ನಮ್ಮ ಹಣೆಬರಹ ಯಾವ ದೇವರೂ ಬರೆಯಲ್ಲ: ಸಿಎಂ ಸಿದ್ದರಾಮಯ್ಯ

ಹೆಚ್. ಆಂಜನೇಯ ಎರಡು ಸಲ ಎಸ್‌ಎಸ್‌ಎಲ್‌ಸಿ ಫೇಲ್ ಆಗಿದ್ದ, ಆದರೂ ನನ್ನ ಸಂಪುಟದಲ್ಲಿ ಸಚಿವ ಆಗಿದ್ದನು ಎಸ್ ಸಿಪಿ ಟಿಎಸ್ ಪಿ ಕಾಯ್ದೆ ಮಂಡನೆ ವೇಳೆ ಸೂಟ್ ಹಾಕಿಕೊಂಡು ಬರಲು ಸೂಚಿಸಿದ್ದೆನು: ಸಿಎಂ ಸಿದ್ದರಾಮಯ್ಯ 

Our fate is not written by any god says cm siddaramaiah grg

ಚಿತ್ರದುರ್ಗಜು.20): ವೈಜ್ಞಾನಿಕ, ವೈಚಾರಿಕ ಶಿಕ್ಷಣ ಇರಬೇಕು. ಅನೇಕರು ಮೌಢ್ಯ ಆಚರಣೆ ಮಾಡುತ್ತಾರೆ. ನಮ್ಮ ಹಣೆಬರಹ, ಪೂರ್ವ ಜನ್ಮದ ಕರ್ಮ ಎನ್ನುತ್ತಾರೆ. ಯಾರ ಹಣೆ ಮೇಲೂ ಬ್ರಹ್ಮ ಬರೆಯಲು ಬರುತ್ತಾನೆ. ಯಾವ ದೇವರೂ ಬರೆಯಲ್ಲ. ಇದೆಲ್ಲಾ ನಾವು ನಂಬಿಕೊಂಡಿರುವಂಥದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. 

ಇಂದು(ಶನಿವಾರ) ನಗರದಲ್ಲಿ ನಡೆದ ಹೆಚ್. ಆಂಜನೇಯ ಚಾರಿಟೇಬಲ್ ಟ್ರಸ್ಟ್ ನಿಂದ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬದಲಾವಣೆ ಆಗಬೇಕು, ಜಾತಿ ವ್ಯವಸ್ಥೆಗೆ ಚಲನೆ ಇಲ್ಲ. ಮಾದಿಗ ಸಮಾಜಕ್ಕೆ ಸೇರಿದ 90ಕ್ಕೂ ಹೆಚ್ಚು ವಿದ್ಯಾರ್ಥಿಗಳು 85ಕ್ಕೂ ಹೆಚ್ಚು ಮಾರ್ಕ್ಸ್ ಪಡೆದು ಗೌರವಕ್ಕೆ ಪಾತ್ರರಾಗಿದ್ದಾರೆ ಎಂದು ತಿಳಿಸಿದ್ದಾರೆ. 

ಅಕ್ರಮಗಳ ಸರದಾರನ ವಿಚಾರದಲ್ಲಿ ಸಿದ್ದು ದಾರಿ ತಪ್ಪಿದ್ದು ಹೇಗೆ ? 'ಟಗರು'ರಾಮಯ್ಯಗೆ ಇಂದು 'ನಾಗ'ಕಂಟಕ..!

ನೀವೆ ಅಂಬೇಡ್ಕರ್ ಅಂದ ಸಭಿಕರಿಗೆ ಅಂಬೇಡ್ಕರ್ ಆಗಲು ಸಾಧ್ಯ ಆಗಿಲ್ಲ. ಅಂಬೇಡ್ಕರ್ ವಿಚಾರದಲ್ಲಿ ನಂಬಿಕೆಯಿಟ್ಟುಕೊಂಡಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. 

ಹೆಚ್. ಆಂಜನೇಯ ಎರಡು ಸಲ ಎಸ್‌ಎಸ್‌ಎಲ್‌ಸಿ ಫೇಲ್ ಆಗಿದ್ದ, ಆದರೂ ನನ್ನ ಸಂಪುಟದಲ್ಲಿ ಸಚಿವ ಆಗಿದ್ದನುಎಸ್ ಸಿಪಿ ಟಿಎಸ್ ಪಿ ಕಾಯ್ದೆ ಮಂಡನೆ ವೇಳೆ ಸೂಟ್ ಹಾಕಿಕೊಂಡು ಬರಲು ಸೂಚಿಸಿದ್ದೆನು ಎಂದು ಹೇಳಿದ್ದಾರೆ. 

Latest Videos
Follow Us:
Download App:
  • android
  • ios