Asianet Suvarna News Asianet Suvarna News

ಹೂಗುಚ್ಛ ಬಳಿಕ ಗಾರ್ಡ್‌ ಆಫ್‌ ಹಾನರ್‌ ನಿಷೇಧಿಸಿದ ಸಿಎಂ ಬೊಮ್ಮಾಯಿ!

* ಸರ್ಕಾರಿ ಕಾರ್ಯಕ್ರಮಗಳಲ್ಲಿ ಹಾರ, ತುರಾಯಿ, ಹೂಗುಚ್ಛಗಳಿಗೆ ನಿರ್ಬಂಧ

* ಹೂಗುಚ್ಛ ಬಳಿಕ ಗಾರ್ಡ್‌ ಆಫ್‌ ಹಾನರ್‌ ನಿಷೇಧಿಸಿದ ಸಿಎಂ ಬೊಮ್ಮಾಯಿ

* ಸಾರ್ವಜನಿಕರಿಗೆ ತೊಂದರೆಯಾಗುತ್ತೆ ಎಂದು ನಿರ್ಧಾರ

No police guard of honour for CMs in public places Says Basavaraj Bommai pod
Author
Bangalore, First Published Aug 13, 2021, 7:19 AM IST

ಉಡುಪಿ(ಆ.13): ಸರ್ಕಾರಿ ಕಾರ್ಯಕ್ರಮಗಳಲ್ಲಿ ಹಾರ, ತುರಾಯಿ, ಹೂಗುಚ್ಛಗಳಿಗೆ ನಿರ್ಬಂಧ ವಿಧಿಸಿದ ಬೆನ್ನಲ್ಲೇ ಇದೀಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಾರ್ವಜನಿಕ ಸ್ಥಳಗಳಲ್ಲಿ ‘ಗಾರ್ಡ್‌ ಆಫ್‌ ಆನರ್‌’(ಗೌರವ ವಂದನೆ) ಸಲ್ಲಿಕೆ ನಿಲ್ಲಿಸುವಂತೆ ಪೊಲೀಸ್‌ ಇಲಾಖೆಗೆ ಸೂಚನೆ ನೀಡಿದ್ದಾರೆ. ಈ ಮೂಲಕ ‘ಗಾರ್ಡ್‌ ಆಫ್‌ ಆನರ್‌’ನಿಂದ ಸಾರ್ವಜನಿಕರಿಗೆ ಆಗುತ್ತಿದ್ದ ಕಿರಿಕಿರಿ ತಪ್ಪಿದಂತಾಗಿದೆ.

ದಕ್ಷಿಣ ಕನ್ನಡ ಮತ್ತು ಉಡುಪಿ ಪ್ರವಾಸದಲ್ಲಿರುವ ಅವರು ಗುರುವಾರ ಈ ಮಹತ್ವದ ತೀರ್ಮಾನ ಕೈಗೊಂಡಿದ್ದಾರೆ. ಆದರೆ ಮಂಗಳೂರಿನಲ್ಲಿ ಮುಖ್ಯಮಂತ್ರಿಗೆ ‘ಗಾರ್ಡ್‌ ಆಫ್‌ ಆನರ್‌’ ನೀಡಲು ಮೊದಲೇ ಸರ್ವ ಸಿದ್ಧತೆ ಮಾಡಿಕೊಂಡಿದ್ದರಿಂದ ಅದನ್ನು ಸ್ವೀಕಾರ ಮಾಡಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಮಾನ ನಿಲ್ದಾಣ, ರೈಲು- ಬಸ್‌ ನಿಲ್ದಾಣಗಳಲ್ಲಿ ‘ಗಾರ್ಡ್‌ ಆಫ್‌ ಆನರ್‌’ ನೀಡಿದರೆ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಬೆಂಗಳೂರಿಗೆ ವಾಪಸಾದ ಕೂಡಲೇ ಈ ಕುರಿತು ಅಧಿಸೂಚನೆ ಹೊರಡಿಸಲಾಗುವುದು. ಪೊಲೀಸ್‌ ಸಮಾರಂಭದಲ್ಲಿ ಗೌರವ ವಂದನೆ ಕೊಟ್ಟರೆ ಸಾಕು ಎಂದು ಹೇಳಿದರು.

ಕಟೌಟ್‌ ಬೇಡ:

ನಾನು ಮುಖ್ಯಮಂತ್ರಿಯಾದರೂ ಈ ನಾಡಿನ ಸೇವಕ. ಈ ಭಾವನೆ ಕಡಿಮೆಯಾಗಬಾರದು. ಹೀಗಾಗಿ ಯಾರೂ ನನ್ನ ಕಟೌಟ್‌ ಹಾಕಬಾರದು, ಶುಭ ಕೋರುವ ಹೋರ್ಡಿಂಗ್‌ ಹಾಕಬಾರದು ಎಂದು ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳಿಗೆ ಮನವಿ ಮಾಡಿದರು.

Follow Us:
Download App:
  • android
  • ios