ಬಿಬಿಎಂಪಿ ಪಾಲಿಗೆ ಬಿಳಿ ಆನೆಯಂತಾಗಿರುವ ಮಾರ್ಷಲ್ಸ್; ಅನವಶ್ಯಕ ಹುದ್ದೆ ಸ್ಥಗಿತಕ್ಕೆ ಎನ್ಆರ್ ರಮೇಶ್ ದೂರು
ಬಿಬಿಎಂಪಿ ಪಾಲಿಗೆ ಬಿಳಿ ಆನೆಯಂತಾಗಿರುವ ಅನವಶ್ಯಕ ಮಾರ್ಷಲ್ ಗಳ ಸೇವೆಯನ್ನು ಸ್ಥಗಿತ ಗೊಳಿಸುವಂತೆ ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕ ಅಧ್ಯಕ್ಷರಾದ ಎನ್ ಆರ್ ರಮೇಶ್ ಆಗ್ರಹಿಸಿದ್ದಾರೆ.
ಬೆಂಗಳೂರು (ನ.20): ಬಿಬಿಎಂಪಿ ಪಾಲಿಗೆ ಬಿಳಿ ಆನೆಯಂತಾಗಿರುವ ಅನವಶ್ಯಕ ಮಾರ್ಷಲ್ ಗಳ ಸೇವೆಯನ್ನು ಸ್ಥಗಿತ ಗೊಳಿಸುವಂತೆ ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕ ಅಧ್ಯಕ್ಷರಾದ ಎನ್ ಆರ್ ರಮೇಶ್ ಆಗ್ರಹಿಸಿದ್ದಾರೆ.
ಈ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್,ಪಾಲಿಕೆಯ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಬಿಬಿಎಂಪಿ ಮುಖ್ಯ ಆಯುಕ್ತರಾದ ಶ್ರೀ. ತುಷಾರ್ ಗಿರಿನಾಥ್ ರವರಿಗೆ ದೂರು ನೀಡಿರುವ ಎನ್‌ಆರ್ ರಮೇಶ್, ಪಾಲಿಕೆಯ ವಾರ್ಡ್ ಗಳಲ್ಲಿ ತ್ಯಾಜ್ಯ ವಿಂಗಡಣೆ ಕಾರ್ಯವನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸಲು, ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಹಾಕುವವರಿಗೆ ದಂಡ ವಿಧಿಸಲು ಮಾರ್ಷಲ್ ನೇಮಕ ಮಾಡಲಾಗಿದೆ. ಟಿಪ್ಪರ್ ಆಟೋಗಳ ಹಾಜರಾತಿ ಬಗ್ಗೆ ನಿಗಾವಹಿಸಲೆಂದು 2017 ರಲ್ಲಿ ಪ್ರತೀ ವಾರ್ಡ್ ಗೆ ಒಬ್ಬರಂತೆ ನಿವೃತ್ತ ಸೈನಿಕರು ಅಥವಾ NCC ತರಬೇತಿ ಪೂರ್ಣಗೊಳಿಸಿರುವವರನ್ನು ಮಾರ್ಷಲ್ ಗಳ ಹೆಸರಿನಲ್ಲಿ ನೇಮಕ ಮಾಡಲಾಗಿದೆ. Department of Sainik welfare & Re - settlement ಇಲಾಖೆಯಿಂದ ಕಾರ್ಯ ರೂಪಕ್ಕೆ ತರುವ ಕೆಲಸ ಇದು. ವಾರ್ಡ್ ಮಟ್ಟದ ಮಾರ್ಷಲ್ ಗಳು, MSGP ಘಟಕ, ಪಾಲಿಕೆ ಕಛೇರಿಗಳು, Wireless Operators, ಪ್ರಹರಿ ದಳ, ಕೆ.ಆರ್. ಮಾರ್ಕೆಟ್, ರಸೆಲ್ ಮಾರ್ಕೆಟ್, ಮಡಿವಾಳ ಮಾರ್ಕೆಟ್, ಕಲಾಸಿಪಾಳ್ಯ ಮಾರ್ಕೆಟ್ ಹಾಗೂ ಭೂಭರ್ತಿ ಕೇಂದ್ರಗಳಲ್ಲಿ ಒಟ್ಟು 384 ಮಂದಿ ಮಾರ್ಷಲ್ ಗಳ ನಿಯೋಜನೆ ಮಾಡಲಾಗಿದೆ.
