*   ಸಾಂಸ್ಥಿಕ ಸಾಮಾಜಿಕ ಹೊಣೆಯಡಿ ಕುಮುದ್ವತಿ ನದಿ ಪುನಶ್ಚೇತನ ಮಾಡಿದ್ದಕ್ಕೆ ಗರಿ*  ಪ್ರಶಸ್ತಿ ಪ್ರದಾನ ಮಾಡಿದ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್‌ ಶೆಖಾವತ್‌ *  ಬೆಂಗಳೂರಿನ ಕುಮುದ್ವತಿ ನದಿ ಪುನಶ್ಚೇತನ ಕಾರ್ಯ ಮಾಡಿದ ಎಚ್‌ಎಎಲ್‌

ಬೆಂಗಳೂರು(ಏ.08):  ತನ್ನ ಸಾಂಸ್ಥಿಕ ಸಾಮಾಜಿಕ ಹೊಣೆ(CSR) ನಿಧಿ ಅಡಿ ಬೆಂಗಳೂರಿನ ಕುಮುದ್ವತಿ ನದಿ ಪುನಶ್ಚೇತನ ಕಾರ್ಯ ಮಾಡಿದ ಎಚ್‌ಎಎಲ್‌ ‘ರಾಷ್ಟ್ರೀಯ ಜಲ ಪ್ರಶಸ್ತಿ’ಗೆ(National Water Award)ಭಾಜನವಾಗಿದೆ.
ಜಲ ಶಕ್ತಿ ಸಚಿವಾಲಯ, ಜಲ ಸಂಪನ್ಮೂಲ ಇಲಾಖೆ, ನದಿ ಅಭಿವೃದ್ಧಿ ಮತ್ತು ಗಂಗಾ ಪುನಶ್ಚೇತನ ಸಂಸ್ಥೆ ಸ್ಥಾಪಿಸಿರುವ ಈ ಪ್ರಶಸ್ತಿಯನ್ನು ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್‌ ಶೆಖಾವತ್‌(Gajendra Singh Shekhawat) ಅವರು ಎಚ್‌ಎಎಲ್‌ನ ಪರವಾಗಿ ಆಗಮಿಸಿದ್ದ ಮಾನವ ಸಂಪನ್ಮೂಲ ವಿಭಾಗದ ಅಲೋಕ್‌ ವರ್ಮಾ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ಕುಮುದ್ವತಿ ನದಿಯನ್ನು(Kumudwati River) ಪುನರುಜ್ಜೀವನಗೊಳಿಸಲು ಆರ್ಚ್‌ ಆಫ್‌ ಲಿವಿಂಗ್‌ನ ಸಹ ಸಂಸ್ಥೆ ‘ಮಾನವ ಮೌಲ್ಯಗಳ ಅಂತಾರಾಷ್ಟ್ರೀಯ ಒಕ್ಕೂಟ’ದೊಂದಿಗೆ ಎಚ್‌ಎಎಲ್‌ 2015ರಲ್ಲಿ ಕೈಜೋಡಿಸಿತ್ತು.
ಕುಮುದ್ವತಿ ನದಿ ಪಾತ್ರದಲ್ಲಿ ಬರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವ್ಯಾಪ್ತಿಯ ತಾವರೆಕೆರೆ, ತ್ಯಾಮಗೊಂಡ್ಲು, ಮೊಂಡಿಗೆರೆ, ತೆಪ್ಪದಬೇಗೂರುಗಳಲ್ಲಿ ನಾಲ್ಕು ಜಲಾಶಯಗಳನ್ನು ನಿರ್ಮಿಸಲಾಗಿದೆ. 36 ಕೊಳವೆಬಾವಿ, 281 ಬಾವಿಗಳನ್ನು ಪುನರುಜ್ಜೀವನಗೊಳಿಸಲಾಗಿದೆ. 50 ಕೊಳಗಳನ್ನು ನಿರ್ಮಿಸಲಾಗಿದೆ. 281 ಬೋಲ್ಡರ್‌ ಚೆಕ್‌ಗಳನ್ನು ರಚಿಸಲಾಗಿದೆ. ಇದರಿಂದ 35 ಗ್ರಾಮಗಳಿಗೆ ಪ್ರಯೋಜನವಾಗಿದೆ. ಆಲ, ಬೇವು, ಮಾವು, ಅರಳಿ ಸೇರಿದಂತೆ ವಿವಿಧ ಜಾತಿಯ 5 ಸಾವಿರ ಗಿಡಗಳನ್ನು ನದಿ ಪಾತ್ರದಲ್ಲಿ ನೆಡಲಾಗಿದೆ. ಇವೆಲ್ಲವನ್ನು ಸ್ಥಳೀಯ ಗ್ರಾಮ ಪಂಚಾಯತಿಗಳಿಗೆ ಹಸ್ತಾಂತರಿಸಲಾಗಿದೆ ಎಂದು ಎಚ್‌ಎಎಲ್‌ ಅಧಿಕಾರಿಗಳು ತಿಳಿಸಿದ್ದಾರೆ.

