Asianet Suvarna News Asianet Suvarna News

ಹಾವೇರಿಯಲ್ಲಿ ನಿರ್ಮಾಣವಾಗ್ತಿದೆ ಪುನೀತ್ ರಾಜಕುಮಾರ ದೇವಸ್ಥಾನ!

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಮ್ಮನ್ನಗಲಿ ಇಂದಿಗೆ ಭರ್ತಿ ಮೂರು ವರ್ಷಗಳೇ ಕಳೆದಿವೆ. ಆದರೂ ಅಭಿಮಾನಿಗಳು ಹೃದಯದಲ್ಲಿನ್ನೂ ಜೀವಂತ. ಅಪ್ಪುವನ್ನು ದಿನ ಸ್ಮರಿಸೋ, ಪೂಜಿಸೋ ಅದೇಷ್ಟೋ ಜೀವನಗಳಿವೆ. ಅವರಲ್ಲೊಬ್ಬ ಹಾವೇರಿ ಜಿಲ್ಲೆಯ ಪ್ರಕಾಶ್.  ದಿ. ಪುನೀತ್ ರಾಜಕುಮಾರ್ ಅವರನ್ನ ದೇವರಂತೆ ಆರಾಧಿಸುವ ಪ್ರಕಾಶ್ ಅಪ್ಪುಗಾಗಿ ದೇವಾಲಯವನ್ನೇ ನಿರ್ಮಿಸಿದ್ದಾನೆ.

power star puneeth rajkumar temple build by appu fan in haveri district rav
Author
First Published Aug 16, 2024, 9:38 PM IST | Last Updated Aug 16, 2024, 9:38 PM IST

ಹಾವೇರಿ (ಆ.16): ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಮ್ಮನ್ನಗಲಿ ಇಂದಿಗೆ ಭರ್ತಿ ಮೂರು ವರ್ಷಗಳೇ ಕಳೆದಿವೆ. ಆದರೂ ಅಭಿಮಾನಿಗಳು ಹೃದಯದಲ್ಲಿನ್ನೂ ಜೀವಂತ. ಅಪ್ಪುವನ್ನು ದಿನ ಸ್ಮರಿಸೋ, ಪೂಜಿಸೋ ಅದೇಷ್ಟೋ ಜೀವನಗಳಿವೆ. ಅವರಲ್ಲೊಬ್ಬ ಹಾವೇರಿ ಜಿಲ್ಲೆಯ ಪ್ರಕಾಶ್.  ದಿ. ಪುನೀತ್ ರಾಜಕುಮಾರ್ ಅವರನ್ನ ದೇವರಂತೆ ಆರಾಧಿಸುವ ಪ್ರಕಾಶ್ ಅಪ್ಪುಗಾಗಿ ದೇವಾಲಯವನ್ನೇ ನಿರ್ಮಿಸಿದ್ದಾನೆ.

ಹೌದು. ಹಾವೇರಿ ಜಿಲ್ಲೆಯಲ್ಲಿ  ಪವರ್ ಸ್ಟಾರ್ ದಿ.ಪುನೀತ್ ರಾಜಕುಮಾರ್‌ಗಾಗಿ ಅಭಿಮಾನಿ ಪ್ರಕಾಶ್ ದೇವಸ್ಥಾನವನ್ನೇ ಕಟ್ಟಿಸಿ ಅಭಿಮಾನ ಮೆರೆದಿದ್ದಾನೆ. ತಾಲೂಕಿನ ಯಲಗುಚ್ಚ ಗ್ರಾಮದವರಾದ ಪ್ರಕಾಶ. ವೃತ್ತಿಯಲ್ಲಿ ಮಾಸ್ಟರ್ ಆಗಿದ್ದಾನೆ.  ಅಪ್ಪು ಎಂದರೆ ಈತನಿಗೆ ಪಂಚಪ್ರಾಣ. ಜೀವನದಲ್ಲಿ ಒಮ್ಮೆಯಾದರೂ ಅಪ್ಪು ಜೊತೆಗೆ ಸಿನಿಮಾದಲ್ಲಿ ನಟಿಸಬೇಕು ಎಂದು ಕನಸು ಕಂಡಿದ್ದ ಅಭಿಮಾನಿ.  ಈ ವಿಚಾರವಾಗಿ ಹಲವು ಬಾರಿ ಪುನೀತ್ ರಾಜಕುಮಾರ್ ಭೇಟಿಗೆ ತೆರಳಿದ್ದರೂ ಅಂದು ಸಾಧ್ಯವಾಗಿರಲಿಲ್ಲ. ದೂರದಿಂದ ನೋಡಿದ ತೃಪ್ತಿಯೊಂದಿಗೆ ಮನೆಗೆ ವಾಪಸ್ ಆಗಿದ್ದ ಅಭಿಮಾನಿ.

