ಕರ್ನಾಟಕದಲ್ಲಿ ಕೊರೋನಾ ಇಳಿಕೆ: ಮೊದಲ ಬಾರಿ 1 ಸಾವಿರಕ್ಕಿಂತ ಕಡಿಮೆ ಕೇಸ್

* ಕರ್ನಾಟಕದಲ್ಲಿ ಕೊರೋನಾ ಭಾರೀ ಇಳಿಕೆ
* ಮೊದಲ ಬಾರಿಗೆ ಕರ್ನಾಟಕದಲ್ಲಿ 1 ಸಾವಿರಕ್ಕಿಂತ ಕಡಿಮೆ ಕೇಸ್
* ನಾಲ್ಕು ಜಿಲ್ಲೆಗಳಲ್ಲಿ ಯಾವುದೇ ಪಾಸಿಟಿವ್ ಕೇಸ್ ದೃಢಪಟ್ಟಿಲ್ಲ

Only 973 New Coronavirus Cases and 15 Deaths In Karnataka On August 30 rbj

ಬೆಂಗಳೂರು, (ಆ.30): ಕರ್ನಾಟಕದಲ್ಲಿ ಕೊರೋನಾ ಸೋಂಕು ಭಾರೀ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ಇದೇ ಮೊದಲ ಬಾರಿಗೆ 1 ಸಾವಿರಕ್ಕಿಂತ ಕಡಿಮೆ ಕೇಸ್ ಪತ್ತೆಯಾಗಿವೆ. 

ಹೌದು...ರಾಜ್ಯದಲ್ಲಿ ಇಂದು (ಆ.30) ಹೊಸದಾಗಿ 973 ಜನರಿಗೆ ಸೋಂಕು ತಗುಲಿದ್ದು, 15 ಜನ ಸೋಂಕಿನಿಂದ ಮೃತಪಟ್ಟಿದ್ದಾರೆ. ಇನ್ನು 1324 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಕರ್ನಾಟಕ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಕೊರೋನಾ 3ನೇ ಅಲೆ ತಡೆಯಲು ಟಫ್ ರೂಲ್ಸ್ ಜಾರಿಗೆ ಸಲಹೆ

ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 29,48,228 ಕ್ಕೆ ಏರಿಕೆಯಾಗಿದ್ದು, ಇದುವರೆಗೆ 28,92,517 ಜನ ಗುಣಮುಖರಾಗಿದ್ದಾರೆ. 37,293 ಸೋಂಕಿತರು ಸಾವನ್ನಪ್ಪಿದ್ದಾರೆ. 18,392 ಸಕ್ರಿಯ ಪ್ರಕರಣಗಳಿದ್ದು, ಪ್ರಸ್ತುತ ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇಕಡ 0.64 ರಷ್ಟು ಇದೆ.

ರಾಜಧಾನಿ ಬೆಂಗಳೂರಿನಲ್ಲಿ 264 ಜನರಿಗೆ ಸೋಂಕು ತಗುಲಿದ್ದು, 261 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಮೂರು ಜನ ಸೋಂಕಿತರು ಮೃತಪಟ್ಟಿದ್ದಾರೆ. 7343 ಸಕ್ರಿಯ ಪ್ರಕರಣಗಳಿವೆ.

ಜಿಲ್ಲಾವಾರು ಕೇಸ್
ಬಾಗಲಕೋಟೆ-0, ಬಳ್ಳಾರಿ-4, ಬೆಳಗಾವಿ-18, ಬೆಂಗಳೂರು ಗ್ರಾಮಾಂತರ-6, ಬೆಂಗಳೂರು ನಗರ-264, ಬೀದರ್-0, ಚಾಮರಾಜನಗರ-9, ಚಿಕ್ಕಬಳ್ಳಾಪುರ-1, ಚಿಕ್ಕಮಗಳೂರು-14, ಚಿತ್ರದುರ್ಗ-10, ದಕ್ಷಿಣ ಕನ್ನಡ-193, ದಾವಣಗೆರೆ-5, ಧಾರವಾಡ-6, ಗದಗ-1, ಹಾಸನ-74, ಹಾವೇರಿ-1, ಕಲಬುರಗಿ-1, ಕೊಡಗು-42, ಕೋಲಾರ-38, ಕೊಪ್ಪಳ-2, ಮಂಡ್ಯ-10, ರಾಯಚೂರು-0, ರಾಮನಗರ-4, ಶಿವಮೊಗ್ಗ-38, ತುಮಕೂರು-21, ಉಡುಪಿ-98, ಉತ್ತರ ಕನ್ನಡ-39, ವಿಜಯಪುರ-0, ಯಾದಗಿರಿ-1.

Latest Videos
Follow Us:
Download App:
  • android
  • ios