ಮೊಬೈಲ್ ಐಸಿಯು ಆಕ್ಸಿಜನ್ ಸಪೋರ್ಟ್ ಯೂನಿಟ್ 4 ಹಾಸಿಗೆಗಳ ಮೊಬೈಲ್ ಕ್ಲೀನಿಕ್ ವಾಹನ ರೋಗಿಗೆ ಮೂಲಭೂತ ವೈದ್ಯಕೀಯ ಆರೈಕೆ  

ಬೆಂಗಳೂರು(ಏ.21): ತುರ್ತು ಆರೋಗ್ಯ ನೆರವಿಗಾಗಿ ಪ್ರಾಣ ಆನ್ ವ್ಹೀಲ್ಸ್ ಸೇವೆ ಆರಂಭಗೊಂಡಿದೆ. ಪರಿಕ್ರಮ ಹ್ಯುಮಾನಿಟಿ ಫೌಂಡೇಷನ್ ಅಂಡ್ ಇಂಡಿಯಾಸ್ಸೆಟ್ಸ್, ಪ್ರೈಮರಿ ರೋಮಿಂಗ್ ಆಗ್ಮೆಂಟೆಡ್ ನಿಯೊ-ಮೆಡಿಕಲ್ ಏಡ್ ಜಂಟಿಯಾಗಿ ಪ್ರಾಣ ಆನ್ ವ್ಹೀಲ್ಸ್ ಆರಂಭಿಸಿದೆ. 

ಇದು ಮೊಬೈಲ್ ಕ್ಲೀನಿಕ್ ವಾಹನವಾಗಿದೆ. 4 ಬೆಡ್ ಕ್ಲೀನಿಕ್ ಇದಾಗಿದ್ದು, ಆಕ್ಸಿಜನ್ ಸಪೋರ್ಟ್ ಯುನಿಟ್ ಹೊಂದಿದೆ. ರೋಗಿಗಳಿಗೆ ತುರ್ತು ಚಿಕಿತ್ಸೆ ಸಿಗಲಿದ್ದು, ಆಕ್ಸಿಜನ್ ಯೂನಿಟ್ ಸೇರಿದಂತೆ ಇತರ ವೈದ್ಯಕೀಯ ಸೌಲಭ್ಯವೂ ಸಿಗಲಿದೆ. ಇದರಿಂದ ಗಂಭೀರ ಸಮಸ್ಯೆಗಳಿರುವ ರೋಗಿಗಳು ಆಸ್ಪತ್ರೆ ತಲುಪವರೆಗೂ ನಿರಂತರ ತುರ್ತು ಸೇವೆ ಸಿಗಲಿದೆ.

ಈ ರಕ್ತದ ಗುಂಪಿಗೆ ಹೃದಯಾಘಾತದ ಅಪಾಯ ಹೆಚ್ಚು, ನಿಮ್ಮ ಬ್ಲಡ್ ಗ್ರೂಪ್ ಯಾವುದು ?

ಈ ಮೊಬೈಲ್ ಮಾದರಿಯು ಮೂರು ಉದ್ದೇಶಗಳನ್ನು ಪೂರೈಸುತ್ತದೆ: 
1.ಮೊದಲಿಗೆ ಮೊಬೈಲ್ ಐಸಿಯು ಆಕ್ಸಿಜನ್ ಸಪೋರ್ಟ್ ಯೂನಿಟ್ 4 ಹಾಸಿಗೆಗಳಿಂದ ಇದ್ದು ಅದು ಗಂಭೀರ ರೋಗಿಗಳಿಗೆ ಆಸ್ಪತ್ರೆ ಸೌಲಭ್ಯ ದೊರೆಯುವವರೆಗೆ ತುರ್ತು ಬೆಂಬಲ ನೀಡುತ್ತದೆ. 
2. ಎರಡನೆಯದಾಗಿ ಇದು ಮೊಬೈಲ್ ವ್ಯಾಕ್ಸಿನೇಷನ್ ಅಡ್ಮಿನಿಸ್ಟ್ರೇಟರ್ ಆಗಿ ಕೆಲಸ ಮಾಡುತ್ತದೆ
3. ಮೂರನೆಯದು ಮೊಬೈಲ್ ಕ್ಲಿನಿಕ್ ದೀರ್ಘಾವಧಿಯಲ್ಲಿ ಮೂಲಭೂತ ವೈದ್ಯಕೀಯ ಆರೈಕೆ ಒದಗಿಸುತ್ತದೆ
4. ಈ ಘಟಕವು ರೋಗಿಗಳಿಗೆ ನಾಲ್ಕು ಹಾಸಿಗೆಗಳನ್ನು ಹೊಂದಿದೆ ಮತ್ತು ಡಾಕ್ಟರ್ ಆನ್ ಕಾಲ್ ರೀತಿಯಲ್ಲಿ ಸನ್ನದ್ಧವಾಗಿದ್ದು ಅವರು ಸ್ವಯಂ ಬರುತ್ತಾರೆ 

ತುಳಸಿಭಾಯ್‌, ಡಬ್ಲ್ಯುಎಚ್‌ಒ ಮುಖ್ಯಸ್ಥಗೆ ಮೋದಿಯಿಂದ ಹೊಸ ಹೆಸರು ನಾಮಕರಣ!

