ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾ*ರ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿರುವ ಮೊಬೈಲ್ ಅನ್ನು ವಾಪಸ್ ಕೊಡಲು ನ್ಯಾಯಾಲಯ ನಿರಾಕರಿಸಿದೆ. ಆದರೆ, ಕೋರ್ಟ್‌ನಲ್ಲಿಯೇ ವಿಡಿಯೋ ಮತ್ತು ಫೋಟೋಗಳನ್ನು ವೀಕ್ಷಿಸಲು ಅವಕಾಶ ನೀಡಲಾಗಿದೆ. ಪ್ರಜ್ವಲ್ ಎಫ್‌ಎಸ್‌ಎಲ್ ವರದಿ ಪ್ರಶ್ನಿಸಿದ್ದರು.

ಬೆಂಗಳೂರು (ಜ.17): ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ದಾಖಲಾದ ಅತ್ಯಾಚಾ*ರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಸಾಕ್ಷಿಯಾಗಿರುವ ತನ್ನ 2,000 ವಿಡಿಯೋ ಹಾಗೂ 15 ಸಾವಿರ ಫೋಟೊಗಳು ಇರುವ ಮೊಬೈಲ್‌ ಅನ್ನು ವಾಪಸ್ ಕೊಡುವಂತೆ ಹಾಗೂ ಪ್ರಕರಣದಿಂದ ತನ್ನನ್ನು ಖುಲಾಸೆ ಮಾಡುವಂತೆ ಸಲ್ಲಿಸಿದ ಅರ್ಜಿ ವಿಚಾರಣೆ ಮಾಡಿದ ನ್ಯಾಯಾಲಯವು, ನಿಮಗೆ ಮೊಬೈಲ್ ಕೊಡಲಾಗುವುದಿಲ್ಲ. ಆದರೆ, ನಿಮ್ಮ ವಿಡಿಯೋ ಹಾಗೂ ಫೋಟೋಗಳನ್ನು ಕೋರ್ಟ್‌ನಲ್ಲಿಯೇ ವೀಕ್ಷಣೆ ಮಾಡುವುದಕ್ಕೆ ಅವಕಾಶವನ್ನು ನೀಡಲಾಗಿತ್ತು.

ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಪ್ರಜ್ವಲ್ ರೇವಣ್ಣ ತಮ್ಮ ಮೇಲಿರುವ ಕೇಸ್ ವಜಾಗೊಳಿಸಲು ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಿದ್ದು ಈ ಅರ್ಜಿಯನ್ನು ಕಳೆದ ಜ.10ರಂದು ವಿಚಾರಣೆ ಮಾಡಲಾಗಿತ್ತು. ಈ ವೇಳೆ, ಪ್ರಜ್ವಲ್ ರೇವಣ್ಣ ತಮ್ಮ ಸ್ಯಾಮ್‌ಸಂಗ್ ಫೋನ್‌ನಲ್ಲಿ (Samsung Mobile) ಇರುವ ವಿಡಿಯೊ ದಾಖಲೆಗಳನ್ನು ತಮಗೆ ವಾಪಸ್ ಕೊಡಿ ಎಂದು ಅರ್ಜಿ ಸಲ್ಲಿಕೆ ಮಾಡಿದ್ದರು. ಅದರಲ್ಲಿರುವ ವಿಡಿಯೋ, ಪೋಟೋಗಳನ್ನು ತಮಗೆ ಒದಗಿಸಬೇಕು. ನಮ್ಮ ಕಾರು ಚಾಲಕನಿಂದ ಪೊಲೀಸರು ಜಪ್ತಿ ಮಾಡಿದ ಮೊಬೈಲ್‌ನಲ್ಲಿ 2 ಸಾವಿರ ವಿಡಿಯೋ, 15 ಸಾವಿರ ಫೋಟೋ ಇದ್ದು ಅದನ್ನು ವಾಪಸ್ ಕೊಡಿ ಎಂದಿದ್ದರು.

