ರಾಜ್ಯ ವಿಧಾನಸಭೆ ಚುನಾವಣೆಗೆ ಡೇಟ್ ಫಿಕ್ಸ್: ಇಂದಿನ ಸಿಎಂ ಕಾರ್ಯಕ್ರಮ ರದ್ದಾಗುತ್ತಾ?
ಸಿಎಂ ಬೊಮ್ಮಯಿ ಅವರು ಇಂದು(ಬುಧವಾರ) ಕೊಪ್ಪಳ ಹಾಗೂ ಹಾವೇರಿ ಜಿಲ್ಲೆಯ ಶಿಗ್ಗಾಂವ್‌ಗೆ ತೆರಳಬೇಕಿತ್ತು. ಇಂದು ಚುನಾವಣಾ ಘೋಷಣೆ ಬಳಿಕ ನೀತಿ ಸಂಹಿತೆ ಜಾರಿಯಾಗುವುದರಿಂದ ಸಿಎಂ ಜಿಲ್ಲಾ ಪ್ರವಾಸ ರದ್ದು ಪಡಿಸಲಾಗಿದೆ.
ಬೆಂಗಳೂರು(ಮಾ.29): ರಾಜ್ಯ ವಿಧಾನಸಭೆ ಚುನಾವಣೆ ಕುರಿತು ಇಂದು ಚುನಾವಣೆ ಆಯೋಗದ ಪತ್ರಿಕಾಗೋಷ್ಠಿ ಇರುವ ಹಿನ್ನಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಇಂದಿನ ಎಲ್ಲಾ ಕಾರ್ಯಕ್ರಮಗಳು ರದ್ದಾಗಿವೆ. ಸಿಎಂ ಬೊಮ್ಮಯಿ ಅವರು ಇಂದು(ಬುಧವಾರ) ಕೊಪ್ಪಳ ಹಾಗೂ ಹಾವೇರಿ ಜಿಲ್ಲೆಯ ಶಿಗ್ಗಾಂವ್‌ಗೆ ತೆರಳಬೇಕಿತ್ತು. ಇಂದು ಚುನಾವಣಾ ಘೋಷಣೆ ಬಳಿಕ ನೀತಿ ಸಂಹಿತೆ ಜಾರಿಯಾಗುವುದರಿಂದ ಸಿಎಂ ಜಿಲ್ಲಾ ಪ್ರವಾಸ ರದ್ದು ಪಡಿಸಲಾಗಿದೆ.
ಕರ್ನಾಟಕ ಚುನಾವಣಾ ಘೋಷಣೆ ಹಿನ್ನೆಲೆ: ಸರ್ಕಾರಿ ಆಡಳಿತ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ
ನೀತಿ ಸಂಹಿತೆ ಜಾರಿಯಾದ್ರೂ ಸಿಎಂಗೆ ಕೆಲವೊಂದು ಸವಲತ್ತುಗಲು ಮುಂದುವರೆಯುತ್ತವೆ. ಆದರೆ ಆದೇಶ ಮಾಡುವ, ಸಹಿ ಹಾಕುವ, ಸರ್ಕಾರಿ ಕಾರ್ಯಕ್ರಮಗಳನ್ನ ಕರೆಯುವ, ಭಾಗವಹಿಸುವ ಅಧಿಕಾರ ಇರಲ್ಲ. ಸಿಎಂ ಸರ್ಕಾರಿ ಕಾರನ್ನು ತಮ್ಮ ಕಚೇರಿ, ವಿಧಾನಸೌಧ ಬಳಸಬಹುದು. ಜಿಲ್ಲಾ ಪ್ರವಾಸ, ಪ್ರಚಾರಗಳಿಗೆ ಸರ್ಕಾರಿ ವಾಹನ ಬಳಕೆ ಮಾಡುವಂತಿಲ್ಲ. ಉಳಿದಂತೆ ಸಿಎಂಗೆ ಇರುವ ಭದ್ರತೆ ಮತ್ತು ಸಿಎಂಗೆ ನಿಯೋಜಿಸಿರುವ ಸಿಬ್ಬಂದಿಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
ಇಂದು ಚುನಾವಣಾ ದಿನಾಂಕ ಘೋಷಣೆಯಾಗುವುದರಿಂದ ಇಂದಿನಿಂದಲೇ(ಮಾ.29) ಚುನಾವಣೆ ನೀತಿ ಸಂಹಿತೆ ಜಾರಿ ಜಾರಿಯಾಗಲಿದೆ. ಹೀಗಾಗಿ ಸಚಿವರುಗಳ ಸುದ್ದಿಗೊಷ್ಠಿಯ ಸಮಯ ಬದಲಾವಣೆಯಾಗಿದೆ.