ಜಯನಗರ ಕಾಸ್ಮೋಪಾಲಿಟನ್ ಕ್ಲಬ್ ವಶಕ್ಕೆ ಪಡೆಯಿರಿ: ಎನ್ನಾರ್ ರಮೇಶ್ ಒತ್ತಾಯ
ಇಂದಿರಾ ಕ್ಯಾಂಟೀನ್ ಗಳು, 07 ತ್ಯಾಜ್ಯ ಸಂಸ್ಕರಣಾ ಘಟಕಗಳು, ಜಯನಗರ ವಾಣಿಜ್ಯ ಸಂಕೀರ್ಣ, ಬೆಳ್ಳಂದೂರು ಕೆರೆ, ವರ್ತೂರು ಕೆರೆಗಳಲ್ಲಿ ಒಟ್ಟು 366 ಮಂದಿ ಸೇರಿ 750 ಮಂದಿ ಮಾರ್ಷಲ್ ಗಳು ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಈ ಪೈಕಿ 18 ಮಂದಿ JCO (Ward Supervisors) ಗಳು ಮತ್ತು 09 ಮಂದಿ Additional Ward Supervisor ಇದ್ದಾರೆ. ಇವರೆಲ್ಲರಿಗೂ ಅತ್ಯುನ್ನತ ಅಧಿಕಾರಿಯಾಗಿ Chief Marshal Officer ಒಬ್ಬರು ಕಾರ್ಯ ನಿರ್ವಹಣೆ ಮಾಡುತ್ತಾರೆ. 684 ಮಂದಿ ಮಾರ್ಷಲ್ ಗಳಿಗೆ ತಲಾ 25,000 ರೂಪಾಯಿ ವೇತನ ನೀಡಲಾಗುತ್ತಿದೆ. ಎರಡು ಕೆರೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ 42 ಮಂದಿ ಮಾರ್ಷಲ್ ಗಳಿಗೆ ತಲಾ ₹. 28,875 ವೇತನ ನೀಡಲಾಗ್ತಿದೆ. ಭೂಭರ್ತಿ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ 24 ಮಂದಿ ಮಾರ್ಷಲ್ ಗಳಿಗೆ ತಲಾ ₹. 29,462 ವೇತನ, 18 ಮಂದಿ JCO ಗಳಿಗೆ ತಲಾ ₹. 45,475ಮತ್ತು 09 ಮಂದಿ Additional Ward Supervisor ಗಳಿಗೆ ತಲಾ ₹. 35,000/- ಗಳನ್ನು ಮಾಸಿಕ ವೇತನ ನೀಡಲಾಗ್ತಿದೆ. ಅಂದರೆ ಪ್ರತೀ ತಿಂಗಳು ಇವರ ವೇತನಕ್ಕಾಗಿ ಒಟ್ಟು ₹. 2,01,53,388 ವಾರ್ಷಿಕವಾಗಿ ಒಟ್ಟು ₹. 24,18,40,656 ಬೃಹತ್ ಮೊತ್ತ ವೆಚ್ಚ ಆಗುತ್ತಿದೆ.
2017 ರಿಂದ ಈವರೆಗೆ ಮಾರ್ಷಲ್ ಗಳ ಸೇವೆಗೆಂದು ಪಾಲಿಕೆ ಒಟ್ಟಾರೆ ₹. 157,19,64,264 ಖರ್ಚು ಮಾಡಲಾಗಿದೆ. ಮಾರ್ಷಲ್ ಗಳು ತಮಗೆ ವಹಿಸಿರುವ ಕಾರ್ಯಗಳಲ್ಲಿ ಶೇ. 25% ರಷ್ಟು ಸಫಲತೆಯನ್ನೂ ಸಹ ಪಾಲಿಕೆಯು ಕಂಡಿಲ್ಲ ಹೀಗಿರುವಾಗ ಇಷ್ಟೊಂದು ವೆಚ್ಚ ಮಾಡಿ ಮಾರ್ಷಲ್‌ಗಳು ಏಕೆ ಎಂದು ಪ್ರಶ್ನಿಸಿದ್ದಾರೆ.
