Asianet Suvarna News Asianet Suvarna News

ದೇವದಾಸಿ ಪದ್ಧತಿ ನಿಯಂತ್ರಣ: ಕರ್ನಾಟಕಕ್ಕೆ NHRC ನೋಟಿಸ್‌

ದೇವದಾಸಿ ಪದ್ಧತಿ ನಿಗ್ರಹಕ್ಕೆ ಕೈಗೊಂಡಿರುವ ಕ್ರಮಗಳ ಬಗ್ಗೆ 6 ವಾರಗಳಲ್ಲಿ ವರದಿ ನೀಡಿ ಎಂದು ಸೂಚಿಸಿ ಕರ್ನಾಟಕ ಸೇರಿ 6 ರಾಜ್ಯಗಳು ಮತ್ತು ಕೇಂದ್ರ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದ ರಾಷ್ಟ್ರೀಯ ಮಾನವ ಹಕ್ಕು ಆಯೋಗ

NHRC Notice to Government of Karnataka For Control of Devadasi System grg
Author
First Published Oct 15, 2022, 12:00 PM IST

ನವದೆಹಲಿ(ಅ.15):  ದೇವದಾಸಿ ಪದ್ಧತಿ ನಿಷೇಧಿಸಿದ್ದರೂ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಈ ಪದ್ಧತಿ ಇನ್ನೂ ಜೀವಂತವಾಗಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ರಾಷ್ಟ್ರೀಯ ಮಾನವ ಹಕ್ಕು ಆಯೋಗ, ಈ ಪದ್ಧತಿ ನಿಗ್ರಹಕ್ಕೆ ಕೈಗೊಂಡಿರುವ ಕ್ರಮಗಳ ಬಗ್ಗೆ 6 ವಾರಗಳಲ್ಲಿ ವರದಿ ನೀಡಿ ಎಂದು ಸೂಚಿಸಿ ಕರ್ನಾಟಕ ಸೇರಿ 6 ರಾಜ್ಯಗಳು ಮತ್ತು ಕೇಂದ್ರ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದೆ.

ದೇವದಾಸಿ ಪದ್ದತಿ ಇನ್ನೂ ಸಹ ಜೀವಂತವಾಗಿದೆ ಎಂಬ ಮಾಧ್ಯಮಗಳ ವರದಿ ಆಧರಿಸಿ ಸ್ವಯಂ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಿದ ಮಾನವ ಹಕ್ಕುಗಳ ಆಯೋಗ, ‘ದೇವದಾಸಿ ಪದ್ದತಿಯನ್ನು ನಿರ್ಮೂಲನೆ ಮಾಡಲು ಹಲವು ಕಾನೂನು ಜಾರಿ ಮಾಡಿದ್ದರೂ. ಈಗಲೂ ಈ ಪದ್ದತಿ ಜಾರಿಯಲ್ಲಿದೆ. ಬಡ ಕುಟುಂಬಗಳಿಗೆ ಸೇರಿದ ಯುವತಿಯರು ಈ ಪದ್ದತಿಗೆ ಬಲಿಯಾಗುತ್ತಿದ್ದಾರೆ. 

ಹೆಣ್ಣು ಮಕ್ಕಳನ್ನು ದೇವದಾಸಿ ಮಾಡಿದಲ್ಲಿ ಕಠಿಣ ಕ್ರಮ

ಲೈಂಗಿಕವಾಗಿ ಕಿರುಕುಳಕ್ಕೊಳಗಾಗುತ್ತಿದ್ದಾರೆ. ವರದಿಗಳ ಪ್ರಕರಣ ಕರ್ನಾಟಕವೊಂದರಲ್ಲೇ 70000ಕ್ಕೂ ದೇವದಾಸಿಯರಿದ್ದಾರೆ. ಇನ್ನು ನ್ಯಾ.ರಘುನಾಥ್‌ ರಾವ್‌ ನೇತೃತ್ವದ ಸಮಿತಿ ಪ್ರಕಾರ ತೆಲಂಗಾಣ ಮತ್ತು ಆಂಧ್ರದಲ್ಲಿ ದೇವದಾಸಿಯರ ಪ್ರಮಾಣ 80000ಕ್ಕಿಂತ ಹೆಚ್ಚಿದೆ. ಹೀಗಾಗಿ ಇದರ ನಿಯಂತ್ರಣಕ್ಕೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ವಿಸ್ತಾರ ವರದಿ ಸಲ್ಲಿಸುವಂತೆ ಆಯೋಗ ಸೂಚಿಸಿದೆ.
 

Follow Us:
Download App:
  • android
  • ios