Asianet Suvarna News Asianet Suvarna News

ಪುನೀತ್‌ ರಾಜ್‌ಕುಮಾರ್‌ಗೆ ಪದ್ಮಶ್ರೀ, ಕರ್ನಾಟಕ ರತ್ನ ನೀಡಬೇಕು: ಡಿಕೆಶಿ

*  ಯುವಜನರ ಐಕಾನ್‌ ಆಗಿದ್ದ ಪುನೀತ್‌
*  ಸಿನಿಮಾ ಕ್ಷೇತ್ರ  ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಪುನೀತ್‌ ಮಾಡಿದ ಸಾಧನೆ ದೊಡ್ಡದು
*  ಅಜಾತ ಶತ್ರುವಾಗಿ ಬಾಳಿದ ಪುನೀತ್‌ ರಾಜ್‌ಕುಮಾರ್‌ 

Padma Shri, Karnataka Ratna Should Be Give to Puneeth Rajkumar Says DK Shivakumar grg
Author
Bengaluru, First Published Nov 4, 2021, 8:47 AM IST

ಬೆಂಗಳೂರು(ನ.04):  ಹಠಾತ್‌ ನಿಧನರಾದ ಪವರ್‌ಸ್ಟಾರ್‌(Power Star) ಪುನೀತ್‌ ರಾಜ್‌ಕುಮಾರ್‌(Puneeth Rajkumar) ಮೇರು ವ್ಯಕ್ತಿ ಹಾಗೂ ಅಜಾತ ಶತ್ರು. ಹೀಗಾಗಿ ರಾಜ್ಯದ(Karnataka) ಜನತೆಯ ಒತ್ತಾಯದಂತೆ ಅವರಿಗೆ ಕೇಂದ್ರ ಸರ್ಕಾರ(Central Government) ಪದ್ಮಶ್ರೀ ಹಾಗೂ ರಾಜ್ಯ ಸರ್ಕಾರ(Government of Karnataka) ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಬೇಕು. ಜತೆಗೆ ಮುಖ್ಯರಸ್ತೆಗೆ ಅವರ ಹೆಸರಿಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌(DK Shivakumar) ಒತ್ತಾಯಿಸಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿನಿಮಾ ಕ್ಷೇತ್ರ(Movies) ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಪುನೀತ್‌ ಮಾಡಿದ ಸಾಧನೆ ದೊಡ್ಡದು. ಜತೆಗೆ ಅವರು ಅಜಾತ ಶತ್ರುವಾಗಿ ಬಾಳಿದವರು. ಹೀಗಾಗಿ ಪುನೀತ್‌ ರಾಜ್‌ಕುಮಾರ್‌ ಅವರ ಹೆಸರನ್ನು ನಗರದ ಪ್ರಮುಖ ರಸ್ತೆಗೆ ಇಡಬೇಕು. ಪದ್ಮಶ್ರೀ(Padma Shri), ಕರ್ನಾಟಕ ರತ್ನ(Karnataka Ratna) ಪ್ರಶಸ್ತಿ(Award) ನೀಡಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ. ಈ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಪುನೀತ್‌ ಎಫೆಕ್ಟ್ : ಹೃದಯ ಪರೀಕ್ಷೆ ಬಿಸಿನೆಸ್‌ ಜೋರು! 

ಹಿಂದೆ ಬಂಗಾರಪ್ಪನವರ(Bangarappa) ಸರ್ಕಾರ ಇದ್ದಾಗ ಪುನೀತ್‌ ಅವರ ತಂದೆ ವರನಟ ರಾಜ್‌ಕುಮಾರ್‌(Dr Rajkumar) ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಲಾಗಿತ್ತು. ಈಗ ಅದೇ ರೀತಿ ಪುನೀತ್‌ ಅವರಿಗೆ ಈ ಗೌರವ ನೀಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರನ್ನು ಆಗ್ರಹಿಸುತ್ತೇನೆ ಎಂದರು.

ಇನ್ನು ಪುನೀತ್‌ ಅವರ ನಿಧನದಿಂದ ರಾಜ್ಯ ಈ ಬಾರಿ ಬಹಳ ಕೆಟ್ಟ ಕನ್ನಡ ರಾಜ್ಯೋತ್ಸವ(Karnataka Rajyotsava) ಕಂಡಿದೆ. ಕಳೆದ ಒಂದೂವರೆ ವರ್ಷದಿಂದ ಕೊರೋನಾದಿಂದ ರಾಜ್ಯ ಹಾಗೂ ದೇಶದಲ್ಲಿ ಕತ್ತಲೆಯಲ್ಲಿ ಮುಳುಗಿದ್ದೆವು. ಇದೀಗ ಈ ಬೆಳಕಿನ ಹಬ್ಬದ ಮೂಲಕ ಬೆಳಕು ದೊರೆಯುವಂತಾಗಲಿ ಎಂದು ಶುಭ ಹಾರೈಸುತ್ತೇನೆ ಎಂದು ಹೇಳಿದರು.

