Asianet Suvarna News Asianet Suvarna News

ಮತಾಂತರ: ಕ್ರೈಸ್ತ ಮಿಷನರಿಗಳ ಗಣತಿಗೆ ಸೂಚನೆ

*  ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ಆದೇಶ
*  ಅನಧಿಕೃತ, ಅಧಿಕೃತ ಮಿಷನರಿಗಳ ಮಾಹಿತಿಗೆ ತಾಕೀತು
*  ಪ್ರಾಥಮಿಕ ಮಾಹಿತಿ ಪ್ರಕಾರ ಕರ್ನಾಟಕದಲ್ಲಿ ಶೇ.40ರಷ್ಟು ಅನಧಿಕೃತ ಚರ್ಚ್‌ಗಳಿವೆ

Notice to the Census of Christian Missionaries in Karnataka grg
Author
Bengaluru, First Published Oct 14, 2021, 8:30 AM IST
  • Facebook
  • Twitter
  • Whatsapp

ಬೆಂಗಳೂರು(ಅ.14):  ರಾಜ್ಯದಲ್ಲಿ(Karnataka) ಮತಾಂತರ ಪ್ರಕರಣಗಳು ಹೆಚ್ಚಾಗುತ್ತಿರುವ ಕುರಿತು ತೀವ್ರ ಚರ್ಚೆಗಳು ನಡೆಯುತ್ತಿರುವ ಕಾರಣ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಯು ರಾಜ್ಯದಲ್ಲಿನ ಅಧಿಕೃತ ಮತ್ತು ಅನಧಿಕೃತ ಕ್ರಿಶ್ಚಿಯನ್‌ ಮಿಷನರಿಗಳು ಎಷ್ಟಿವೆ ಎಂಬುದರ ಬಗ್ಗೆ ಮಾಹಿತಿ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದೆ.

ಬುಧವಾರ ವಿಕಾಸಸೌಧದಲ್ಲಿ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಯು ಸಭೆ ನಡೆಸಿತು. ಈ ಸಭೆಯಲ್ಲಿ ಶಾಸಕರಾದ ಗೂಳಿಹಟ್ಟಿಶೇಖರ್‌(Goolihattishekhar), ಪುಟ್ಟರಂಗ ಶೆಟ್ಟಿ, ಬಿ.ಎಂ.ಫಾರೂಕ್‌, ವಿರೂಪಾಕ್ಷಪ್ಪ ಬಳ್ಳಾರಿ, ಅಶೋಕ್‌ ನಾಯ್ಕ್‌ ಸೇರಿದಂತೆ ಇತರರು ಭಾಗವಹಿಸಿದ್ದರು. ಮಿಷನರಿಗಳು(Missionaries) ಸರ್ಕಾರದಿಂದ ಪಡೆಯುತ್ತಿರುವ ಸೌಲಭ್ಯಗಳು ಮತ್ತು ಕ್ರಿಶ್ಚಿಯನ್‌(Christian) ಮಿಷನರಿಗಳ ನೋಂದಣಿಗೆ ಸಂಬಂಧಪಟ್ಟಂತೆ ಚರ್ಚೆ ನಡೆಸಲಾಯಿತು. ಮತಾಂತರಗೊಳ್ಳುವ ಸಮುದಾಯದವರಿಗೆ ಕಲ್ಪಿಸಲಾಗುತ್ತಿರುವ ಸರ್ಕಾರಿ ಸೌಲಭ್ಯಗಳನ್ನು ಹಿಂಪಡೆದುಕೊಳ್ಳಬೇಕು ಎಂಬ ಶಿಫಾರಸನ್ನು ಸಮಿತಿ ಸದಸ್ಯರು ಮಾಡಿದ್ದಾರೆ.

ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಶಾಸಕ ಗೂಳಿಹಟ್ಟಿಶೇಖರ್‌, ಪ್ರಾಥಮಿಕ ಮಾಹಿತಿ ಪ್ರಕಾರ ಶೇ.40ರಷ್ಟು ಅನಧಿಕೃತ ಚರ್ಚ್‌ಗಳಿವೆ(Church). ಈ ಬಗ್ಗೆ ಇನ್ನೂ ಅಂಕಿ-ಅಂಶಗಳನ್ನು ಕಲೆ ಹಾಕಲಾಗುತ್ತಿದೆ. ಬಲವಂತದ ಮತಾಂತರ(Conversion) ಇದೆ ಎನ್ನುವ ವಿಚಾರ ಸಂಬಂಧ ಸಭೆ ನಡೆಸಲಾಗಿದೆ. ರಾಜ್ಯದಲ್ಲಿ ಮತಾಂತರ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿರುವ ಅಧಿಕೃತ ಮತ್ತು ಅನಧಿಕೃತ ಮಿಷನರಿಗಳ ಎಷ್ಟಿವೆ ಸೇರಿದಂತೆ ಇತರೆ ವಿಚಾರಗಳ ಕುರಿತು ಚರ್ಚೆ ನಡೆಸಲಾಗಿದೆ ಎಂದು ಹೇಳಿದರು.

