ಬೆಂಗಳೂರು [ನ.13]:  ರಾಜ್ಯ ವಿಧಾನಸಭೆಯಿಂದ ಅಂದಿನ ಸ್ಪೀಕರ್ ಆಗಿದ್ದ ರಮೇಶ್ ಕುಮಾರ್ ಅನರ್ಹ ಮಾಡಿದ್ದ 17 ಶಾಸಕರ ತೀರ್ಪು ಪ್ರಕಟವಾಗಿದೆ. ಸ್ಪೀಕರ್ ಆದೇಶ ಎತ್ತಿಹಿಡಿದು ಅವರ ಅನರ್ಹತೆಯನ್ನು ಸುಪ್ರೀಂ ಕೋರ್ಟ್ ಅಂಗೀಕರಿಸಿದೆ. 

ಸುಪ್ರೀಂ ಕೋರ್ಟಲ್ಲಿ ಹಾವು ಸಯ್ಬಾರ್ದು ಕೋಲು ಮುರಿಬಾರ್ದು ಎನ್ನುವ ರೀತಿಯ ತೀರ್ಪು ಸುಪ್ರೀಂ ಕೋರ್ಟಿಂದ ಪ್ರಕಟವಾಗಿದೆ ಎಂದು ನಟ ಪ್ರಕಾಶ್ ರಾಜ್ ಸುಪ್ರೀಂ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. 

ಹಾವೂ ಸಾಯ್ಬಾರ್ದು..ಕೋಲೂ ಮುರೀಬಾರ್ದು  ಎನ್ನುವ ತೀರ್ಪಿನ ಆಶೀರ್ವಾದ ಪಡಕೊಂಡು “ತ್ರಪ್ತ”ಶಾಸಕರು ..ಕೊಂಕಣ ಸುತ್ಕೊಂಡು ಮೈಲಾರಕ್ ಬಂದವೆ ..ಓಳ್ಳೇದೆ ಆಯ್ತು ..ಸ್ವಾಭಿಮಾನಿ ಕನ್ನಡಿಗರೆ .. ಇವುಗಳು ..ಜನ್ಮ ಜನ್ಮಕ್ಕೂ ಮರೀದೆ ಇರೋ ತೀರ್ಪು ಕೊಡೋದು ಈಗ ನಮ್ಮ ಜವಾಬ್ದಾರಿ  ಎಂದು ಪ್ರಕಾಶ್ ರಾಜ್ ಟ್ವೀಟ್ ಮಾಡಿದ್ದಾರೆ. 

 

17 ಶಾಸಕರ ಅನರ್ಹತೆ ಎತ್ತಿ ಹಿಡಿದ ಸುಪ್ರೀಂ ಕೋರ್ಟ್ : ಕೊಂಚ ರಿಲೀಫ್...

ಡಿಸೆಂಬರ್ 5 ರಂದು ರಾಜ್ಯದ 15 ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದ್ದು, ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡಬಹುದು ಎಂದು ಸುಪ್ರೀಂಕೋರ್ಟ್ ಹೇಳಿದೆ. 

ರಾಜ್ಯದಲ್ಲಿ ನಡೆಯುವ ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಸಿದ್ಧರಾಗಿರುವ ಇವರಿಗೆ ಜನ್ಮ ಜನ್ಮಕ್ಕೂ ಮರೆಯದೇ ಇರುವ ರೀತಿಯಲ್ಲಿ ತೀರ್ಪು ಕೊಡುವುದು ನಮ್ಮ ಜವಾಬ್ದಾರಿ ಎಂದು ಪ್ರಕಾಶ್ ರಾಜ್ ಹೇಳಿದ್ದಾರೆ. 

ಡಿಸೆಂಬರ್ 5 ರಂದು ಚುನಾವಣೆ ನಡೆಯಲಿದ್ದು, 9 ರಂದು ಫಲಿತಾಂಶ ಪ್ರಕಟವಾಗಲಿದೆ.