ತಗ್ಗಿದ ಭೀಮಾ ಪ್ರವಾಹ, ಕಡಿಮೆಯಾಗಿಲ್ಲ ಆತಂಕ; ಗ್ರಾಮ ತೊರೆಯಲು ಮುಂದಾಗುತ್ತಿಲ್ಲ ಗ್ರಾಮಸ್ಥರು
ಭೀಮೆ ನದಿ ನಿರಿನ ಮಟ್ಟ ನಿಧಾನವಾಗಿ ಇಳಿಮುಖವಾಗುತ್ತಿದ್ದರೂ ಕಲಬುರ್ಗಿ, ವಿಜಯಪುರ, ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಪ್ರವಾಹದ ಆತಂಕ ಮಾತ್ರ ಕಡಿಮೆಯಾಗಿಲ್ಲ.

ಬೆಂಗಳೂರು (ಅ. 19): ಭೀಮೆ ನದಿ ನಿರಿನ ಮಟ್ಟ ನಿಧಾನವಾಗಿ ಇಳಿಮುಖವಾಗುತ್ತಿದ್ದರೂ ಕಲಬುರ್ಗಿ, ವಿಜಯಪುರ, ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಪ್ರವಾಹದ ಆತಂಕ ಮಾತ್ರ ಕಡಿಮೆಯಾಗಿಲ್ಲ.
ಮಹಾರಾಷ್ಟ್ರ ಜಲಾಶಯಗಳಿಂದ ಮತ್ತಷ್ಟು ನೀರು ಬಿಡುವ ಆತಂಕ, ಮುಂದಿನ ಮೂರ್ನಾಲ್ಕು ದಿನ ರಾಜ್ಯದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಹಿನ್ನಲೆಯಲ್ಲಿ ನದಿ ತೀರದ ಗ್ರಾಮಗಳ ಜನರ ಸ್ಥಳಾಂತರ, ರಕ್ಷಣಾ ಕಾರ್ಯ ಮತ್ತಷ್ಟು ಚುರುಕುಗೊಂಡಿದೆ.
ಭೀಮಾ ಪ್ರವಾಹಕ್ಕೆ ಗ್ರಾಮಗಳು ಸಂಪೂರ್ಣ ಜಲಾವೃತವಾಗಿವೆ. ಗ್ರಾಮಗಳನ್ನು ತೊರೆಯಲು ಗ್ರಾಮಸ್ಥರು ಮುಂದಾಗುತ್ತಿಲ್ಲ. ಗುಲ್ಬರ್ಗಾದ ಕೋನ ಹಿಪ್ಪರಗಾ ಗ್ರಾಮಸ್ಥರನ್ನು NDRF ಪಡೆ ರಕ್ಷಣೆ ಮಾಡಿದೆ.