ವಿಡಿಯೋ ಎಫ್‌ಎಸ್‌ಎಲ್ ವರದಿ ಮೇಲೆ ಅನುಮಾನ: ಇದೇ ವೇಳೆ ಪ್ರಜ್ವಲ್ ರೇವಣ್ಣ ತಮ್ಮ ವಿರುದ್ಧದ ಟೆಕ್ನಿಕಲ್ ಎವಿಡೆನ್ಸ್ ನೀಡಲು ಮನವಿ ಮಾಡಿದ್ದಾರೆ. ತಮ್ಮ ವಿರುದ್ಧದ ಟೆಕ್ನಿಕಲ್ ಎವಿಡೆನ್ಸ್ ಮತ್ತು ವಿಡಿಯೋಗಳನ್ನು ವಾಪಸ್ ಕೊಡುವಂತೆ ಕೆಳಹಂತದ ನ್ಯಾಯಾಲಯದ ಮೂಲಕ ನೀಡಲು ಮನವಿ ಮಾಡಲಾಗಿದೆ. ಇಲ್ಲಿ ತನ್ನ ವಿರುದ್ಧ ಅತ್ಯಾಚಾ*ರ ನಡೆದಿದೆ ಎಂದು ಎಫ್‌ಎಸ್ಎಲ್ ವರದಿ ನೀಡಲಾಗಿದೆ. ಬಳಿಕ ವಿಡಿಯೋಗಳು ಅಸಲಿ ಎಂದು ಎಫ್‌ಎಸ್ಎಲ್ ವರದಿ ಆಗಿತ್ತು. ಈ ಎಫ್‌ಎಸ್‌ಎಲ್‌ ವರದಿಗಳ ಮೇಲೆ ಅನುಮಾನ ಎಂದು ಅರ್ಜಿ ಸಲ್ಲಿಕೆ ಮಾಡಿದ್ದರು. ಆದರೆ, ಹೈಕೋರ್ಟ್ ಈ ಬಗ್ಗೆ ಕೆಳಹಂತದ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುವಂತೆ ಸೂಚಿಸಿತ್ತು.

ಹೈಕೋರ್ಟ್‌ ಸೂಚನೆಯಂತೆ, ವಿಡಿಯೋ ಹಾಗೂ ಫೋಟೋ ವಾಪಸ್ ನೀಡುವಂತೆ ಸಲ್ಲಿಕೆ ಮಾಡಿದ್ದ ಅರ್ಜಿಯನ್ನು ಜ.17ರಂದು ವಿಚಾರಣೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ನ್ಯಾಯಮೂರ್ತಿ ಸಂತೋಷ್ ಗಜಾನನ ಭಟ್ ಅವರು, ನಿಮಗೆ ವಿಡಿಯೋ ಹಾಗೂ ಪೋಟೋ ನೀಡಲು ಸಾಧ್ಯವಿಲ್ಲ. ಈ ಕೇಸಿನ ಬಗ್ಗೆ ಹೈಕೋರ್ಟ್‌ನಲ್ಲಿಯೂ ಕೂಡ ಈ ಬಗ್ಗೆ ವಿಚಾರಣೆ ನಡೆಯುತ್ತಿದೆ. ಕೋರಿಕೆ ಮೇರೆಗೆ ಆರೋಪಿಗೆ ವಿಡಿಯೋ ಹಾಗೂ ಪೋಟೋ ತೋರಿಸಬಹುದು. ನಿವು ಇಂದು ಇದೇ ಕೋರ್ಟ್‌ ಆವರಣದಲ್ಲಿಯೇ ನಿಮಗೆ ಏನ್ ಬೇಕೋ ಅದನ್ನು ನೋಡಿಕೊಳ್ಳಿ ಎಂದು ನ್ಯಾಯಾಧೀಶರು ಕಠಿಣವಾಗಿ ಅನುಮತಿ ನೀಡಿದರು.

ಆಗ ಪ್ರಜ್ವಲ್ ಹಾಗೂ ವಕೀಲರಿಗೆ ಬೇಕಾದ ಸಾಕ್ಷಿ ವೀಕ್ಷಣೆಗೆ ಕೋರ್ಟ್ ಆವರಣದೊಳಗೆ ಅವಕಾಶ ನೀಡಲಾಯಿತು. ಆದರೆ, ಇಂದು ಬೇಡ ವಿಚಾರಣೆ ಸೋಮವಾರಕ್ಕೆ ಮುಂದೂಡಿ ಎಂದು ಪ್ರಜ್ವಲ್ ಪರ ವಕೀಲರ ಮನವಿ ಮಾಡಿದರು. ಆಗ ಕೋರ್ಟ್‌ನಿಂದ ಪ್ರಜ್ವಲ್ ರೇವಣ್ಣ ಪರ ವಕೀಲರ ಮನವಿ ತಿರಸ್ಕಾರ ಮಾಡಲಾಯಿತು. ನಿಮ್ಮ ಕೇಸಿನ ತಾಂತ್ರಿಕ ಸಾಕ್ಷಿಗಳ ಬಗ್ಗೆ ಕೋರ್ಟ್‌ನಲ್ಲಿ ನೋಡುವುದಕ್ಕೆ ಅವಕಾಶ ನೀಡಲಾಗಿದೆ. ಈಗಲೇ ನೋಡಿ ಎಂದು ಹೇಳಿದ್ದಕ್ಕೆ, ಟೆಕ್ನಿಕಲ್ ಎಕ್ಸಪರ್ಟ್ ಸಹಾಯದಿಂದ ಪ್ರಜ್ವಲ್ ರೇವಣ್ಣಗೆ ಪೋಟೋ, ವಿಡಿಯೋ ವೀಕ್ಷಣೆ ಮಾಡಲು ಅವಕಾಶ ನೀಡಲಾಗಿತ್ತು.