ಕನ್ನಡ ನಾಡಿಗೆ 10 ವರ್ಷಗಳ ಬಳಿಕ ಮತ್ತೆ ವಕ್ಕರಿಸಿದ ನಕ್ಸಲರಿಂದ ಪೊಲೀಸರ ಮೇಲೆ ಗುಂಡಿನ ದಾಳಿ
ಕೇರಳ ಕರ್ನಾಟಕ ಗಡಿಭಾಗ ಕೊಡಗು ಜಿಲ್ಲೆಯಲ್ಲಿ ನಕ್ಸಲರು ಬೀಡು ಬಿಟ್ಟಿದ್ದು, ಕರ್ನಾಟಕ ಪೊಲೀಸರು ಮತ್ತು ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆದಿದೆ.
ಕೊಡಗು (ನ.14): ಕನ್ನಡ ನಾಡಿನಲ್ಲಿ 10 ವರ್ಷಗಳಲ್ಲಿ ಕಂಡುಬರದ ನಕ್ಸಲರ ಹಾವಳಿ ಮತ್ತೆ ಮುನ್ನೆಲೆಗೆ ಬಂದಿದೆ. ಕೇರಳದಲ್ಲಿ ಸಕ್ರಿಯವಾಗಿದ್ದರೆನ್ನಲಾದ ನಕ್ಸಲರು ಕನ್ನಡ ನಾಡಿನ ಗಡಿನಾಡು ಕೊಡಗು ಭಾಗದಲ್ಲಿ ಬೀಡುಬಿಟ್ಟಿದೆ. ಕರ್ನಾಟಕದ ಗಡಿಯೊಳಗೆ ನುಸುಳಲು ಯತ್ನಿಸಿದ ನಕ್ಸಲರು ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.
ಕೊಡಗು ಕೇರಳ ಗಡಿಯಲ್ಲಿ ಪೊಲೀಸ್ ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ಕಾದಾಟದಲ್ಲಿ ಒಬ್ಬ ನಕ್ಸಲ್ ಗಾಯಗೊಂಡಿದ್ದಾನೆ. ಕೇರಳದ ವೈನಾಡು ಸಮೀಪ ಘಟನೆ ನಡೆದಿದೆ. ಕೇರಳದ ಕಾಡಿನಲ್ಲಿ ಬೀಡು ಬಿಟ್ಟಿರುವ ನಕ್ಸಲರು ಕರ್ನಾಟಕದ ಗಡಿಜಿಲ್ಲೆ ಕೊಡಗಿನೊಳಗೆ ನುಸುಳುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಕೊಡಗು ಪೊಲೀಸರು ಹೈ ಅಲರ್ಟ್ ಆಗಿದ್ದಾರೆ, ಕುಟ್ಟ ಚೆಕ್ ಪೋಸ್ಟ್ ಬಳಿ ಹೆಚ್ಚುವರಿ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿದೆ. ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಸ್ತತಃ ಇಂದು ಬೆಳಗ್ಗೆ ಕುಟ್ಟ ಚೆಕ್ ಪೋಸ್ಟ್‌ಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಬುಡಕಟ್ಟು ಜನರ ಸಬಲೀಕರಣಕ್ಕೆ 24000 ಕೋಟಿ ವೆಚ್ಚದ ಬೃಹತ್ ಯೋಜನೆಗೆ ನಾಳೆ ಪ್ರಧಾನಿ ಚಾಲನೆ
