Asianet Suvarna News Asianet Suvarna News

ವಿವಾದಾತ್ಮಕ ಪೋಸ್ಟ್‌: ಆರೋಪಿ ನವೀನ್‌ 5 ದಿನ ಸಿಸಿಬಿ ವಶಕ್ಕೆ

ಫೇಸ್‌ಬುಕ್‌ನಲ್ಲಿ ನವೀನ್‌ ವಿವಾದಾತ್ಮಕ ಪೋಸ್ಟ್‌| ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿಯಲ್ಲಿ ಗಲಭೆಗೆ ಕಾರಣವಾದ ವಿವಾದಾತ್ಮಕ ಪೋಸ್ಟ್‌|ನವೀನ್‌ ಯಾವ ಪಕ್ಷದಲ್ಲಿದ್ದ ಎಂಬ ಬಗ್ಗೆ ತೀವ್ರ ಚರ್ಚೆ| ನವೀನ್‌ ಬಗ್ಗೆ ಕಾಂಗ್ರೆಸ್‌ ಹಾಗೂ ಬಿಜೆಪಿ ಪಕ್ಷಗಳು ಪರಸ್ಪರ ಟೀಕೆ| 

Naveen 5 Days CCB Detained for Controversial Post on Social Media
Author
Bengaluru, First Published Aug 14, 2020, 7:45 AM IST

ಬೆಂಗಳೂರು(ಆ.14): ಫೇಸ್‌ಬುಕ್‌ನಲ್ಲಿ ಇಸ್ಲಾಂ ಧರ್ಮಗುರು ಮಹಮ್ಮದ್‌ ಪೈಗಂಬರ್‌ ಕುರಿತು ಅವಹೇಳನಕಾರಿ ಪೋಸ್ಟ್‌ ಹಾಕಿದ ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ಸಲುವಾಗಿ ಆರೋಪಿ ನವೀನ್‌ನನ್ನು ಸಿಸಿಬಿ ಐದು ದಿನಗಳ ಕಾಲ ವಶಕ್ಕೆ ಪಡೆದಿದೆ.

"

ಫೇಸ್‌ಬುಕ್‌ನಲ್ಲಿ ನವೀನ್‌ ವಿವಾದಾತ್ಮಕ ಪೋಸ್ಟ್‌ ಹಾಕಿದ ಹಿನ್ನೆಲೆಯಲ್ಲಿ ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿಯಲ್ಲಿ ಗಲಭೆಗೆ ಕಾರಣವಾಗಿತ್ತು. ಮಂಗಳವಾರ ರಾತ್ರಿ ಸಿಸಿಬಿ ಅಧಿಕಾರಿಗಳು ಆರೋಪಿಯನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಹೆಚ್ಚಿನ ತನಿಖೆ ಸಲುವಾಗಿ ವಶಕ್ಕೆ ಪಡೆದಿದ್ದಾರೆ.

ಬೆಂಗಳೂರು ಗಲಭೆ ಪ್ರಕರಣದಲ್ಲಿ ಬಿಗ್ ಟ್ವಿಸ್ಟ್: ನವೀನ್ ಹತ್ಯೆಗೆ ಸಂಚು?

ತನ್ನದೇ ಸ್ಥಾನಮಾನಕ್ಕೆ ಯತ್ನ:

ಹಲವು ದಿನಗಳಿಂದಲೂ ಸಾಮಾಜಿಕ ಜಾಲತಾಣಗಳಲ್ಲಿ ಶಾಂತಿ ಕದಡುವ ರೀತಿಯ ಪೋಸ್ಟ್‌ಗಳನ್ನು ನವೀನ್‌ ಹಾಕುತ್ತಿದ್ದ. ಇತ್ತೀಚಿಗೆ ತಮ್ಮ ಸೋದರ ಮಾವ, ಪುಲಿಕೇಶಿ ನಗರದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರೊಂದಿಗೆ ದೂರವಾಗಿದ್ದ ನವೀನ್‌, ತನ್ನದೇ ರಾಜಕೀಯ ಸ್ಥಾನ ಪಡೆಯಲು ಯತ್ನಿಸಿದ್ದ ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ನವೀನ್‌ ಯಾವ ಪಕ್ಷದಲ್ಲಿದ್ದ ಎಂಬ ಬಗ್ಗೆ ತೀವ್ರ ಚರ್ಚೆ ಉಂಟಾಗಿದೆ. ಆತನ ಬಗ್ಗೆ ಕಾಂಗ್ರೆಸ್‌ ಹಾಗೂ ಬಿಜೆಪಿ ಪಕ್ಷಗಳು ಪರಸ್ಪರ ಟೀಕೆ ಮಾಡಿವೆ.
 

Follow Us:
Download App:
  • android
  • ios