ಹುಬ್ಬಳ್ಳಿ[ಜ.04]: ಗೃಹ ಸಚಿವರೇ ನಿರಾಕರಿಸಿದ್ದರೂ ಅವರು ಸಾಗುವ ಮಾರ್ಗದಲ್ಲಿ ಝೀರೋ ಟ್ರಾಫಿಕ್‌ ಸೃಷ್ಟಿಸಿದ್ದ ಮೂವರು ಪೊಲೀಸ್‌ ಅಧಿಕಾರಿಗಳಿಗೆ ಹು-ಧಾ ಪೊಲೀಸ್‌ ಆಯುಕ್ತ ಎಂ.ಎನ್‌. ನಾಗರಾಜ್‌ ಗುರುವಾರ ಶೋಕಾಸ್‌ ನೋಟಿಸ್‌ ಜಾರಿ ಮಾಡಿದ್ದಾರೆ. ಬುಧವಾರ ಸಂಜೆ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ವಿಜಯಪುರಕ್ಕೆ ರಸ್ತೆ ಮೂಲಕ ಎಂ.ಬಿ.ಪಾಟೀಲ ಪ್ರಯಾಣ ಬೆಳೆಸಿದ್ದರು.

ಪ್ರಯಾಣಕ್ಕೂ ಮೊದಲೇ ಸಚಿವರು ಝೀರೋ ಟ್ರಾಫಿಕ್‌ ಸೃಷ್ಟಿಸದಂತೆ ಸೂಚನೆ ನೀಡಿದ್ದರು. ಆದರೆ, ನಗರದ ಗೋಕುಲ ರಸ್ತೆಯ ಬಸವೇಶ್ವರ ನಗರ ತಿರುವು ಮತ್ತು ದೇಸಾಯಿ ವೃತ್ತದ ರೈಲ್ವೆ ಬ್ರಿಡ್ಜ್‌ ಬಳಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿ ಎದುರಿಗೆ ಬರುವ ವಾಹನಗಳನ್ನು ನಿಲ್ಲಿಸಿ, ಗೃಹ ಸಚಿವರ ವಾಹನ ಕಳುಹಿಸಿಕೊಡಲಾಗಿತ್ತು.

ಈ ಹಿನ್ನೆಲೆಯಲ್ಲಿ ಎಸಿಪಿ ಎಂ.ವಿ. ನಾಗನೂರ, ಉತ್ತರ ಸಂಚಾರಿ ಠಾಣೆಯ ಇನ್‌ಸ್ಪೆಪೆಕ್ಟರ್‌ ಶ್ರೀಕಾಂತ ತೋಟಗಿ, ಪೂರ್ವ ಸಂಚಾರಿ ಠಾಣೆಯ ಇನ್‌ಸ್ಪೆಪೆಕ್ಟರ್‌ ಶ್ರೀಪಾದ ಜಲ್ದೆ ವಿರುದ್ಧ ಶೋಕಾಸ್‌ ನೋಟಿಸ್‌ ನೀಡಲಾಗಿದೆ.