Asianet Suvarna News Asianet Suvarna News

ಸಿಎಂ ಕುರ್ಚೀಲಿ ಕೂರುತ್ತಿದ್ದ ನಯನಾರನ್ನು ಎಬ್ಬಿಸಿದ ಡಿಕೆಶಿ

ಮುಖ್ಯಮಂತ್ರಿಗಳ ಆಸನದಲ್ಲಿ ಕುಳಿತುಕೊಳ್ಳಲು ಮುಂದಾದ ಕಾಂಗ್ರೆಸ್‌ ಸದಸ್ಯೆ ನಯನಾ ಮೋಟಮ್ಮ ಅವರನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಎಚ್ಚರಿಸಿ ಪಕ್ಕಕ್ಕೆ ಸರಿಯುವಂತೆ ಮಾಡಿದ ಘಟನೆ ನಡೆಯಿತು.

Nayana Motamma sitting on CMs chair DK Shivakumar reaction rav
Author
First Published Dec 8, 2023, 7:10 AM IST

ವಿಧಾನಸಭೆ (ಡಿ.8): ಮುಖ್ಯಮಂತ್ರಿಗಳ ಆಸನದಲ್ಲಿ ಕುಳಿತುಕೊಳ್ಳಲು ಮುಂದಾದ ಕಾಂಗ್ರೆಸ್‌ ಸದಸ್ಯೆ ನಯನಾ ಮೋಟಮ್ಮ ಅವರನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಎಚ್ಚರಿಸಿ ಪಕ್ಕಕ್ಕೆ ಸರಿಯುವಂತೆ ಮಾಡಿದ ಘಟನೆ ನಡೆಯಿತು.

ತೆಲಂಗಾಣದಿಂದ ಡಿ.ಕೆ.ಶಿವಕುಮಾರ್‌(DK Shivakumar) ಸದನಕ್ಕೆ ಆಗಮಿಸಿ ತಮ್ಮ ಆಸನದಲ್ಲಿ ಕುಳಿತುಕೊಂಡರು. ಈ ವೇಳೆ ಡಿ.ಕೆ.ಶಿವಕುಮಾರ್‌ ಅವರನ್ನು ಮಾತನಾಡಿಸಲು ಆಗಮಿಸಿದ ನಯನಾ ಮೋಟಮ್ಮ(Nayana motamma), ಆಯಾಚಿತವಾಗಿ ಮುಖ್ಯಮಂತ್ರಿಗಳ ಆಸನದಲ್ಲಿ ಕುಳಿತುಕೊಳ್ಳಲು ಮುಂದಾದರು. ಅದನ್ನು ಗಮನಿಸಿದ ಶಿವಕುಮಾರ್‌ ಅವರು, ಕೂಡಲೇ ನಯನಾ ಅವರ ಕೈ ಹಿಡಿದು ಅಲ್ಲಿ ಕೂರದಂತೆ ಕೂರದಂತೆ ತಿಳಿಸಿ ತಮ್ಮ ಬಲಭಾಗದಲ್ಲಿನ ಆಸನದಲ್ಲಿ ಕುಳಿತುಕೊಳ್ಳುವಂತೆ ಮಾಡಿದರು.

ತೆಲಂಗಾಣ ಸಿಎಂ ಆಯ್ಕೆ: 2ನೇ ದಿನವೂ ಡಿಕೆಶಿ, ಜಮೀರ್‌ ಸದನಕ್ಕೆ ಗೈರು

ಇಂದು ನನ್ನ ಕುರ್ಚಿ ಕಣಯ್ಯ ಎಂದಿದ್ದ ಸಿದ್ದು:

ಬೆಂಗಳೂರಿನಲ್ಲಿ ನಡೆದ ಆಂಬುಲೆನ್ಸ್ ಗೆ ಚಾಲನೆ ನೀಡುವ ಸಂದರ್ಭದಲ್ಲಿ ಹೀಗೆ ಸಿಎಂ ಕುರ್ಚಿ ಮೇಲೆ ಕೂಡಲು ಹೋಗಿದ್ದರು. ಈ ವೇಳೆ ಮುಖ್ಯಮಂತ್ರಿ ಅದು ನನ್ನ ಕುರ್ಚಿ ಕಣಯ್ಯ.. ಎಂದಿದ್ದರು. ಆಗ ಶಿವಕುಮಾರ್‌ ನಗುತ್ತಲೇ ಪಕ್ಕದ ಕುರ್ಚಿಗೆ ತೆರಳಿ ಕುಳಿತರು.  ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಗೆ ಮುಖ್ಯಮಂತ್ರಿ ಕುರ್ಚಿ ಮೇಲೆ ಕಣ್ಣಿದೆ ಎಂದು ಆಗಿಂದ್ದಾಗ ವರದಿ ಆಗುತ್ತಲೇ ಇರುತ್ತವೆ. ಇದಕ್ಕೆ ಪೂರಕವಾದ ಸ್ವಾರಸ್ಯಕರ ಪ್ರಸಂಗಗಳು ನಡೆಯುತ್ತಿರುತ್ತವೆ.

ಸ್ಪೀಕರ್‌ಗೆ ಎಲ್ಲರೂ ನಮಸ್ಕರಿಸ್ತಾರೆ ಎಂದಿದ್ರಲ್ಲಿ ತಪ್ಪೇನಿದೆ? ಹೇಳಿಕೆ ಸಮರ್ಥಿಸಿಕೊಂಡ ಸಚಿವ ಜಮೀರ್

Follow Us:
Download App:
  • android
  • ios