Asianet Suvarna News Asianet Suvarna News

ರಾಜ್ಯದಲ್ಲಿ ಲಾಕ್ಡೌನ್‌ ಇಲ್ಲ, ಜನತಾ ಕರ್ಫ್ಯೂ ವಿಸ್ತರಣೆ ಸಾಧ್ಯತೆ: ಸುಧಾಕರ್‌!

ರಾಜ್ಯದಲ್ಲಿ ಲಾಕ್ಡೌನ್‌ ಇಲ್ಲ: ಸುಧಾಕರ್‌| ಜನತಾ ಕರ್ಫ್ಯೂ ವಿಸ್ತರಣೆ ಸಾಧ್ಯತೆ

No proposal to impose strict lockdown for now Karnataka Health Minister pod
Author
Bangalore, First Published May 2, 2021, 8:17 AM IST

ಕಲಬುರಗಿ(ಮೇ.02): ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಸಂಪೂರ್ಣ ಲಾಕ್‌ಡೌನ್‌ ಮಾಡುವುದಿಲ್ಲ. ಸೋಂಕು ನಿಯಂತ್ರಣಕ್ಕೆ ಬರದಿದ್ದರೆ ಪರಿಸ್ಥಿತಿ ಅವಲೋಕಿಸಿ ಈಗ ವಿಧಿಸಲಾಗಿರುವ ಜನತಾ ಕಫä್ರ್ಯವನ್ನೇ ವಿಸ್ತರಿಸುವ ಸಂಭವ ಇದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಜನತಾ ಕಫä್ರ್ಯ ಹೇರಿ ನಾಲ್ಕು ದಿನಗಳಾಗಿವೆ. ಇಷ್ಟರಲ್ಲೇ ಸೋಂಕಿನ ಸರಪಣಿ ತುಂಡಾಗುತ್ತದೆ, ಕೊರೋನಾ ಹೆಮ್ಮಾರಿ ನಿಯಂತ್ರಣಕ್ಕೆ ಬರುತ್ತದೆ ಎಂದು ಹೇಳಲು ಆಗುವುದಿಲ್ಲ. ಮಹಾರಾಷ್ಟ್ರದಲ್ಲಿ 44 ದಿನಗಳಿಂದ ಲಾಕ್‌ಡೌನ್‌ ಜಾರಿಯಲ್ಲಿದ್ದು, ಈಗಷ್ಟೇ ಮುಂಬೈನಲ್ಲಿ ಸೋಂಕು ನಿಯಂತ್ರಣಕ್ಕೆ ಬರುತ್ತಿದೆ. ಹಾಗಾಗಿ ಜನತಾ ಕಫä್ರ್ಯ ಹೇರಲಾಗಿದೆ. ಆಗಲೂ ನಿಯಂತ್ರಣಕ್ಕೆ ಬರದಿದ್ದರೆ ಕಠಿಣ ನಿಯಮ ಅನಿವಾರ್ಯವಾಗಲಿದೆ ಎಂದರು.

ಸೋಂಕಿನ ನಿಯಂತ್ರಣಕ್ಕೆ ಸರ್ಕಾರದ ಮಾರ್ಗಸೂಚಿಗಳಿಗೆ ಜನರೂ ಸಹಕರಿಸಬೇಕಾಗುತ್ತದೆ. ಜನತಾ ಕಫä್ರ್ಯ ಹೇರಿದ್ದರೂ ಸಹ ಜನ ವಿನಾಕಾರಣ ರಸ್ತೆಯಲ್ಲಿ ಬರುವುದು, ಗುಂಪು ಗುಂಪಾಗಿ ಸೇರುವುದು ಕಂಡುಬರುತ್ತಿದೆ. ಮದುವೆ, ಮುಂಜಿಗೆ, ಅಂತ್ಯ ಸಂಸ್ಕಾರಕ್ಕೆ ಜನರ ಸಂಖ್ಯಾಬಲ ಮಿತಿ ಹೇರಿದರೂ ಅಲ್ಲಿಯೂ ವಿಪರೀತ ಜನ ಪಾಲ್ಗೊಳ್ಳುತ್ತಿರುವ ದೂರುಗಳು ಬರುತ್ತಿವೆ. ಇವುಗಳಿಗೆಲ್ಲ ಇನ್ನಾದರೂ ಜನ ನಿಯಂತ್ರಣ ಹಾಕಿಕೊಳ್ಳಬೇಕಿದೆ. ಜನರು ಸ್ವಯಂ ನಿಯಂತ್ರಣಕ್ಕೊಳಗಾಗಿ ಮನೆಯಲ್ಲಿರುವುದು ಒಳ್ಳೆಯದು ಎಂದರು.

