ಬೆಂಗಳೂರು (ಅ.08):  ಸಿಬಿಐ ದಾಳಿ ಬೆನ್ನಲ್ಲೇ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಶಿರಾದ ಸ್ಪಟಿಕಪುರಿ ಮಹಾಸಂಸ್ಥಾನದ ನಂಜಾವಧೂತ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶಕರು ಹಾಗೂ ಸಂಘಟನೆಗಳ ನಾಯಕರು ಮಂಗಳವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರ ಸದಾಶಿವನ​ಗ​ರ ನಿವಾಸಕ್ಕೆ ಭೇಟಿ ನೀಡಿ ಚರ್ಚೆ ನಡೆಸಿದರು.

ಬೆಳಗ್ಗೆ ನಂಜಾವಧೂತ ಸ್ವಾಮೀಜಿ ಆಗಮಿಸಿ ಡಿ.ಕೆ. ಶಿವಕುಮಾರ್‌ ಅವರೊಂದಿಗೆ ಕೆಲ ಕಾಲ ಚರ್ಚೆ ನಡೆಸಿದರು. ಈ ವೇಳೆ, ಸಿಬಿಐ ದಾಳಿ ವಿಚಾರ ಪ್ರಸ್ತಾಪವಾಗಿದ್ದು, ‘ದಾಳಿ ಬಗ್ಗೆ ನನ್ನ ಆಕ್ಷೇಪವಿಲ್ಲ, ದಾಖಲೆಗಳಿವೆ ನೀಡುತ್ತೇನೆ. ಆದರೆ, ಉಪಚುನಾವಣೆ ಹಿನ್ನೆಲೆಯಲ್ಲಿ ನನ್ನನ್ನು ಮತ್ತೆ ಟಾರ್ಗೆಟ್‌ ಮಾಡಿ ದ್ವೇಷ ರಾಜಕಾರಣ ನಡೆಸಲಾಗುತ್ತಿದೆ. ದಾಳಿ ವೇಳೆ ಸಿಬಿಐ ಅಧಿಕಾರಿಗಳು ನನ್ನ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ’ ಎಂದ ಡಿ.ಕೆ.ಶಿವಕುಮಾರ್‌ ಬೇಸರ ವ್ಯಕ್ತಪಡಿಸಿದರು ಎನ್ನಲಾಗಿದೆ. ಅವರಿಗೆ ಧೈರ್ಯ ತುಂಬಿದ ಸ್ವಾಮೀಜಿ, ಈ ಕಷ್ಟಗಳನ್ನು ದಾಟಿದ ಮೇಲೆ ಎಲ್ಲವೂ ಸರಿಹೋಗುತ್ತದೆ ಎಂದು ಸಾಂತ್ವನ ಹೇಳಿದರು ಎಂದು ಮೂಲಗಳು ತಿಳಿಸಿವೆ.

RR ನಗರ ಬೈ ಎಲೆಕ್ಷನ್: ಟಿಕೆಟ್ ಘೋಷಣೆ ಬೆನ್ನಲ್ಲೇ ಪಣತೊಟ್ಟ ಕಾಂಗ್ರೆಸ್ ಅಭ್ಯರ್ಥಿ .

ರಾತ್ರಿ ನಿರ್ಮಲಾನಂದ ನಾಥ ಸ್ವಾಮೀಜಿ, ಸೌಮ್ಯನಾಥ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶಕರು ಹಾಗೂ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ, ಮಾಜಿ ಸಚಿವ ಚಲುವನಾರಾಯಣಸ್ವಾಮಿ ಮತ್ತಿತರ ನಾಯಕರು ಭೇಟಿ ನೀಡಿ ಡಿ.ಕೆ.ಶಿವಕುಮಾರ್‌ ಅವರಿಗೆ ಧೈರ್ಯ ತುಂಬಿದರು ಎಂದು ತಿಳಿದು ಬಂದಿದೆ.
 
ಜೋಶಿ ತಮ್ಮ ಮನೆ ಶುದ್ಧಿ ಮಾಡಿ​ಕೊ​ಳ್ಳ​ಲಿ: ಡಿಕೆ​ಶಿ

ಬೆಂಗ​ಳೂ​ರು: ‘ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರು ದೊಡ್ಡವರು, ಮೊದಲು ತಮ್ಮ ಮನೆ ಶುದ್ಧ ಮಾಡಿಕೊಳ್ಳಲಿ. ಅವರು ನನ್ನ ಆಸ್ತಿ ವಿಚಾರ ಕೇಳುವ ಮೊದಲು ತಮ್ಮ ಪಕ್ಷದ (ಬಿಜೆಪಿ) ನಾಯಕರ ಆಸ್ತಿ ಎಷ್ಟೆಷ್ಟಾಗಿದೆ ಎಂದು ಬಹಿರಂಗಪಡಿಸಲಿ’..

ಮುನಿ​ರ​ತ್ನ ಅನಗತ್ಯ ಕೇಸು ಹಾಕಿ​ಸಿ ಕಿರುಕುಳ: ಡಿಕೆಶಿ ಕಿಡಿ .

ಇದು, ತಾವು ಮೊದಲು ಶಾಸಕರಾದಾಗ ಆಸ್ತಿ ಎಷ್ಟಿತ್ತು, ಈಗ ಎಷ್ಟಾಗಿದೆ ಎಂದು ಬಹಿರಂಗಪಡಿಸಲಿ ಎಂದು ಆಗ್ರಹಿಸಿರುವ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ನೀಡಿರುವ ತಿರುಗೇಟು.

ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪ್ರಹ್ಲಾದ ಜೋಶಿ ಅವರು ದೊಡ್ಡವರು. ಮೊದಲು ತಮ್ಮ ಮನೆಯನ್ನು ಶುದ್ಧ ಮಾಡಿಕೊಳ್ಳಲಿ. ಅವರು ನನ್ನ ಆಸ್ತಿ ಮುಂಚೆ ಎಷ್ಟಿತ್ತು, ಈಗ ಎಷ್ಟಿದೆ ಎಂದು ಕೇಳುವ ಮುನ್ನ ತಮ್ಮ ಪಕ್ಷದ ನಾಯಕರ ಆಸ್ತಿ ವಿವರಗಳನ್ನು ಬಹಿರಂಗ ಪಡಿಸಲಿ ಎಂದರು.