HAL: ಕೊರೋನಾ ಸಂಕಷ್ಟದ ಮಧ್ಯೆಯೂ ಎಚ್‌ಎಎಲ್‌ಗೆ ದಾಖಲೆಯ 24000 ಕೋಟಿ ಆದಾಯ

ಎಚ್‌ಎಎಲ್‌ ತನ್ನ ವ್ಯಾಪ್ತಿಯಲ್ಲಿ ಸಮಾಜದ ಅಭಿವೃದ್ಧಿಗೆ ಪೂರಕವಾಗಿ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಕುಮುದ್ವತಿ ನದಿ ಪುನಶ್ಚೇತನ ಯೋಜನೆಯು ಸಿಎಸ್‌ಆರ್‌ ನಿಧಿಯನ್ನು ಪರಿಸರದಲ್ಲಿ ಧನಾತ್ಮಕ ಬದಲಾವಣೆ ತರಲು ಯಾವ ರೀತಿ ಬಳಸಬಹುದು ಎಂಬುದಕ್ಕೆ ಅತ್ಯುತ್ತಮ ಉದಾಹರಣೆ ಎಂದು ಅಲೋಕ್‌ ವರ್ಮಾ ಹೇಳಿದ್ದಾರೆ.

ಮಳೆ ನೀರು ಸಂರಕ್ಷಣೆ: ತುಮಕೂರರಿನ ಎಲೆರಾಂಪುರ ಗ್ರಾ.ಪಂ ದಕ್ಷಿಣ ಭಾರತಕ್ಕೇ ನಂಬರ್‌ 1..!

ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ಕೋಳಾಲ ಹೋಬಳಿ ವ್ಯಾಪ್ತಿಯ ಎಲೆರಾಂಪುರ ಗ್ರಾಮ ಪಂಚಾಯಿತಿಗೆ ಕೇಂದ್ರ ಸರ್ಕಾರದ(Central Government) 'ಉತ್ತಮ ಪಂಚಾಯಿತಿ ಪುರಸ್ಕಾರ'(Good Panchayat Award) ಲಭಿಸಿದೆ. 

HAL HJT: ಗಿರಿಗಿಟ್ಲೆ ಪರೀಕ್ಷೆಯಲ್ಲಿ ಎಚ್‌ಎಎಲ್‌ ನಿರ್ಮಿತ ಐಜೆಟಿ ವಿಮಾನ ಪಾಸ್‌!

ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಾಲ್ಲೂಕಿನ ಡಿ.ನಾಗೇನಹಳ್ಳಿ ಗ್ರಾಮವನ್ನು 2010 ರಲ್ಲಿ ಹಿರೇಹಳ್ಳಿ ಕೃಷಿ ವಿಜ್ಞಾನ ಕೇಂದ್ರ ಸಹಯೋಗದಲ್ಲಿ ಕೇಂದ್ರ ಸರ್ಕಾರದ ನಿಕ್ರಾ ಯೋಜನೆಯಡಿ ಅಂತರ್ಜಲ ವೃದ್ಧಿಗೆ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಇದರ ಫಲವಾಗಿ ಈ ಭಾಗದಲ್ಲಿ ಅಂತರ್ಜಲ ಮಟ್ಟ ವೃದ್ಧಿಗೊಂಡ ಕಾರಣದಿಂದಾಗಿ ಗ್ರಾಮಕ್ಕೆ ರಾಷ್ಟ್ರೀಯ ನೀರು ಅಭಿವೃದ್ಧಿ ಪ್ರಶಸ್ತಿ' ಲಭಿಸಿದೆ .

400 ಹೆಕ್ಟೇರ್‌ ಪ್ರದೇಶದಲ್ಲಿ ಅಂತರ್ಜಲ ಮರುಪೂರ್ಣ.

ಗ್ರಾಮದ(Village) ಸುಮಾರು 400 ಹೆಕ್ಟೇರ್ ಭೂ ಪ್ರದೇಶದಲ್ಲಿ 85 ಕೃಷಿ ಹೊಂಡ, 5 ಚೆಕ್ ಡ್ಯಾಂ, 8 ಹಳೇ ಚೆಕ್‌ ಡ್ಯಾಂ ಸೇರಿದಂತೆ ಕೆರೆ ಅಭಿವೃದ್ಧಿ ಹಾಗೂ ತಿರುವು ಗಾಲುವೆ ಮೂಲಕ ಸಂಗ್ರಹಣೆ ನೀರು ಮಾಡಲಾಗಿದೆ. ಬರ ನಿರೋಧಕ ಒಣಬೇಸಾಯ ಹಾಗೂ ಮಳೆ ನೀರಿನಲ್ಲಿ ತೋಟಗಾರಿಕೆಗೆ ಬೆಳೆಗಳಿಗೆ ಒತ್ತು ನೀಡಲಾಗಿದೆ. ರಾಗಿ, ತೊಗರಿ ಹೀಗೆ ಕಡಿಮೆ ನೀರು ಕೇಳುವ ಬೆಳೆಗಳನ್ನು ಡಿ ನಾಗೇನಹಳ್ಳಿ ಸುತ್ತಾಮುತ್ತ ಬೆಳೆಯಲಾಗಿದೆ. ಎಲೆರಾಂಪುರ ಗ್ರಾಮ ಪಂಚಾಯಿತಿ ಹಾಗೂ ಹಿರೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದ(Center for Agricultural Sciences) ಸಹಯೋಗದಲ್ಲಿ ಡಿ.ನಾಗೇನಹಳ್ಳಿಯಲ್ಲಿ ಗ್ರಾಮದಲ್ಲಿ ಈ ಪ್ರಯೋಗ ಮಾಡಲಾಗಿದೆ.