ಗುಂಡೇಟು ಬಿದ್ದ ನಕ್ಸಲ್ ಆಸ್ಪತ್ರೆಗೆ ಬಂದಲ್ಲಿ ಮಾಹಿತಿ ಕೊಡಿ: ಕುಟ್ಟ, ಪರಕಟಗೇರಿ, ಬಿರುನಾಣಿ, ತೆರಾಲು ಭಾಗದಲ್ಲಿ ನಾಕಾಬಂದಿ ಹಾಕಲಾಗಿದೆ. ಈ ಸ್ಥಳದಲ್ಲಿ ವಿರಾಜಪೇಟೆ ಡಿವೈಎಸ್ಪಿ ಮತ್ತು ತಂಡ ಮೊಕ್ಕಾಂ ಹೂಡಿದ್ದಾರೆ. ಈ ಸ್ಥಳದಲ್ಲಿ ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದಲ್ಲಿ ಮಾಹಿತಿ ನೀಡುವಂತೆ ಜಿಲ್ಲಾ ಪೊಲೀಸ್‌ವರಿಷ್ಠಾಧಿಕಾರಿಗಳು ಸೂಚನೆ ನೀಡಿದ್ದಾರೆ. ಇನ್ನು ಗಾಯಗೊಂಡಿರುವ ನಕ್ಸಲ್ ವ್ಯಕ್ತಿ ಮೆಡಿಕಲ್ ಶಾಪ್ ಅಥವಾ ಆಸ್ಪತ್ರೆಗೆ ಬರುವ ಸಾಧ್ಯತೆಯಿದೆ. ಈ ಬಗ್ಗೆಯೂ ಮಾಹಿತಿ ನೀಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಸೂಚನೆ ನೀಡಿದ್ದಾರೆ.
3 ವರ್ಷಗಳಿಂದ ಪೂರ್ಣಗೊಳ್ಳದ ಬೆಂಡೆಬೆಟ್ಟ ಗಿರಿಜನ ಮನೆಗಳ ಕಾಮಗಾರಿ: ಕೊಡಗು (ನ.14): ಇಂದಿಗೂ ಗುಡಿಸಲು, ಶೆಡ್ಗಳಲ್ಲಿ ಬದುಕುವ ಬುಡಕಟ್ಟು ಆದಿವಾಸಿಗಳ ಜನರಿಗೆ ವಸತಿ ಕಲ್ಪಿಸುವುದಕ್ಕಾಗಿ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿ ಮಾಡಿದೆ. ಆದರೆ ಅವುಗಳನ್ನು ಕಟ್ಟುನಿಟ್ಟಾಗಿ ಕಾರ್ಯಗತಗೊಳಿಸಬೇಕಾಗಿರುವ ಅಧಿಕಾರಿಗಳ ಎಡವಟ್ಟಿನಿಂದಾಗಿ ಆದಿವಾಸಿಗಳು ಶೆಡ್ಡಿಯನಲ್ಲಿಯೇ ಬದುಕುತ್ತಿದ್ದಾರೆ. ಇಟ್ಟಿಗೆಯಿಂದ ಗೋಡೆ ಕಟ್ಟಿ ಅಷ್ಟಕ್ಕೆ ಕೆಲಸ ಸ್ಥಗಿತವಾಗಿರುವ ಮನೆಗಳು. ಸಾರಣೆಯೂ ಇಲ್ಲ, ಫ್ಲೋರಿಂಗೂ ಇಲ್ಲ. ಕಿಟಕಿ, ಬಾಗಿಲುಗಳೂ ಇಲ್ಲ. ಇದು ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ ಬೆಂಡೆಬೆಟ್ಟ ಗಿರಿಜನ ಹಾಡಿಯಲ್ಲಿನ ಆದಿವಾಸಿ ಬುಡಕಟ್ಟು ಜನರ ಪರಿಸ್ಥಿತಿ.