ನನ್ನ ತಾಯಿ ಶಾಕ್‌ನಲ್ಲಿದ್ದಾರೆ : 15 ದಿನ ಟೈಂ ಬೇಕು

ಸಮಿತಿಯಲ್ಲಿ ಕಾಂಗ್ರೆಸ್‌(Congress), ಬಿಜೆಪಿಯ(BJP) ಶಾಸಕರು ಇದ್ದು, ಮುಸ್ಲಿಂ(Muslim), ಕ್ರಿಶ್ಚಿಯನ್‌ ಸಮುದಾಯ ಕುರಿತು ಪ್ರತಿವಾರ ಚರ್ಚೆ ನಡೆಸಲಾಗುತ್ತದೆ. ಅನುದಾನ, ಸುಧಾರಣೆ ಮತ್ತು ಅಭಿವೃದ್ಧಿ ವಿಚಾರಗಳ ಬಗ್ಗೆ ಸಮಾಲೋಚನೆ ನಡೆಸಲಾಗುತ್ತದೆ. ಕಳೆದು ಒಂದು ತಿಂಗಳಲ್ಲಿ ಅಲ್ಪಸಂಖ್ಯಾತರಿಗೆ ಅನುದಾನ ಸೇರಿದಂತೆ ಇತರೆ ವಿಚಾರಗಳ ಕುರಿತು ಜಿಲ್ಲಾವಾರು ಮತ್ತು ತಾಲೂಕುವಾರು ಮಾಹಿತಿ ಕೇಳಲಾಗಿದೆ. ಅಧಿಕೃತ, ಅನಧಿಕೃತ ಚರ್ಚ್‌ಗಳ ಕುರಿತು ಮಾಹಿತಿ ಕೇಳಲಾಗಿದೆ ಎಂದರು.

ಅಧಿಕಾರಿಗಳು ಚರ್ಚ್‌ಗಳಿಗೆ ಭೇಟಿ ನೀಡಿದ ವೇಳೆ ಗಲಾಟೆ ಮಾಡಿ ಮಾಹಿತಿ ನೀಡಲು ನಿರಾಕರಿಸಲಾಗಿದೆ. ಈ ಬಗ್ಗೆ ಅಧಿಕಾರಿಗಳು ಸಮಿತಿಯ ಗಮನಕ್ಕೆ ತಂದಿದ್ದಾರೆ. ಹೊಸದುರ್ಗದಲ್ಲಿ 9 ಚರ್ಚ್‌ಗಳಿದ್ದು, ಐದು ಚರ್ಚ್‌ಗಳು ಮಾತ್ರ ಮಾಹಿತಿ ನೀಡಿವೆ. ಇನ್ನು ನಾಲ್ಕು ಮಾಹಿತಿ ನೀಡಲು ನಿರಾಕರಿಸಿವೆ. ಬಲವಂತದ ಮತಾಂತರಾಗುತ್ತಿರುವ ಬಗ್ಗೆ ಸದನದಲ್ಲಿ ಪ್ರಸ್ತಾಪ ಮಾಡಿದ್ದರಿಂದ ನನ್ನ ವಿರುದ್ಧ ರಾಜ್ಯದ ಹಲವೆಡೆ ಪ್ರತಿಭಟನೆಗಳು ನಡೆದವು. ಸುಳ್ಳು ಆಪಾದನೆ ಮಾಡಲಾಗಿದ್ದು, ಬಲವಂತದ ಮತಾಂತರವಾಗುತ್ತಿಲ್ಲ ಎಂದಿದ್ದಾರೆ. ಈ ಬಗ್ಗೆ ಅಭಿಪ್ರಾಯ ಸಂಗ್ರಹಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಶಾಸಕ ಅಶೋಕ್‌ ನಾಯ್ಕ್‌ ಮಾತನಾಡಿ, ಧರ್ಮಗಳ ರಕ್ಷಣೆ ಆಯಾ ಸಮುದಾಯಗಳ ಜವಾಬ್ದಾರಿ. ಆದರೆ, ಬಲವಂತ ಮತಾಂತರ ಮಾಡುವುದು ಸರಿಯಲ್ಲ. ಇದು ಅವ್ಯಾಹತವಾಗಿ ನಡೆಯುತ್ತಿದೆ. ರಾಜ್ಯದಲ್ಲಿ 36 ಕಡೆ ಪ್ರಕರಣಗಳು ದಾಖಲಾಗಿವೆ. ಆದರೆ, ಯಾವುದರಲ್ಲಿಯೂ ಶಿಕ್ಷೆಯಾಗಿಲ್ಲ. ಯಾರೆಲ್ಲಾ ಮತಾಂತರ ಆಗುತ್ತಾರೋ ಆಗಬಹುದು. ಆದರೆ, ಎಸ್‌ಸಿ/ಎಸ್‌ಟಿ, ಹಿಂದುಳಿದ ಸಮುದಾಯದಲ್ಲಿ ತೆಗೆದುಕೊಂಡಿರುವ ಸರ್ಕಾರದ ಸೌಲಭ್ಯಗಳನ್ನು ಹಿಂಪಡೆಯಬೇಕು. ಯಾವ ಧರ್ಮಕ್ಕೆ(Religion) ಮತಾಂತರವಾಗುತ್ತಾರೋ, ಆ ಧರ್ಮದ ಸೌಲಭ್ಯಗಳನ್ನು ಮಾತ್ರ ಪಡೆದುಕೊಳ್ಳಬೇಕು. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಹೇಳಿದರು.
 

Follow Us:
Download App:
  • android
  • ios