ಇಸ್ಲಾಮಾಬಾದ್‌: ತೀವ್ರ ಹಣಕಾಸು ಬಿಕ್ಕಟ್ಟು ಎದುರಿಸುತ್ತಿರುವ ಪಾಕಿಸ್ತಾನ ಸರ್ಕಾರ, ಹಜ್‌ ಸಬ್ಸಿಡಿಯನ್ನು ರದ್ದುಗೊಳಿಸುವ ಮೂಲಕ ಬೊಕ್ಕಸಕ್ಕೆ 450 ಕೋಟಿ ರು. ಉಳಿತಾಯ ಮಾಡಲು ಮುಂದಾಗಿದೆ.

ಈ ಬಗ್ಗೆ ಪಾಕಿಸ್ತಾನದ ಧಾರ್ಮಿಕ ಹಾಗೂ ಆಂತರಿಕ ನಂಬಿಕೆಯ ಸಾಮರಸ್ಯ ಸಚಿವ ನೂರುಲ್‌ ಹಕ್‌ ಖಾದ್ರಿ ಅವರು ಖಚಿತಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಸಚಿವ ಖಾದ್ರಿ, ‘ಈ ಹಿಂದಿನ ಸರ್ಕಾರವು ಹಜ್‌ ಯಾತ್ರೆ ಕೈಗೊಳ್ಳುವ ಪ್ರತಿಯೊಬ್ಬರಿಗೂ 42 ಸಾವಿರ ರು.ನಂತೆ ಸಬ್ಸಿಡಿ ನೀಡುತಿತ್ತು. 

ಇದರಿಂದ ಸರ್ಕಾರದ ಬೊಕ್ಕಸದ ಮೇಲೆ 450 ಕೋಟಿ ರು. ಹೊರೆ ಬೀಳುತ್ತಿತ್ತು. ಆದರೆ, ಇದೀಗ ದೇಶದ ಆರ್ಥಿಕ ಪರಿಸ್ಥಿತಿ ಸರಿಯಿಲ್ಲವಾದ್ದರಿಂದ, ಹಜ್‌ ಯಾತ್ರೆಯ ಸಬ್ಸಿಡಿ ರದ್ದುಗೊಳಿಸಲಾಗಿದೆ,’ ಎಂದಿದ್ದಾರೆ.