ಬೆಂಗಳೂರು:  ಶಾಂತಿ ಸೌಹಾರ್ದತೆಗೆ ಧಕ್ಕೆ ತರುತ್ತಿದ್ದ ಆರೋಪದ ಮೇಲೆ ಸಿಆರ್‌ಪಿಸಿ 107 ರ ಅಡಿಯಲ್ಲಿ ನಟ ದುನಿಯ ವಿಜಯ್ ಕುಟುಂಬದ ವಿರುದ್ಧ ದೂರು ದಾಖಲಾಗಿರುವ ಹಿನ್ನೆಲೆಯಲ್ಲಿ ಏಳು ಮಂದಿಗೆ ದಕ್ಷಿಣ ವಿಭಾಗದ ಡಿಸಿಪಿ ಕೆ.ಅಣ್ಣಾಮಲೈ ಅವರ ಎದುರು ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ. 

ನಟ ದುನಿಯಾ ವಿಜಯ್,  ಅವರ ಮೊದಲ ಪತ್ನಿ ನಾಗರತ್ನ, ಎರಡನೇ ಪತ್ನಿ ಕೀರ್ತಿ ಗೌಡ, ನಾಗರತ್ನ ಸಹೋದರ, ವಿಜಯ್ ಪೋಷಕರು ಹಾಗೂ ಚಾಲಕಗೆ ನೋಟಿಸ್ ನೀಡಿದ್ದಾರೆ.