ವಿಜಯಪುರ : ಪಾಕ್ ಉಗ್ರರ ನೆಲೆಗಳ ಮೇಲೆ ನಮ್ಮ ಸೇನೆ ದಾಳಿ ಮಾಡಿದೆ. ಆದರೆ ಅಲ್ಲಿನ ಸೈನಿಕರು ಹಾಗೂ ಅವರ ಅಡಗುತಾಣಗಳ ಮೇಲೆ ದಾಳಿ ಮಾಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. 

ವಿಜಯಪುರದಲ್ಲಿ ಮಾತನಾಡಿದ ಅವರು ನಮ್ಮ ಸೇನಾ ಪಡೆ ಪಾಕಿಸ್ತಾನ ಸೈನಿಕರ ಮೇಲೆ ದಾಳಿ ಮಾಡಿಲ್ಲ. ಅವರ ತಾಣಗಳು ದಾಳಿಗೆ ಒಳಗಾಗಿಲ್ಲ. ಆದರೆ ಪಾಕ್ ಪಡೆಗಳು ನಮ್ಮ ಸೇನಾ ಪಡೆ ಮೇಲೆ ನಿರಂತರ ದಾಳಿ ಮಾಡುತ್ತಿವೆ.  ಪಾಕಿಸ್ತಾನದ ಅಟ್ಟಹಾಸ ಜಾಸ್ತಿಯಾಗಿದೆ, ಅವರು ಕಾಲು ಕೆರೆದುಕೊಂಡು ಬಂದರೆ ನಾವು ಸರಿಯಾಗಿ ಉತ್ತರ ನೀಡಬೇಕಿದೆ ಎಂದರು. 

ಬುದ್ಗಾಮ್ನಲ್ಲಿ ಪತವಾಗಿದ್ದು ಮಿಗ್-21 ವಿಮಾನ ಅಲ್ಲ, Mi-17 ಹೆಲಿಕಾಪ್ಟರ್

ಫೆ.14ರಂದು ನಡೆದ ದಾಳಿಯಲ್ಲಿ ನಮ್ಮ 44 ಯೋಧರು ಹುತಾತ್ಮರಾದರು. ಇಂತಹ ದುಷ್ಕೃತ್ಯ ಎಸಗುವ ಪಾಕಿಸ್ತಾನಕ್ಕೆ ಈ ಹಿಂದೆಯೇ ಅನೇಕ ಬಾರಿ ಉತ್ತರಿಸಿದ್ದೇವೆ.  1965 ಹಾಗೂ 1971 ರಲ್ಲಿ ಪಾಠ ಕಲಿಸಲಾಗಿದೆ. ಈಗ ಮತ್ತೆ ಮತ್ತೆ ದಾಳಿ ಮುಂದುವರಿಸಿದ್ದು, ಈಗಲೂ ಕೂಡ ತಕ್ಕ ಪಾಠ ಕಲಿಸುವ ಸಮಯ ಬಂದಿದೆ ಎಂದು ಸಿದ್ದರಾಮಯ್ಯ ಹೇಳಿದರು. 

ರಫೇಲ್‌ ಇದ್ದಿದ್ದರೆ ಪಾಕ್ ಗಡಿ ದಾಟುವ ಅಗತ್ಯವೇ ಇರಲಿಲ್ಲ

ಪುಲ್ವಾಮಾದಲ್ಲಿ ಫೆ. 14 ರಂದು ಜೈಶ್ ಸಂಘಟನೆ ಉಗ್ರರು ದಾಳಿ ನಡೆಸಿ 44 ಯೋಧರು ಹುತಾತ್ಮರಾಗಿದ್ದರು. ಇದಕ್ಕೆ ಪ್ರತ್ಯುತ್ತರವಾಗಿ ಭಾರತೀಯ ವಾಯುಪಡೆ ಉಗ್ರ ಶಿಬಿರಗಳನ್ನು ಧ್ವಂಸ ಮಾಡಿದೆ. ಈ ವೇಳೆ 350ಕ್ಕೂ ಹೆಚ್ಚು ಉಗ್ರರು ಹತರಾಗಿದ್ದಾರೆ.