Asianet Suvarna News Asianet Suvarna News

ದೇವಸ್ಥಾನಗಳಲ್ಲಿ ಮನಬಂದಂತೆ ವರ್ತಿಸುವುದು ಸರಿಯಲ್ಲ, ವಸ್ತ್ರ ಸಂಹಿತೆ ಅಗತ್ಯ: ಪ್ರಮೋದ್ ಮುತಾಲಿಕ್‌

Pramod Muthalik: ಧಾರ್ಮಿಕ ವಿಧಿ ವಿಧಾನಗಳಂತೆ ಇರುವ ನೀತಿ ನಿಯಮವನ್ನು ಪಾಲಿಸಬೇಕು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ಹೇಳಿದರು. 

Pramod Muthalik on dress code in temples Mohan Bhagwat statement Kundapura Udupi mnj
Author
First Published Oct 1, 2022, 4:28 PM IST

ಉಡುಪಿ (ಅ. 01): ಪವಿತ್ರ ಸ್ಥಳಗಳಲ್ಲಿ ಮನಬಂದಂತೆ ವರ್ತಿಸುವುದು ಸರಿಯಲ್ಲ, ಧಾರ್ಮಿಕ ವಿಧಿ ವಿಧಾನಗಳಂತೆ ಇರುವ ನೀತಿ ನಿಯಮವನ್ನು (Rules) ಪಾಲಿಸಬೇಕು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ (Pramod Muthalik) ಹೇಳಿದರು. ಕುಂದಾಪುರದಲ್ಲಿ ಮಾತನಾಡಿದ ಅವರು "ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆ (Dress Code) ಪಾಲನೆ ಮಾಡುವುದು ನನ್ನ ದೃಷ್ಟಿಯಲ್ಲಿ ಸರಿ ಇದೆ,  ನಿಯಮ, ನೀತಿ, ಭಕ್ತಿ ಭಾವನೆ ಗಳನ್ನು ಬೆಳೆಸುವ ಮತ್ತು ಸಂಸ್ಕಾರ ಮುಖ್ಯ, ದೇವಾಲಯಗಳಿಗೆ ಹೋಗಲು ಅದರದೇ ಆದ ನಿಯಮಗಳಿವೆ, ಪವಿತ್ರ ಕ್ಷೇತ್ರದ ನಿಯಮ ಪಾಲಿಸಿಯೇ ದರ್ಶನ ಮಾಡಬೇಕು" ಎಂದರು 

ಅಯ್ಯಪ್ಪನ ದೇವಸ್ಥಾನಕ್ಕೆ ಹೋಗಬೇಕಾದರೆ ಬರಿಗಾಲಿನಲ್ಲಿ ಕಾಡಿನಲ್ಲಿ 40 ಕಿ.ಮಿ ನಡೆದು ಹೋಗುತ್ತಾರೆ,  ದೇವಸ್ಥಾನಗಳಲ್ಲಿ ಏನು ನಿಯಮ ಇದೆ ಅದರ ಪಾಲನೆ ಆಗಬೇಕು, ಇದು ಸರಿಯಿದೆ ಎಂದು ಮುತಾಲಿಕ್‌ ಹೇಳಿದರು.

ಇನ್ನು  ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು (Praveen Nettaru) ಪತ್ನಿಗೆ ನೌಕರಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು " ನೌಕರಿ ನೀಡುವ ಹೇಳಿಕೆಯನ್ನು ಸಿಎಂ ಪೂರ್ಣಗೊಳಿಸಿದ್ದಾರೆ, ಗುತ್ತಿಗೆ ಆಧಾರದ ಮೇರೆಗೆ ಕೆಲಸ ನೀಡುವ ಹೇಳಿಕೆಯನ್ನ ದೃಢಪಡಿಸಿದ್ದಾರೆ,  ಈ ಬಗ್ಗೆ ಪ್ರವೀಣ್ ನೆಟ್ಟಾರು ಧರ್ಮಪತ್ನಿಯವರಿಗೆ ಪತ್ರ ಮುಖೇನ ಮಾಹಿತಿಯನ್ನು ನೀಡಿದ್ದಾರೆ, ನಾನು ಸ್ವಾಗತಿಸುತ್ತೇನೆ, ಸರಕಾರಕ್ಕೆ ಅಭಿನಂದನೆಗಳನ್ನು ಹೇಳುತೇನೆ" ಎಂದರು 

ಮದರಸಾಗಳನ್ನು ಬ್ಯಾನ್‌ ಮಾಡಿ: ಪ್ರಮೋದ ಮುತಾಲಿಕ್‌

ನೆಟ್ಟಾರು ಅವರ ಧರ್ಮಪತ್ನಿಗೆ ಸಮೀಪದಲ್ಲಿಯೇ ಪುತ್ತೂರಿನಲ್ಲಿ ಕೆಲಸ ನೀಡಿದರೆ ಉತ್ತಮ, ಗುತ್ತಿಗೆ ಆಧಾರದ ಮೇಲೆ ಇದೆ, ಇಲ್ಲಿ ಉದ್ಯೋಗ ಭದ್ರತೆ ಇಲ್ಲ,  ಅಸುರಕ್ಷತೆ ಅಭದ್ರತೆ ಕಾಡದ ಹಾಗೆ ಖಾಯಂ ನೌಕರಿ ನೀಡುವ ಕೆಲಸವಾಗಬೇಕಿದೆ,  ಈ ವಿಚಾರವಾಗಿ ನಾನು ಸರಕಾರಕ್ಕೆ ಒತ್ತಾಯ ಮಾಡುತ್ತೇನೆ ಹಾಗೂ ಆಗ್ರಹಿಸುತ್ತೇನೆ ಎಂದು ಮುತಾಲಿಕ್‌ ಹೇಳಿದರು. 

ಮೋಹನ್ ಭಾಗವತ್ ಹೇಳಿಕೆ ಒಪ್ಪಲಾರದು: ಮಾಂಸಹಾರದ ಕುರಿತ ಆರ್ ಎಸ್ ಎಸ್ ಪ್ರಮುಖ ಮೋಹನ್ ಭಾಗವತ್ (Mohan Bhagwat) ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಪ್ರಮೋದ್‌ ಮುತಾಲಿಕ್‌ " ಆಧ್ಯಾತ್ಮದ ದೃಷ್ಟಿಯಿಂದ, ಸಾತ್ವಿಕತೆಯ ದೃಷ್ಟಿಯಿಂದ ಈ ರೀತಿ ಹೇಳಿರಬಹುದು,  ಮೋಹನ್ ಭಾಗವತ್ ಅವರ ಹೇಳಿಕೆಯನ್ನು ಆಧ್ಯಾತ್ಮಿಕ ದೃಷ್ಟಿಯಲ್ಲಿ ಒಪ್ಪಿಕೊಳ್ಳಬಹುದು, ನಮ್ಮ ದೇಶದಲ್ಲಿ ಹಿಂದುಗಳು ಮೆಜಾರಿಟಿ ಮಾಂಸಾಹಾರಿಗಳಿದ್ದಾರೆ, ಆಹಾರದ ದೃಷ್ಟಿಯಿಂದ ಆ ಹೇಳಿಕೆ ಸರಿಯಲ್ಲ, ಮೋಹನ್ ಭಾಗವತ್ ಅವರ ಆ ಹೇಳಿಕೆಯನ್ನು ಒಪ್ಪಲಾರದು" ಎಂದರು 

Follow Us:
Download App:
  • android
  • ios