ಸಚಿವ ಆರ್. ಅಶೋಕ್ ಮತ್ತು ಸೋಮಣ್ಣ ಸುದ್ದಿಗೊಷ್ಠಿಯ ಸಮಯ ಬದಲಾವಣೆಯಾಗಿದೆ. ವಸತಿ ಸಚಿವ ವಿ. ಸೋಮಣ್ಣ 10.30ಕ್ಕೆ ಸುದ್ದಿಗೋಷ್ಠಿ ನಡೆಸಲಿದ್ದು, ಕಂದಾಯ ಸಚಿವ ಆರ್. ಅಶೋಕ್ 10.45ಕ್ಕೆ ಸುದ್ದಿಗೊಷ್ಠಿ ನಡೆಸಲಿದ್ದಾರೆ. ವಿಧಾನಸೌಧದಲ್ಲಿ ತಮ್ಮ ಇಲಾಖೆಗೆ ಸಂಬಂಧಿಸಿದಂತೆ ಉಭಯ ಸಚಿವರುಗಳು ಸುದ್ದಿಗೊಷ್ಠಿ ನಡೆಸಲಿದ್ದಾರೆ.
ತರಾತುರಿಯಲ್ಲಿ ಕೊಪ್ಪಳಕ್ಕೆ ಹೊರಟ ಸಚಿವ ಕಾರಜೋಳ
ವಿಜಯಪುರ: ಇಂದು ಚುನಾವಣಾ ಆಯೋಗದದಿಂದ ಸುದ್ದಿಗೋಷ್ಠಿ ನಿಗಧಿಯಾದ ಹಿನ್ನೆಲೆಯಲ್ಲಿ ಸಚಿವ ಗೋವಿಂದ ಕಾರಜೋಳ ಅವರು ತರಾತುರಿಯಲ್ಲಿ ಕೊಪ್ಪಳಕ್ಕೆ ಹೊರಟಿದ್ದಾರೆ.
ಚುನಾವಣಾ ಅಧಿಸೂಚನೆ ಹೊರಡಿಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಸಚಿವ ಕಾರಜೋಳ ವಿಜಯಪುರ ನಗರದಲ್ಲಿ ಕೆಬಿಜೆಎನ್‌ಎಲ್ ವಾಹನಗಳ ಹಂಚಿಕೆ ಮಾಡಿದ್ದಾರೆ. ತರಾತುರಿಯಲ್ಲಿ ವಾಹನ ಪೂಜೆ ಮಾಡಿ ವಾಹನಗಳನ್ನ ಹಂಚಿಕೆ ಮಾಡಿದ್ದಾರೆ. ಬಳಿಕ ಅವಸರದಲ್ಲೇ ಸಚಿವ ಕಾರಜೋಳ ಅವರು ಕೊಪ್ಪಳಕ್ಕೆ ತೆರಳಿದ್ದಾರೆ. ಯಲಬುರ್ಗಾದಲ್ಲಿ ಕೆರೆ ತುಂಬುವ ಯೋಜನೆಗೆ ಸಚಿವ ಗೋವಿಂದ ಕಾರಜೋಳ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇಂದು ಬೆಳಿಗ್ಗೆ 11.30ರ ಒಳಗೆ ಶಂಕುಸ್ಥಾಪನೆ ನೆರವೇರಿಸಬೇಕು ಎಂದು ಅರ್ಜಂಟಲ್ಲೇ ಕಾರಜೋಳ ಹೊರಡಿದ್ದಾರೆ.