"

2 ಕೋಟಿ ಲಸಿಕೆ ಪೂರೈಕೆಗೆ ಆದೇಶ:

ರಾಜ್ಯಾದ್ಯಂತ 18 ವರ್ಷ ಮೇಲ್ಪಟ್ಟವರಿಗೆ ಸರ್ಕಾರಿ ಆಸ್ಪತ್ರೆಗಳ ಮೂಲಕ ಕೋವಿಡ್‌ ಲಸಿಕೆ ಉಚಿತವಾಗಿ ನೀಡಲು 2 ಕೋಟಿ ಡೋಸ್‌ ಪೂರೈಸುವಂತೆ ಸರಬರಾಜು ಕಂಪನಿಗಳಿಗೆ ಆದೇಶಿಸಲಾಗಿದೆ. ಲಸಿಕೆ ರಾಜ್ಯಕ್ಕೆ ಪೂರೈಕೆಯಾದ ಕೂಡಲೆ ರಾಜ್ಯಾದ್ಯಂತ ಇರುವ 6000 ಆರೋಗ್ಯ ಕೇಂದ್ರಗಳಿಗೆ ಸಮಾನವಾಗಿ ಹಂಚಿಕೆ ಮಾಡಿ 18 ವಷÜರ್‍ ಮೇಲ್ಪಟ್ಟಪ್ರತಿಯೊಬ್ಬರಿಗೂ ಲಸಿಕೆ ನೀಡಲಾಗುವುದು ಎಂದು ಭರವಸೆ ನೀಡಿದರು.

ದೇಶಾದ್ಯಂತ ಶನಿವಾರ 18 ವಷÜರ್‍ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಅದರಂತೆ ರಾಜ್ಯದಲ್ಲಿಯೂ ದೊಡ್ಡ ಪ್ರಮಾಣದಲ್ಲಿ ಲಸಿಕೆ ನೀಡುವ ಕಾರ್ಯಕ್ಕೆ ಚಾಲನೆ ನೀಡಲು ಯೋಚಿಸಿಲಾಗಿತ್ತು. ಆದರೆ, ಇದಕ್ಕಾಗಿ ಶುಕ್ರವಾರ ರಾಜ್ಯಕ್ಕೆ ಕೇವಲ 3 ಲಕ್ಷ ಡೋಸ್‌ ಮಾತ್ರ ಪೂರೈಕೆಯಾಗಿದ್ದರಿಂದ ಅದು ಕಷ್ಟಸಾಧ್ಯವಾಗಿದೆ. ಹೀಗಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬೆಂಗಳೂರಿನ ಬೌರಿಂಗ್‌ ಆಸ್ಪತ್ರೆಯಲ್ಲಿ ಸಾಂಕೇತಿಕವಾಗಿ ಮಾತ್ರ ಚಾಲನೆ ನೀಡಿದ್ದಾರೆ ಎಂದರು.

ಇದೇ ವೇಳೆ ಕೋವಿಡ್‌ ಸೋಂಕಿತರಿಗೆ ಆಕ್ಸಿಜನ್‌ ಮತ್ತು ರೆಮೆಡಿಸಿವಿರ್‌ ಬಳಕೆಯಲ್ಲಿ ನೀಡಲಾಗಿರುವ ಕೋವಿಡ್‌-19 ಮಾರ್ಗಸೂಚಿಯಂತೆ ಕಾರ್ಯನಿರ್ವಹಿಸಬೇಕು. ಒಮ್ಮೆ ಜವಾಬ್ದಾರಿಯಿಂದ ತಪ್ಪಿಸಿಕೊಂಡರೆ ಕ್ರಮಕೈಗೊಳ್ಳಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Follow Us:
Download App:
  • android
  • ios