ಹೌದು ಬುಡಕಟ್ಟು ಆದಿವಾಸಿ ಕುಟುಂಬಗಳ ಅಭಿವೃದ್ಧಿಗಾಗಿ ಸರ್ಕಾರವೇನೋ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ ಅವುಗಳನ್ನು ಕಾರ್ಯಗತಗೊಳಿಸಬೇಕಾಗಿರುವ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಮನೆಗಳ ಬಿಲ್ಲು ಯಾವುದೋ ಗುತ್ತಿಗೆದಾರನ ಪಾಲಾಗಿದೆ. 50 ಕ್ಕೂ ಹೆಚ್ಚು ಕುಟುಂಬಗಳು ಇರುವ ಬೆಂಡೆಬೆಟ್ಟ ಹಾಡಿಯಲ್ಲಿ ಮೂರು ವರ್ಷಗಳ ಹಿಂದೆ ಮನೆಗಳನ್ನು ನಿರ್ಮಿಸಿಕೊಳ್ಳಲು 18 ಕುಟುಂಬಗಳಿಗೆ ಮಂಜೂರು ಮಾಡಲಾಗಿತ್ತು. ಈ ವೇಳೆ ಚಂದ್ರ ಎನ್ನುವ ವ್ಯಕ್ತಿಯೊಬ್ಬರು ತಾನು ಮನೆ ನಿರ್ಮಿಸಿ ಕೊಡುವುದಾಗಿ ಹೇಳಿ ಎಲ್ಲರ ಮೆನಗಳ ಕಾಮಗಾರಿಯನ್ನು ಗುತ್ತಿಗೆ ಪಡೆದಿದ್ದರು. 18 ಮನೆಗಳ ತಳಪಾಯ ಮಾಡಿ ಗೋಡೆಗಳನ್ನು ಕಟ್ಟಿ ಛಾವಣಿಯನ್ನು ಹೊದಿಸಿದ್ದಾರೆ ಅಷ್ಟೇ.
ಈಶ್ವರ ದೇವಾಲಯ ಆವರಣದಲ್ಲಿ ನಿಧಿ ಪತ್ತೆ: ಸರ್ಕಾರದ ಪಾಲಾದ ಚಿನ್ನದ ನಾಣ್ಯ, ಸರ, ಮಾಲೆಗಳು
ಆದರೆ ಅವುಗಳಿಗೆ ಕಿಟಿಕಿ ಬಾಗಿಲುಗಳಿಲ್ಲ, ಸಾರಣೆ ಮಾಡಿಲ್ಲ. ಎಲ್ಲವನ್ನೂ ಹಾಗೆಯೇ ಬಿಡಲಾಗಿದೆ. ತಳಪಾಯ ಮಾಡಿದಾಗ ಒಂದು ಬಿಲ್ಲು, ಗೋಡೆಕಟ್ಟಿ ಛಾವಣಿ ಹೊದಿಸಿದಾಗ ಒಂದು ಬಿಲ್ಲು ಬಿಡುಗಡೆ ಮಾಡಲಾಗಿದ್ದು, ಆ ಹಣವನ್ನು ಗುತ್ತಿಗೆದಾರನಿಗೆ ಕೊಡಲಾಗಿದೆ. ಇನ್ನು ಸಾರಣೆ ಮಾಡಿದರೆ ಮಾತ್ರವೇ ಮೂರನೇ ಬಿಲ್ಲು ಬಿಡುಗಡೆಯಾಗುವುದಕ್ಕೆ ಸಾಧ್ಯ. ಆದರೆ ಗುತ್ತಿಗೆದಾರ ಕೆಲಸ ಮಾಡುತ್ತಿಲ್ಲ. ಕೆಲಸ ಮಾಡದೆ ಇಲಾಖೆ ಬಿಲ್ಲನ್ನು ಬಿಡುಗಡೆ ಮಾಡುವಂತಿಲ್ಲ. ಹೀಗಾಗಿ ಗಿರಿಜನ ಕುಟುಂಬಗಳಿಗೆ ಲೆಕ್ಕಕ್ಕೆ ಮನೆ ನಿರ್ಮಿಸಿಕೊಡಲಾಗಿದ್ದು ಅವುಗಳಲ್ಲಿ ಅವರು ನೆಮ್ಮದಿಯಿಂದ ಬದಕಲು ಅವಕಾಶ ಇಲ್ಲದಂತೆ ಆಗಿದೆ.