Asianet Suvarna News Asianet Suvarna News

ರಾಜ್ಯದಲ್ಲಿ ಪೂರ್ಣ ಸಾಲಮನ್ನಾ ಇಲ್ಲ : ಸಿಎಂ

ರಾಜ್ಯದಲ್ಲಿ ಸಂಪೂರ್ಣ ಸಾಲ ಮನ್ನಾ ಇಲ್ಲ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆಡ. ಕಾರಣ ಇಲ್ಲಿದೆ. 

No Complete Loan Waiving in Karnataka Says BS Yediyurappa
Author
Bengaluru, First Published Oct 16, 2019, 7:12 AM IST

ಬೆಳಗಾವಿ [ಅ.16] :  ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ರೈತರ ಸಂಪೂರ್ಣ ಸಾಲ ಮನ್ನಾ ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ಭಾರೀ ಪ್ರಾಕೃತಿಕ ವಿಕೋಪದಿಂದಾಗಿ ರಾಜ್ಯದಲ್ಲಿ ಬಹುದೊಡ್ಡ ಅನಾಹುತ ಆಗಿದೆ. ಹೀಗಾಗಿ ರಾಜ್ಯದಲ್ಲಿ ಸಂಪೂರ್ಣ ಸಾಲ ಮನ್ನಾ ಮಾಡುವ ಸ್ಥಿತಿ ಇಲ್ಲ ಎಂದು ತಿಳಿಸಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದ ಈಗಿನ ಹಣಕಾಸು ಪರಿಸ್ಥಿತಿ ನೋಡಿಕೊಂಡು ಉಳಿದೆಲ್ಲ ಕಾರ್ಯಕ್ರಮಗಳನ್ನು ರದ್ದು ಮಾಡಿ ನೆರೆಹಾನಿಗೆ ಪರಿಹಾರ ಕೊಡುತ್ತಿದ್ದೇವೆ. ಹೀಗಾಗಿ ಸಂಪೂರ್ಣ ಸಾಲ ಮನ್ನಾ ಮಾಡುವ ಪ್ರಶ್ನೆಯೇ ಬರಲ್ಲ ಎಂದರು.

ಈಗಾಗಲೇ ಕೊಟ್ಟಭರವಸೆಯಂತೆ ಬೆಳೆ ನಾಶ ಹಾಗೂ ಮನೆ ಕಟ್ಟಿಕೊಳ್ಳಲು ಪರಿಹಾರ ನೀಡುತ್ತಿದ್ದೇವೆ. ಸಂತ್ರಸ್ತರಿಗೆ ನಾವು ದೊಡ್ಡಮೊತ್ತದ ಪರಿಹಾರ ನೀಡುತ್ತಿದ್ದೇವೆ. ಬೆಳೆನಷ್ಟಕ್ಕೆ ಹೆಕ್ಟೇರ್‌ಗೆ .10 ಸಾವಿರ ಹಾಗೂ ಪ್ರತಿ ಮನೆಗೆ .5 ಲಕ್ಷ ಪರಿಹಾರ ನೀಡುತ್ತಿದ್ದೇವೆ. ಇದರ ಜತೆಗೆ, ಎಲ್ಲ ನಿರಾಶ್ರಿತರಿಗೆ .10 ಸಾವಿರ, ಹಾನಿಯಾದ ಗೂಡಂಗಡಿಗಳಿಗೆ .25 ಸಾವಿರ ಪರಿಹಾರ ಕೊಡುತ್ತಿದ್ದೇವೆ. ನೇಕಾರರ ಸಾಲ ಮನ್ನಾದಂಥ ಕ್ರಮ ಕೈಗೊಳ್ಳುತ್ತಿದ್ದೇವೆ. ದೇಶದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಪರಿಹಾರ ನೀಡುತ್ತಿರುವ ಉದಾಹರಣೆ ಇನ್ನೊಂದು ಇರಲಿಕ್ಕಿಲ್ಲ ಎಂದು ಇದೇ ವೇಳೆ ಮುಖ್ಯಮಂತ್ರಿ ಯಡಿಯೂರಪ್ಪ ಅಭಿಪ್ರಾಯಪಟ್ಟರು.

Follow Us:
Download App:
  • android
  • ios