ಮೈಸೂರು(ಜ.05): ಮುಂದಿನ ಬಾರಿಯೂ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರಕ್ಕೆ ತಾವೇ ಸಂಸದ ಎಂದು ಬಿಜೆಪಿಯ ಪ್ರತಾಪ ಸಿಂಹ ಹೇಳಿದ್ದಾರೆ.

2019ರಲ್ಲಿ ಮುಂದಿನ ಬಾರಿ ಬಿಜೆಪಿ ಪ್ರಮೋದಾದೇವಿ ಒಡೆಯರ್ ಅವರಿಗೆ ಟಿಕೆಟ್ ನೀಡಲಿದೆ ಎಂಬ ಮಾಧ್ಯಮಗಳ ವರದಿಗೆ ಖಾರವಾಗಿ ಪ್ರತಿಕ್ರಿಯಿಸಿದ ಸಿಂಹ, ಮುಂದಿನ ಮೈಸೂರು-ಕೊಡಗು ಸಂಸದ ನಾನೇ ಎಂದು ಗುಡುಗಿದರು.

ಕೆಲವು ಮಾಧ್ಯಮಗಳ ತಲೆಯಲ್ಲಿ ಕಸ ತುಂಬಿದೆ. ಅದನ್ನೇ ತಮ್ಮ ಪತ್ರಿಕೆಗಳಲ್ಲಿ ಬರೆಯುತ್ತಾರೆ ಮತ್ತು ದೃಶ್ಯ ಮಾಧ್ಯಮಗಳು ಸ್ಪೆಶಲ್ ಸ್ಟೋರಿ ಹೆಸರಲ್ಲಿ ಬಿತ್ತರಿಸುತ್ತವೆ ಎಂದು ಸಿಂಹ ಈ ವೇಳೆ ಹರಿಹಾಯ್ದರು.

"
ನನಗೆ ಕಲ್ಲು ಹೊಡೆದರೆ ಅದರಲ್ಲೇ ನಾನು ಫೌಂಡೇಶನ್ ಕಟ್ತಿನಿ ಎಂದು ಮಾರ್ಮಿಕವಾಗಿ ನುಡಿದ ಸಿಂಹ, ಮುಂಧಿನ ಲೋಕಸಭಾ ಚುನಾವಣೆಯಲ್ಲೂ ಮತ್ತೆ ನಾನೇ ಗೆಲ್ಲುತ್ತೇನೆಂದು ವಿಶ್ವಾಸ ವ್ಯಕ್ತಪಡಿಸಿದರು. 

ನಾವು ಹಾಲಿ 15 ಜನ ಬಿಜೆಪಿ ಸಂಸದರಿದ್ದು, ಈ 15 ಕ್ಷೇತ್ರದ ಜೊತೆಗೆ ಮತ್ತಷ್ಟು ಸ್ಥಾನ ಗೆಲ್ಲುತ್ತೇವೆ ಎಂದು ಸಿಂಹ ಭರವಸೆ ನೀಡಿದರು. ಈಗಾಗಲೇ ಎಲ್ಲಾ ಹಾಲಿ ಎಂಪಿಗಳಿಗೆ ಟಿಕೆಟ್ ಎಂದು ಯಡಿಯೂರಪ್ಪ ಹೇಳಿದ್ದಾರೆ ಎಂದು ಸಿಂಹ ಸ್ಪಷ್ಟಪಡಿಸಿದರು.