Asianet Suvarna News Asianet Suvarna News

ರಾಜ್ಯ ಅಡ್ವೋಕೇಟ್‌ ಜನರಲ್‌ ಹುದ್ದೆಗೆ ನಾವದಗಿ ರಾಜೀನಾಮೆ

ರಾಜ್ಯ ಅಡ್ವೋಕೇಟ್‌ ಜನರಲ್‌ ಹುದ್ದೆಗೆ ಹಿರಿಯ ವಕೀಲ ಪ್ರಭುಲಿಂಗ ನಾವದಗಿ ಭಾನುವಾರ ರಾಜೀನಾಮೆ ಸಲ್ಲಿಸಿದರು.

Prabhulinga navadagi resigned from the post of State Advocate General rav
Author
First Published May 15, 2023, 2:23 AM IST

ಬೆಂಗಳೂರು (ಮೇ.15) ರಾಜ್ಯ ಅಡ್ವೋಕೇಟ್‌ ಜನರಲ್‌ ಹುದ್ದೆಗೆ ಹಿರಿಯ ವಕೀಲ ಪ್ರಭುಲಿಂಗ ನಾವದಗಿ ಭಾನುವಾರ ರಾಜೀನಾಮೆ ಸಲ್ಲಿಸಿದರು.

ವಿಧಾನಸಭೆ ಚುನಾವಣೆ(Karnataka assembly election)ಯಲ್ಲಿ ಕಾಂಗ್ರೆಸ್‌ ಬಹುಮತ ಬಂದ ನಂತರ ಮುಖ್ಯಮಂತ್ರಿ ಸ್ಥಾನಕ್ಕೆ ಬಸವರಾಜ ಬೊಮ್ಮಾಯಿ(CM Basavaraj bommai) ಶನಿವಾರ ರಾಜೀನಾಮೆ ಸಲ್ಲಿಸಿದ ಹಿನ್ನೆಲೆಯಲ್ಲಿ ಭಾನುವಾರ ಮಧ್ಯಾಹ್ನ 12.30ರ ವೇಳೆಗೆ ರಾಜಭವನಕ್ಕೆ ತೆರಳಿ ರಾಜ್ಯಪಾಲ ಥಾವರ್‌ ಚಂದ್‌ ಗೆಹಲೋತ್‌ ಅವರನ್ನು ಭೇಟಿ ಮಾಡಿದ ನಾವದಗಿ ರಾಜೀನಾಮೆ ಪತ್ರ ಸಲ್ಲಿಸಿದರು.

Karnataka election results: ಸಿಎಂ ಹುದ್ದೆಗೆ ಜಾತಿ ರಾಜಕಾರಣ ಬಲು ಜೋರು!...

2018ರಲ್ಲಿ ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿಯಾದ ವೇಳೆ ಪ್ರಭುಲಿಂಗ ನಾವದಗಿ ಅವರನ್ನು (2018ರ ಮೇ 18) ಅಡ್ವೋಕೇಟ್‌ ಜನರಲ್‌(State Advocate General ) ಆಗಿ ನೇಮಕ ಮಾಡಲಾಗಿತ್ತು. ಯಡಿಯೂರಪ್ಪ ಅವರು ಬಹುಮತ ಸಾಬೀತುಪಡಿಸಲು ವಿಫಲವಾಗಿ ರಾಜೀನಾಮೆ ನೀಡಿದ್ದ ಹಿನ್ನೆಲೆಯಲ್ಲಿ 2018ರ ಮೇ 31ರಂದು ಅಡ್ವೋಕೇಟ್‌ ಜನರಲ್‌ ಹುದ್ದೆಗೆ ನಾವದಗಿ ರಾಜೀನಾಮೆ ಸಲ್ಲಿಸಿದ್ದರು. 2019ರಲ್ಲಿ ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿ ಆದ ನಂತರ ನಾವದಗಿ. 2019ರ ಜುಲೈ 30ರಂದು ಪುನಃ ಅಡ್ವೋಕೇಟ್‌ ಜನರಲ್‌ ಆಗಿ ನೇಮಕಗೊಂಡು ಈವರೆಗೆ ಕಾರ್ಯನಿರ್ವಹಿಸುತ್ತಿದ್ದರು.

2011ರಲ್ಲಿ ಹೆಚ್ಚುವರಿ ಅಡ್ವೋಕೇಟ್‌, 2014ರಲ್ಲಿ ಹೈಕೋರ್ಟ್ ಹಿರಿಯ ವಕೀಲರಾಗಿ ಪದೋನ್ನತಿ ಪಡೆದ ಅವರು 2015ರಲ್ಲಿ ಕರ್ನಾಟಕ ಹೈಕೋರ್ಚ್‌ಗೆ ಕೇಂದ್ರ ಸರ್ಕಾರದ ಸಹಾಯಕ ಸಾಲಿಸಿಟರ್‌ ಆಗಿ ಕಾರ್ಯ ನಿರ್ವಹಿಸಿದ್ದರು.

ಹೀನಾಯ ಸೋಲು: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕಟೀಲ್‌ ಶೀಘ್ರ ರಾಜೀನಾಮೆ?

ರಾಮನಗರ ಜಿಲ್ಲೆಯ ಬಿಡದಿ ತಾಲೂಕು ಈಗಲ್‌ಟನ್‌ ಗಾಲ್‌್ಫ ರೆಸಾರ್ಚ್‌ ನಿರ್ಮಾಣಕ್ಕೆ 77 ಎಕರೆ 19 ಗುಂಟೆ ಸರ್ಕಾರಿ ಜಮೀನು ಒತ್ತುವರಿಗೆ ಮಾಡಿರುವುದಕ್ಕೆ 982 ಕೋಟಿ ರು. ಸರ್ಕಾರ ಸೂಚಿಸಿದ ಪ್ರಕರಣ ಮತ್ತು ಶಾಲೆಗಳಲ್ಲಿ ಹಿಜಾಬ್‌ ಧಾರಣೆ ನಿಷೇಧ ಪ್ರಕರಣದಲ್ಲಿ ಹೈಕೋರ್ಚ್‌ನಲ್ಲಿ ನಾವದಗಿ ಅವರು ಪ್ರಬಲ ವಾದ ಮಂಡಿಸಿ ಸರ್ಕಾರ ಜಯ ಪಡೆಯಲು ಕಾರಣವಾಗಿದ್ದರು

ಕಳೆದ ನಾಲ್ಕು ವರ್ಷದ ಅವಧಿಯಲ್ಲಿ ಅಡ್ವೋಕೇಟ್‌ ಜನಲರ್‌ ನಾಡು, ನುಡಿ, ನೆಲ ಮತ್ತು ಜಲ ರಕ್ಷಣೆ ವಿಚಾರದಲ್ಲಿ ರಾಜ್ಯ ಸರ್ಕಾರದ ಪರವಾಗಿ ಉತ್ತಮ ಕೆಲಸ ಮಾಡಿದ ತೃಪ್ತಿಯಿದೆ.

- ಪ್ರಭುಲಿಂಗ ನಾವದಗಿ, ನಿರ್ಗಮಿತ ಅಡ್ವೋಕೇಟ್‌ ಜನರಲ್‌

Follow Us:
Download App:
  • android
  • ios