಸ್ಟೇಷನ್‌ ಯೋಜನೆ ಅಡಿಯಲ್ಲಿ ರಾಜ್ಯದ 15 ರೈಲ್ವೆ ನಿಲ್ದಾಣ ಅಭಿವೃದ್ಧಿ ಹಾಗೂ ನಾಲ್ಕು ರೈಲ್ವೆ ಕೆಳ ಮತ್ತು ಮೇಲ್ಸೇತುವೆ ನಿರ್ಮಾಣ ಕಾಮಗಾರಿಗಳಿಗೆ ಫೆ. 26ರಂದು ಪ್ರಧಾನಿ ನರೇಂದ್ರ ಮೋದಿ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ನೈರುತ್ಯ ರೈಲ್ವೆ ಬೆಂಗಳೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಯೋಗೀಶ್‌ ಮೋಹನ್‌ ತಿಳಿಸಿದರು.

Prime Minister drives development of 15 railway stations after tomorrow at Bengaluru rav
Author
First Published Feb 24, 2024, 5:59 AM IST

ಬೆಂಗಳೂರು (ಫೆ.24): ಕೇಂದ್ರ ಸರ್ಕಾರದ ಅಮೃತ್‌ ಭಾರತ್‌ ಸ್ಟೇಷನ್‌ ಯೋಜನೆ ಅಡಿಯಲ್ಲಿ ರಾಜ್ಯದ 15 ರೈಲ್ವೆ ನಿಲ್ದಾಣ ಅಭಿವೃದ್ಧಿ ಹಾಗೂ ನಾಲ್ಕು ರೈಲ್ವೆ ಕೆಳ ಮತ್ತು ಮೇಲ್ಸೇತುವೆ ನಿರ್ಮಾಣ ಕಾಮಗಾರಿಗಳಿಗೆ ಫೆ. 26ರಂದು ಪ್ರಧಾನಿ ನರೇಂದ್ರ ಮೋದಿ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ನೈರುತ್ಯ ರೈಲ್ವೆ ಬೆಂಗಳೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಯೋಗೀಶ್‌ ಮೋಹನ್‌ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ವಿವರಣೆ ನೀಡಿದ ಅವರು, ರೈಲ್ವೆ ಸಚಿವಾಲಯದ ರೈಲ್ವೆ ಅಭಿವೃದ್ಧಿ ಮಂಡಳಿಯು ದೇಶದ 554 ರೈಲ್ವೆ ನಿಲ್ದಾಣಗಳ ಅಭಿವೃದ್ಧಿ ಹಾಗೂ 1,585 ರೈಲ್ವೆ ಕೆಳ ಮತ್ತು ಮೇಲ್ಸೇತುವೆಗಳ ನಿರ್ಮಾಣ ಕಾಮಗಾರಿಗೆ ಯೋಜನೆ ರೂಪಿಸಿದೆ. ಈ ಪೈಕಿ ರಾಜ್ಯದ 15 ರೈಲ್ವೆ ನಿಲ್ದಾಣ ಅಭಿವೃದ್ಧಿ ಹಾಗೂ ನಾಲ್ಕು ರೈಲ್ವೆ ಕೆಳ ಮತ್ತು ಮೇಲ್ಸೇತುವೆ ನಿರ್ಮಾಣ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ರಾಜ್ಯದ ಕಾಮಗಾರಿಗಳನ್ನು ಒಟ್ಟು 372.13 ಕೋಟಿ ರು. ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.

ಯೋಜನೆಯ ಮೊದಲ ಹಂತದಲ್ಲಿ ರೈಲ್ವೆ ನಿಲ್ದಾಣಗಳಲ್ಲಿ ಶೌಚಾಲಯ ಸೌಲಭ್ಯ, ಲಿಫ್ಟ್‌ ಮತ್ತು ಎಸ್ಕಲೇಟರ್‌ ಸ್ಥಾಪನೆ, ಸ್ವಚ್ಛತೆ, ಉಚಿತ ವೈ-ಫೈ, ಒಂದು ನಿಲ್ದಾಣ-ಒಂದು ಉತ್ಪನ್ನ ಉಪಕ್ರಮ ಜಾರಿ, ಪ್ರಯಾಣಿಕರ ಮಾಹಿತಿ ವ್ಯವಸ್ಥೆ ಸದೃಢಗೊಳಿಸುವುದು. ಕಾರ್ಯನಿರ್ವಹಾಕ ಲಾಂಜ್‌ಗಳ ಸ್ಥಾಪನೆ, ವ್ಯಾಪಾರಿ ಸ್ಥಳಗಳನ್ನು ಉತ್ತಮಗೊಳಿಸುವುದು ಹೀಗೆ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು. ಎರಡನೇ ಹಂತದಲ್ಲಿ ರೈಲ್ವೆ ನಿಲ್ದಾಣದ ಸ್ವರೂಪವನ್ನು ಬದಲಿಸುವುದು. ನಿಲ್ದಾಣಗಳಿಗೆ ಬೇರೆ ಸಾರಿಗೆ ಸಂಪರ್ಕವನ್ನು ಸಮರ್ಪಕವಾಗಿ ಕಲ್ಪಿಸಲು ಮಲ್ಟಿಮಾಡೆಲ್ ಸಂಪರ್ಕ ಉತ್ತೇಜಿಸುವುದು ಸೇರಿದಂತೆ ಇನ್ನಿತರ ಕಾಮಗಾರಿ ಅನುಷ್ಠಾನಗೊಳಿಸಬಹುದು ಎಂದು ಹೇಳಿದರು.

