Asianet Suvarna News Asianet Suvarna News

ನೆರೆಯಿಂದ 10,000 ಮನೆ ಮಾತ್ರ ಹಾನಿಯಾಗಿದ್ದು: ಮಾಧುಸ್ವಾಮಿ

ನೆರೆಯಿಂದ 10000 ಮನೆ ಮಾತ್ರ ಹಾನಿ: ಮಾಧುಸ್ವಾಮಿ| 6 ಸಾವಿರ ಮಂದಿ ಮಾತ್ರ ಪರಿಹಾರಕ್ಕಾಗಿ ಮುಂದೆ ಬಂದಿದ್ದಾರೆ

Only 10 Thousand Houses Effected By Karnataka Floods Says BJP Minister JC Madhuswamy
Author
Bangalore, First Published Oct 12, 2019, 7:59 AM IST

ವಿಧಾನಸಭೆ[ಅ.12]: ರಾಜ್ಯದಲ್ಲಿ ಉಂಟಾಗಿರುವ ನೆರೆಯಿಂದ 10,028 ಮನೆಗಳು ಮಾತ್ರ ಪೂರ್ಣ ಪ್ರಮಾಣದ ಹಾನಿಗೊಳಗಾಗಿವೆ. ಈ ಸಂಬಂಧ 6 ಸಾವಿರ ಮಂದಿ ಮಾತ್ರ ಪರಿಹಾರಕ್ಕಾಗಿ ಮುಂದೆ ಬಂದಿದ್ದಾರೆ. ಇನ್ನೂ ಹಲವರು ಪರಿಹಾರಕ್ಕಾಗಿಯೇ ಮನವಿ ಸಲ್ಲಿಸಿಲ್ಲ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಮತ್ತೊಮ್ಮೆ ಸ್ಪಷ್ಟಪಡಿಸಿದರು.

ಸದನದಲ್ಲಿ ಸಿದ್ದರಾಮಯ್ಯ-ಈಶ್ವರಪ್ಪ ‘ರಾಕ್ಷಸ ಯುದ್ಧ’

ನೆರೆ ಕುರಿತ ಚರ್ಚೆ ವೇಳೆ, ರಾಜ್ಯದಲ್ಲಿ 2 ಲಕ್ಷಕ್ಕೂ ಹೆಚ್ಚು ಮನೆಗಳು ಹಾನಿಯಾಗಿವೆ ಎಂದು ಸರ್ಕಾರದ ವರದಿಗಳು ಹೇಳುತ್ತವೆ. ಪತ್ರಿಕೆಯಲ್ಲೂ ಇದೇ ರೀತಿ ಜಾಹಿರಾತು ನೀಡಿದ್ದೀರಿ. ಆದರೆ ಜೆ.ಸಿ. ಮಾಧುಸ್ವಾಮಿ ಅವರು 10 ಸಾವಿರ ಮನೆ ಮಾತ್ರ ಹಾನಿಯಾಗಿದೆ. ಅದರ ಪರಿಹಾರ ಪಡೆಯಲೂ ಸಂತ್ರಸ್ತರು ಬರುತ್ತಿಲ್ಲ ಎಂದು ಹೇಳುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.

‘ನಿಮ್ಮ ಮಾತು ಕೇಳಲ್ಲ.. ಕೇಳಕಾಗಲ್ಲ’ ಸಿದ್ದು ಸವಾಲು, ಸ್ಪೀಕರ್ ಕೂಲ್ ಕೂಲ್!

ಇದಕ್ಕೆ ಪ್ರತಿಕ್ರಿಯಿಸಿ ಮಾತನಾಡಿದ ಮಾಧುಸ್ವಾಮಿ, ನೆರೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಹಾನಿಗೊಳಗಾಗಿರುವ ಮನೆ 10,028 ಮಾತ್ರ. ಇದರಲ್ಲಿ ಸುಮಾರು 6 ಸಾವಿರದಷ್ಟುಸಂತ್ರಸ್ತರು ಮಾತ್ರ ಪರಿಹಾರಕ್ಕಾಗಿ ಮನವಿ ಸಲ್ಲಿಸಿದ್ದಾರೆ. ಮನೆಗಳ ಹಾನಿ ಪ್ರಮಾಣದ ಆಧಾರದ ಮೇಲೆ ನಾಲ್ಕು ರೀತಿಯ ಕೆಟಗರಿಗಳನ್ನು ಮಾಡಿದ್ದೇವೆ. ಇದರಲ್ಲಿ ‘ಬಿ’ ಕೆಟಗರಿಯಲ್ಲಿ 26 ಸಾವಿರ ಮನೆ, ‘ಸಿ’ ಕೆಟಗರಿಯಲ್ಲಿ 69 ಸಾವಿರ ಮನೆ ಹಾಳಾಗಿವೆ. ಬಿ ಕೆಟಗರಿಯ 26 ಸಾವಿರ ಮನೆಗಳನ್ನೂ ಪೂರ್ಣ ಪ್ರಮಾಣದ ಹಾನಿಗೊಳಗಾದ ಮನೆಗಳಾಗಿ ಪರಿಗಣಿಸಿ 5 ಲಕ್ಷ ರು. ಪರಿಹಾರ ನೀಡಲು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಜತೆಗೆ ಸಿ ಕೆಟಗರಿ ಹಾಗೂ ಡಿ ಕೆಟಗರಿ ಮನೆಗಳಿಗೂ ಪರಿಹಾರವನ್ನು ಹೆಚ್ಚಳ ಮಾಡಲು ಪ್ರಸ್ತಾಪಿಸಲಾಗಿದೆ ಎಂದು ಮಾಹಿತಿ ನೀಡಿದರು.

Follow Us:
Download App:
  • android
  • ios