ಮೊಬೈಲ್ ಯೂನಿಟ್ ಅನ್ನು ಪೂರ್ವ ನಿಗದಿತ ಡಾಕಿಂಗ್ ಪಾಯಿಂಟ್‍ನಲ್ಲಿ ಇರಿಸಬಹುದು ಅದು ಗಂಭೀರ ರೋಗಿಗಳ ಪ್ರದೇಶಗಳಿಗೆ ಹತ್ತಿರದಲ್ಲಿರುತ್ತದೆ. ಒಮ್ಮೆ ಉದ್ದೇಶ ಪೂರ್ಣಗೊಂಡ ನಂತರ ಅದನ್ನು ಅಗತ್ಯವಿರುವ ಮತ್ತೊಂದು ಡಾಕಿಂಗ್ ಸ್ಟೇಷನ್‍ನತ್ತ ಕೊಂಡೊಯ್ಯಬಹುದು. ಒಂದು ಘಟಕದ ನಿರ್ಮಾಣ ಮತ್ತು 6 ತಿಂಗಳ ನಿರ್ವಹೆ ವೆಚ್ಚ 60 ಲಕ್ಷ ರೂ. ವೆಚ್ಚವಾಗುತ್ತದೆ. ಪ್ರಾಣ ಮೊಬೈಲ್ ಘಟಕಗಳು ಬೆಂಗಳೂರಿನ ದುರ್ಬಲ ವರ್ಗದವರಿಗೆ 110 ಕೊಳಚೆ ಪ್ರದೇಶಗಳಿಗೆ ಸೇವೆ ಒದಗಿಸುತ್ತಿದ್ದು 20000 ಜನಸಂಖ್ಯೆಗೆ ಪೂರೈಸುತ್ತದೆ.

ಪರಿಕ್ರಮ ಫೌಂಡೇಷನ್‍ನ ಸಂಸ್ಥಾಪಕ ಮತ್ತು ಸಿಇಒ ಶುಲ್ಕಾ ಬೋಸ್, “ಬೆಂಗಳೂರು 1.3 ಕೋಟಿ ಜನಸಂಖ್ಯೆ ಹೊಂದಿದ್ದು 10 ಲಕ್ಷ ಮಂದಿ ಕೊಳಚೆ ಪ್ರದೇಶಗಳಲ್ಲಿ ಜೀವಿಸುತ್ತಿದ್ದಾರೆ ಮತ್ತು 1000 ಅಂತಹ ವಾಹನಗಳು ಅಗತ್ಯವಾಗಿದ್ದು ಆದರೆ ನಮ್ಮ ಗುರಿ 100 ಮೊಬೈಲ್ ಕ್ಲಿನಿಕ್‍ಗಳನ್ನು ತಲುಪುವುದಾಗಿದೆ” ಎಂದರು. 

“ಪರಿಕ್ರಮ ಫೌಂಡೇಷನ್ ದುರ್ಬಲ ವರ್ಗದವರಿಗೆ ಅದರಲ್ಲಿಯೂ ಮಕ್ಕಳ ಶಿಕ್ಷಣ ಮತ್ತು ಅವರ ಕುಟುಂಬಗಳಿಗೆ ನೆರವಾಗುವ ವಿಧಾನ ನಮ್ಮ ಮನ ಮುಟ್ಟಿದೆ. ಅವರೊಂದಿಗೆ ಸಹಯೋಗದಿಂದ ನಮ್ಮ ಜೀವನಗಳ ಸದೃಢವಾಗಿ ಬೆಳೆದಿವೆ ಮತ್ತು ನಾವು ದುರ್ಬಲ ವರ್ಗದವರಿಗೆ ನೆರವಾಗಲು ಮತ್ತಷ್ಟು ಶ್ರಮಿಸುತ್ತೇವೆ ಎಂದು ಇಂಡಿಯಾ ಅಸ್ಸೆಟ್ಸ್‍ನ ಸಂಸ್ಥಾಪಕ ಮತ್ತು ಸಿಇಒ ಶಿವಂ ಸಿನ್ಹಾ ಹೇಳಿದ್ದಾರೆ.

ಭಾರತದ ಇತಿಹಾಸದಲ್ಲಿ ನಾವು ಹಿಂದೆಂದೂ ಕಾಣದ ಬಿಕ್ಕಟ್ಟನ್ನು ಎದುರಿಸಿದೆವು. ಮೂಲಭೂತ ಸೌಕರ್ಯಗಳ ಕೊರತೆ ಅಥವಾ ಈ ಸಂಪನ್ಮೂಲಗಳ ಸಕಾಲಿಕ ಬಳಕೆ ದುರ್ಬಲ ವರ್ಗದವರಿಗೆ ಅತ್ಯಂತ ಪ್ರಮುಖ ಸವಾಲುಗಳಲ್ಲಿ ಒಂದಾಗಿ ಮುಂದುವರಿದಿದೆ. 

ನಾವು ಸೀಮಿತ ಅಥವಾ ಬೆಂಬಲವೇ ಇಲ್ಲದವರಿಗೆ ತಲುಪಲು ಕಟಿಬದ್ಧರಾಗಿದ್ದೇವೆ. ಪರಿಕ್ರಮ ಹ್ಯುಮಾನಿಟಿ ಫೌಂಡೇಷನ್ ಅಂಡ್ ಇಂಡಿಯಾಸ್ಸೆಟ್ಸ್ ಒಟ್ಟಿಗೆ ಬಂದಿದ್ದು ಪ್ರೈಮರಿ ರೋಮಿಂಗ್ ಆಗ್ಮೆಂಟೆಡ್ ನಿಯೊ-ಮೆಡಿಕಲ್ ಏಡ್-`ಪ್ರಾಣ ಕ್ಲಿನಿಕ್ ಆನ್ ವ್ಹೀಲ್ಸ್’ ಬಿಡುಗಡೆ ಮಾಡಿದೆ.