ಕೆಆರ್‌ ಪುರದಲ್ಲಿ ಬಹುಮಹಡಿ ವಾಹನ ನಿಲುಗಡೆ: ಅಮೃತ್‌ ಭಾರತ್‌ ರೈಲ್ವೆ ನಿಲ್ದಾಣ ಯೋಜನೆ ಅಡಿಯಲ್ಲಿ ಕೆಆರ್‌ ಪುರ ರೈಲ್ವೆ ಅಭಿವೃದ್ಧಿ ಕಾರ್ಯಕ್ಕೆ ಈಗಾಗಲೆ ಚಾಲನೆ ನೀಡಲಾಗಿದೆ. ಅದರಂತೆ ರೈಲ್ವೆ ನಿಲ್ದಾಣದಲ್ಲಿ 4 ಸಾವಿರ ಚಮೀ ವ್ಯಾಪ್ತಿಯಲ್ಲಿ ಬಹುಮಹಡಿ ವಾಹನ ನಿಲುಗಡೆ ಕಟ್ಟಡ ನಿರ್ಮಿಸಲಾಗುತ್ತಿದೆ. ಅದರಲ್ಲಿ 372 ದ್ವಿಚಕ್ರ ಮತ್ತು126 ಕಾರುಗಳ ನಿಲುಗಡೆಗೆ ಅವಕಾಶ ನೀಡಲಾಗುತ್ತಿದೆ. ಅದರ ಜತೆಗೆ ನಿಲ್ದಾಣಕ್ಕೆ 2ನೇ ಪ್ರವೇಶ ದ್ವಾರ ನಿರ್ಮಾಣ, ವಿಐಪಿ ಲಾಂಜ್‌, ಪ್ರಯಾಣಿಕರು ಕಾಯುವಿಕೆ ಕೊಠಡಿ, 6 ಎಸ್ಕಲೇಟರ್‌ ಮತ್ತು ಲಿಫ್ಟ್‌ಗಳನ್ನು ಅಳವಡಿಸಲಾಗುತ್ತಿದೆ. ಹೀಗೆ ಹಲವು ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದು ಯೋಗೀಶ್‌ ಮೋಹನ್‌ ತಿಳಿಸಿದರು.

ಮೋದಿಗೆ ಪೈಪೋಟಿ ನೀಡುವ ಸಮರ್ಥ ನಾಯಕ ಸಿದ್ದರಾಮಯ್ಯ: ಕೃಷಿ ಸಚಿವ ಚಲುವರಾಯಸ್ವಾಮಿ

ಅಭಿವೃದ್ಧಿಗೊಳ್ಳುತ್ತಿರುವ ರೈಲ್ವೆ ನಿಲ್ದಾಣಗಳ ವಿವರ: ಬಂಗಾರಪೇಟೆ21.5 ಕೋಟಿ ರು., ಚನ್ನಪಟ್ಟಣ 20.9 ಕೋಟಿ ರು., ಧರ್ಮಪುರ25.4 ಕೋಟಿ ರು., ದೊಡ್ಡಬಳ್ಳಾಪುರ21.3 ಕೋಟಿ ರು., ಹಿಂದೂಪುರ 23.9 ಕೋಟಿ ರು., ಹೊಸೂರು 22.3 ಕೋಟಿ ರು., ಕೆಂಗೇರಿ21.1 ಕೋಟಿ ರು., ಕೆಆರ್‌ ಪುರ 21.1 ಕೋಟಿ ರು. ಕುಪ್ಪಂ 17.6 ಕೋಟಿ ರು., ಮಲ್ಲೇಶ್ವರ 20 ಕೋಟಿ ರು., ಮಂಡ್ಯ 20.1 ಕೋಟಿ ರು., ರಾಮನಗರ21 ಕೋಟಿ ರು., ತುಮಕೂರು24.1 ಕೋಟಿ ರು. ವೈಟ್‌ಫೀಲ್ಡ್‌ 23.3 ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿಗೊಳ್ಳುತ್ತಿವೆ.

Follow Us:
Download App:
  • android
  • ios