ಬದುಕಿದ್ದಾಗ ಲಕ್ಷಾಂತರ ಜನರಿಗೆ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿ ಅಂಧಕಾರವನ್ನ ಕಳೆದು ಬೆಳಕು ನೀಡಿದ್ದ ಖ್ಯಾತ ವೈದ್ಯ ಭುಜಂಗಶೆಟ್ಟಿ. ಮೃತಪಟ್ಟ ಬಳಿಕವೂ ತಮ್ಮ ಕಣ್ಣುಗಳನ್ನು ದಾನ ಮಾಡುವ ಮೂಲಕ ಅಂಧರ ಬಾಳಿಗೆ ಬೆಳಕು ನೀಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

ಬೆಂಗಳೂರು (ಮೇ.20) : ದೇಶದ ಖ್ಯಾತ ನೇತ್ರ ತಜ್ಞರಾಗಿ ಡಾ.ಭುಜಂಗಶೆಟ್ಟಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 69 ವಯಸ್ಸಾಗಿತ್ತು. ನಿನ್ನೆ ರೋಗಿಗಳಿಗೆ ಚಿಕಿತ್ಸೆ ನೀಡಿ ಮನೆಗೆ ವಾಪಸ್ಸಾಗಿದ್ದ ಭುಜಂಗಶೆಟ್ಟಿ.. ಈ ವೇಳೆ ಮನೆಯಲ್ಲಿ ತೀವ್ರ ಹೃದಯಾಘಾತ ಉಂಟಾಗಿತ್ತು. ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. 

ಸಾವಿನಲ್ಲೂ ಸಾರ್ಥಕ ಮೆರೆದ ವೈದ್ಯರು. 

ವೈದ್ಯಕೀಯ ಜಗತ್ತಿನಲ್ಲಿ ನೇತ್ರದಾನದ ಕ್ರಾಂತಿ ಮಾಡಿದ್ದ ಡಾ.ಭುಜಂಗಶೆಟ್ಟಿ.ಬದುಕಿದ್ದಾಗ ಲಕ್ಷಾಂತರ ಜನರಿಗೆ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿ ಅಂಧಕಾರವನ್ನ ಕಳೆದು ಬೆಳಕು ನೀಡಿದ್ದ ಖ್ಯಾತ ವೈದ್ಯ ಭುಜಂಗಶೆಟ್ಟಿ. ತಾವು ಮೃತಪಟ್ಟ ಮೇಲೆ ಕಣ್ಣು ದಾನ ಮಾಡಲು ಬಯಸಿದ್ದರು. ಅವರ ಇಚ್ಛೆಯಂತೆಯೇ ನಿನ್ನೆ ತಡರಾತ್ರಿ ಡಾ. ರಾಜಕುಮಾರ್ ಕಣ್ಣಿನ ಬ್ಯಾಂಕ್ ಗೆ ನೇತ್ರದಾನ ಮಾಡಿ ಅಂಧರ ಬಾಳಿಗೆ ಬೆಳಕಾಗುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

ಭುಜಂಗ ಶೆಟ್ಟಿ ದೇಶದ ಖ್ಯಾತ ನೇತ್ರ ತಜ್ಞರಾಗಿದ್ದರು. ನಾರಾಯಣ ನೇತ್ರಾಲಯವನ್ನು ಕರ್ನಾಟಕದ ಅತಿದೊಡ್ಡ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯಾಗಿ ಬೆಳೆಸಿದ ಕೀರ್ತಿ ಅವರದ್ದು. ಕಣ್ಣಿನ ಪೊರೆ ಮತ್ತು ಫಾಕೋಎಮಲ್ಸಿಫಿಕೇಶನ್ ಶಸ್ತ್ರಚಿಕಿತ್ಸೆಯಲ್ಲಿ ನೈಪುಣ್ಯತೆ ಹೊಂದಿದ್ದರು. ನಿನ್ನೆವರೆಗೆ ರೋಗಿಗಳ ಸೇವೆ ಮಾಡುತ್ತಾ ಲವಲವಿಕೆಯಿಂದ ಓಡಾಡಿಕೊಂಡಿದ್ದರು. ಬಂದ ರೋಗಿಗಳನ್ನು ವಿಚಾರಿಸಿ ಚಿಕಿತ್ಸೆ ನೀಡಿ ಮನೆಗೆ ಹೋಗಿದ್ದರು. ಸಂಜೆ 7:30 ರ ವೇಳೆಗೆ ಹೃದಯಾಘಾತವಾಗಿದೆ ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.