ಎಷ್ಟು ಪ್ರಗತಿ ಸಾಧಿಸಿದೆ?
• 198 ವಾರ್ಡ್ ಗಳಲ್ಲಿನ ತ್ಯಾಜ್ಯ ವಿಂಗಡಣಾ ಕಾರ್ಯದ ಪ್ರಗತಿ ಶೇ. 35% ರಷ್ಟು ಮಾತ್ರವೇ ಸಾಧಿಸಲಾಗಿದೆ
• ಉದ್ಯಾನ ನಗರಿ ಬೆಂಗಳೂರಿನ ಬೀದಿ ಬೀದಿಗಳಲ್ಲಿ ಕಸದ ರಾಶಿಗಳು ಬಿದ್ದಿರುವ ದೃಶ್ಯಗಳು ಸರ್ವೇ ಸಾಮಾನ್ಯ
• ಸುಮಾರು 156 ಕ್ಕೂ ಹೆಚ್ಚು ವಾರ್ಡ್ ಗಳಲ್ಲಿ ನಿಗದಿತ ಟಿಪ್ಪರ್ ಆಟೋರಿಕ್ಷಾಗಳಿಗಿಂತಲೂ ಶೇ. 40% ರಷ್ಟು ಆಟೋಗಳ ಹಾಜರಾತಿಯೇ ಇಲ್ಲದಿದ್ದರೂ ಸಹ ಪೂರ್ಣ ಪ್ರಮಾಣದ ಹಣ ಪಾವತಿ ಮಾಡಲಾಗುತ್ತಿದೆ.
• ಬೆಳ್ಳಂದೂರು ಮತ್ತು ವರ್ತೂರು ಕೆರೆಗಳಲ್ಲಿ 42 ಮಂದಿ ಮಾರ್ಷಲ್ ಗಳು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂಬ ಸುಳ್ಳು ಮಾಹಿತಿ. ಮಾರ್ಷಲ್ ಗಳ ನಿಯೋಜನೆ ಇಂದ ಪಾಲಿಕೆ ಪ್ರತೀ ವರ್ಷ 25 ಕೋಟಿ ರೂಪಾಯಿಗಳಷ್ಟು ದುಂದು ವೆಚ್ಛ ಅಂತ ದೂರು
Department of Sainik welfare & Re - settlement" ಸಂಸ್ಥೆ ಅಧಿಕಾರಿಗಳು ಮಾರ್ಷಲ್ ಗಳಿಗೆ ಕೇವಲ 17 ಸಾವಿರ ರೂಪಾಯಿಗಳಷ್ಟು ಮಾಸಿಕ ವೇತನ ಅಷ್ಟೇ ನೀಡ್ತಾರೆ.
Bengaluru: ಸರ್ಕಾರಿ ಆಸ್ಪತ್ರೆಗಳಲ್ಲಿ ಅನಾಥ ಶವ ಹಾಗೂ ಅಂಗಾಂಗ ಮಾರಾಟ ಮಾಫಿಯಾ..!
ಇನ್ನೂ ಪಾಲಿಕೆ ವ್ಯಾಪ್ತಿಯಲ್ಲಿ 750 ಮಂದಿ ಮಾರ್ಷಲ್ ಗಳು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ನಂಬಲು ಅಸಾಧ್ಯ. ಈ ಬಗ್ಗೆ ಖುದ್ದಾಗಿ ಕ್ರಮ ವಹಿಸಿ, ಎಲ್ಲ 750 ಮಾರ್ಷಲ್ ಗಳನ್ನು ಬಿಬಿಎಂಪಿ ಕೇಂದ್ರ ಕಛೇರಿಯ ಆವರಣದಲ್ಲಿ ಸೇರಿಸಿ. ಈ ಬಗ್ಗೆ ಸತ್ಯಾಸತ್ಯತೆಗಳ ಪರಿಶೀಲನೆ ಮಾಡಿದ್ದೇ ಆದ್ರಲ್ಲಿ ಬೃಹತ್ ಮಟ್ಟದ ಗೋಲ್ ಮಾಲ್ ಕಾರ್ಯ ಬೆಳಕಿಗೆ ಬರಲಿದೆ ಎಂದು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.