ಯುವಜನರ ಐಕಾನ್‌ ಆಗಿದ್ದ ಪುನೀತ್‌

ಕುಲಕೋಟಿ ಕನ್ನಡಿಗರ(Kannadigas) ಆರಾಧ್ಯದೈವ ಡಾ.ರಾಜ್‌ಕುಮಾರ್‌(Dr Rajkumar Family) ಕುಟುಂಬದ ಕುಡಿ, ನಟ ಪುನೀತ್‌ ರಾಜಕುಮಾರ್‌ ಅವರು ಯುವಕರಿಗೆ ಮಾರ್ಗದರ್ಶಕರು ಹಾಗೂ ಯುವಶಕ್ತಿಗೆ ಪ್ರೇರಣೆಯ ಐಕಾನ್‌ ಆಗಿದ್ದರು ಎಂದು ಕಡೂರು ಕಾಂಗ್ರೆಸ್‌(Congress) ಯುವ ಮುಖಂಡ ಆದರ್ಶ ಹೇಳಿದರು.

'ಅಪ್ಪು ನಿಮಗೆಂದೂ ಸಾವಿಲ್ಲ ನೀವಿಲ್ಲದೇ ಏನೇನೂ ಇಲ್ಲ': ನಿರ್ದೇಶಕ ಜೋಗಿ ಪ್ರೇಮ್

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಏರ್‌ ಆ್ಯಂಬುಲೆನ್ಸ್‌ ಮತ್ತು ಪೇಸ್‌ಮೇಕರ್‌ ಹಾಗೂ ಪ್ರತ್ಯೇಕ ಆ್ಯಂಬುಲೆನ್ಸ್‌ ಲೇನ್‌ಗಳ ವ್ಯವಸ್ಥೆ ಬೇಕಾಗಿದೆ. ಇಂಗ್ಲೆಂಡ್‌ನಲ್ಲಿ(England) ನಡೆಯುತ್ತಿದ್ದ ಪುಟ್ಬಾಲ್‌(Football) ಪಂದ್ಯಾವಳಿ ವೇಳೆ ಕುಸಿದುಬಿದ್ದ ಅಭಿಮಾನಿ(Fan) ಸಾವಿರಾರು ಜನರ ಮಧ್ಯೆ ಪ್ರೋಟಬಲ್‌ ಪೇಸ್‌ಮೇಕರ್‌ ಸಹಾಯದಿಂದ ಬದುಕುಳಿದ ನಿದರ್ಶನಗಳಿವೆ ಎಂದರು.

ನಟ ಪುನೀತ್‌ ಸಾವು ಯುವಕರಿಗೆ ಹಾಗೂ ರಾಜ್ಯದ ಕೋಟ್ಯಂತರ ಅಭಿಮಾನಿಗಳಿಗೆ ತುಂಬಾ ನಷ್ಟ ವುಂಟಾಗಿದೆ. ಅನಾಥಾಶ್ರಮ, ಉಚಿತ ಶಾಲೆ, ವೃದ್ಧಾಶ್ರಮ, ಗೋ ಶಾಲೆಗಳು, 1800ಕ್ಕೂ ಹೆಚ್ಚಿನ ಮಕ್ಕಳ ಸಂಪೂರ್ಣ ಶಿಕ್ಷಣ ಮತ್ತು ಶಕ್ತಿಧಾಮ ಹೆಸರಿನಲ್ಲಿ ಸೇವೆ ನೀಡುತ್ತಿದ್ದ ಪುನೀತ್‌ ರಾಜಕುಮಾರ್‌ ಅವರಂತಹ ಕೊಡುಗೈ ದಾನಿಗಳಿಗೆ ಆ ದೇವರು ಇಂತಹ ಸಾವನ್ನು ನೀಡಬಾರದಿತ್ತು ಎಂದು ಕಂಬನಿ ಮಿಡಿದರು.

ಈ ಘಟನೆಯಿಂದ ದೇಶದ ಆರೋಗ್ಯ ವ್ಯವಸ್ಥೆ ಎಷ್ಟು ಶೋಚನೀಯ ಸ್ಥಿತಿಯಲ್ಲಿ ಇದೆ ಎಂದು ತಿಳಿಯುತ್ತಿದೆ. ಒಂದು ಏರ್‌ ಆ್ಯಂಬುಲೆನ್ಸ್‌ ಇಲ್ಲ. ಪೇಸ್‌ಮೇಕರ್‌ ಇಲ್ಲ, ಪ್ರತ್ಯೇಕವಾದ ಆ್ಯಂಬುಲೆನ್ಸ್‌ ಬಂದರೆ ಝೀರೋ ಟ್ರಾಫಿಕ್‌ ಮಾಡುವ ಸಾಮಾನ್ಯಪ್ರಜ್ಞೆ ನಮ್ಮಲ್ಲಿಲ್ಲ. ಇಂತಹ ವ್ಯವಸ್ಥೆಯಿಂದ ನಾವು ಇನ್ನು ಎಷ್ಟು ಅಮೂಲ್ಯ ಜೀವಗಳನ್ನು ಕಳೆದುಕೊಳ್ಳಬೇಕಿದೆ? ಪ್ರತಿ ಜೀವವು ಮುಖ್ಯ, ಇನ್ನಾದರೂ ಜೀವಗಳನ್ನು ಉಳಿಸಿ ಎಂದು ಆಗ್ರಹಿಸಿದರು.
 

Follow Us:
Download App:
  • android
  • ios