 

ರಾಜ್​ ಅಭಿಮಾನಿಯಂತ ಹುಡುಗಿನ ನೋಡದೇ ಮದ್ವೆಯಾದೆ: ಲವ್​ಸ್ಟೋರಿಗೆ ಅಪ್ಪು ಭಾವುಕ- ಹಳೆ ವಿಡಿಯೋ ವೈರಲ್​

 ಆದರೆ ಮುಂದೊಮ್ಮೆ ಅಪ್ಪು ಜೊತೆ ನಟಿಸಬೇಕು ಎಂಬ ಆಸೆ ಜೀವಂತ ಇತ್ತು. ಇದೇ ವೇಳೆಗೆ ಪುನೀತ್ ರಾಜಕುಮಾರ ಹೃದಯಾಘಾತದಿಂದ ಅಕಾಲಿಕವಾಗಿ ನಿಧನದೊಂದಿಗೆ ಪ್ರಕಾಶ ಕನಸು ಕೂಡ ನುಚ್ಚುನೂರಾಯ್ತು. ಅಪ್ಪು ನಿಧನದಿಂದ ತೀವ್ರ ನೊಂದಿದ್ದ ಪ್ರಕಾಶ. ಹೀಗಾಗಿ ಪುನೀತ್ ರಾಜಕುಮಾರ ನೆನಪಿಗಾಗಿ ದೇವಸ್ಥಾನ ನಿರ್ಮಾಣ ಮಾಡಲು ಮುಂದಾಗಿದ್ದ ಅಭಿಮಾನಿ. ಇದೀಗ ಸುಮಾರು ಐದು ಲಕ್ಷ ರೂಪಾಯಿ ಖರ್ಚು ಮಾಡಿ ಚಿಕ್ಕದಾದ ದೇವಸ್ಥಾನವನ್ನು ಕೊನೆಗೂ ನಿರ್ಮಾಣ ಮಾಡಿದ್ದಾನೆ. ಎಲ್ಲ ಕಾರ್ಯ ಮುಗಿದಿದ್ದು, ದೇವಸ್ಥಾನಕ್ಕೆ ಅಂತಿಮ ಸ್ಪರ್ಶ ನೀಡಲಾಗ್ತಿದೆ. ಸದ್ಯ ಡಾ. ಪುನೀತ್ ರಾಜಕುಮಾರ ಪ್ರತಿಮೆ ಮಾಡಿಸಲಾಗುತ್ತಿದೆ. ಪ್ರತಿಮೆ ಪೂರ್ಣಗೊಂಡ ಬಳಿಕ ದೇವಸ್ಥಾನದೊಳಗೆ ಪ್ರತಿಷ್ಠಾಪಿಸಿ ದಿ.ಪುನೀತ್ ರಾಜ್‌ಕುಮಾರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ ಅವರಿಂದಲೇ ಉದ್ಘಾಟನೆ ಮಾಡಿಸಲು ಮುಂದಾಗಿರುವ ಅಭಿಮಾನಿ ಪ್ರಕಾಶ್. ಈಗಾಗಲೇ ಅಶ್ವಿನಿ ಪುನೀತ್ ರಾಜಕುಮಾರ್ ಅವರನ್ನು ಭೇಟಿ ಮಾಡಿ ಉದ್ಘಾಟನೆಗೆ ಆಹ್ವಾನಿಸಿರುವ ಪ್ರಕಾಶ್.

20 ವಯಸ್ಸಿಗೆ ನಟನೆ ಸಾಕು ಅಂದ್ರು ಅಮ್ಮ... ಮದುವೆ ಮಾಡಿದ್ರು... ಆದ್ರೆ... ನೋವಿನ ದಿನಗಳ ನೆನೆದ ಸುಧಾರಾಣಿ

ಎಲ್ಲವೂ ಅಂದುಕೊಂಡಂತೆ ಆದರೆ ಇದೇ ತಿಂಗಳಲ್ಲೇ ಪುನೀತ್ ರಾಜಕುಮಾರ ದೇವಾಲಯ ಉದ್ಘಾಟನೆಯಾಗಲಿದೆ. ದೇವಾಲಯ ನಿರ್ಮಾಣದ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದು ನಾಡಿನಾದ್ಯಂತ ಅಪ್ಪು ಅಭಿಮಾನಿಗಳು ಶೇರ್ ಮಾಡುತ್ತಿದ್ದಾರೆ. ನಮ್ಮ ಅಪ್ಪು ಯಾವತ್ತೂ ಜೀವಂತ ಎಂದಿದ್ದಾರೆ.

Latest Videos
Follow Us:
Download App:
  • android
  • ios